ಶಿವಮೊಗ್ಗ ಜಿಲ್ಲೆಯಾದ್ಯಂತ ಅನೇಕ ಲೇಡಿಸ್ ಬ್ಯೂಟಿ ಪಾರ್ಲರ್‌ಗಳು ಕೊರೋನಾ ಹೊಡೆತಕ್ಕೆ ನೆಲಕಚ್ಚಿವೆ. ಲಾಕ್‌ಡೌನ್‌ನಿಂದಾಗಿ ಬ್ಯೂಟಿ ಪಾರ್ಲರ್ ಮಾಲೀಕರು ಹಾಗೂ ವನಿತೆಯರು ಪರದಾಡುವಂತಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.13): ವನಿತೆಯರ ಸೌಂದರ್ಯ ದುಪ್ಪಟ್ಟು ಪಡಿಸುವಲ್ಲಿ ಲೇಡಿಸ್ ಬ್ಯೂಟಿ ಪಾರ್ಲರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಲಾಕ್‌ಡೌನ್‌ನಿಂದಾಗಿ ಬ್ಯೂಟಿ ಪಾರ್ಲರ್ ಮಾಲೀಕರು ಹಾಗೂ ವನಿತೆಯರು ಪರದಾಡುವಂತಾಗಿದೆ.
ಜಿಲ್ಲೆಯಾದ್ಯಂತ ಅನೇಕ ಲೇಡಿಸ್ ಬ್ಯೂಟಿ ಪಾರ್ಲರ್‌ಗಳು ತಲೆ ಎತ್ತಿವೆ. ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಬಾಡಿಗೆ ಅಂಗಡಿಗಳನ್ನು ಪಡೆದು ಅನೇಕರು ಪಾರ್ಲರ್‌ಗಳನ್ನು ನಡೆಸುತ್ತಿದ್ದಾರೆ. ಮಹಿಳೆಯರು ಹಾಗೂ ಯುವತಿಯರು ತಿಂಗಳಿಗೆ ಒಂದು ಸಾರಿಯಾದರೂ ಈ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡಿ, ಐಬ್ರೊ, ಫೇಷಿಯಲ್, ಹೇರ್‌ಕಟ್, ಹೇರ್‌ಸ್ಪಾ, ಪೆಡಿಕ್ಯೂರ್, ಮೆನಿಕ್ಯೂರ್, ಕ್ಲಿನಪ್, ವ್ಯಾಕ್ಸಿಂಗ್, ಬ್ಲೀಚಿಂಗ್ ಸೇರಿದಂತೆ ವಿವಿಧ ಬಗೆಯ ಸ್ಟೈಲಿಷ್‌ಗಳನ್ನು ಮಾಡಿಸಿಕೊಂಡು ತಮ್ಮ ಸೌಂದರ್ಯ ಮತ್ತಷ್ಟುಹೆಚ್ಚಿಸಿಕೊಳ್ಳುತ್ತಾರೆ.
ಆದರೆ ಲಾಕ್‌ಡೌನ್‌ನಿಂದಾಗಿ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಲಾಕ್‌ಡೌನ್ ಸಡಿಲವಾದರೂ ಸಹ ಮಹಿಳೆಯರು ಯುವತಿಯರು ಮೊದಲಿನಂತೆ ಬ್ಯೂಟಿ ಪಾರ್ಲರ್‌ಗಳತ್ತ ಮುಖ ಮಾಡುತ್ತಿಲ್ಲ. ಇದರಿಂದಾಗಿ ಗ್ರಾಹಕರು ಇಲ್ಲದೆ, ಕೆಲಸವೂ ಇಲ್ಲದೆ, ಬಾಡಿಗೆ ಕಟ್ಟುವುದೇ ಬ್ಯೂಟಿ ಪಾರ್ಲರ್ ಮಾಲೀಕರಿಗೆ ತಲೆನೋವಾಗಿದೆ.
ಆರ್ಥಿಕ ಪ್ಯಾಕೇಜ್: ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸುದ್ದಿಗೋಷ್ಠಿ!
ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬಗಳು ಸೇರಿದಂತೆ ವಿವಿಧ ಸಮಾರಂಭಗಳು ಬಂದರೆ ಸಾಕು ಮಹಿಳೆಯರು ಹಾಗೂ ಯುವತಿಯರು ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡಿ, ಮೇಕಪ್ ಮಾಡಿಸಿಕೊಂಡು ಸಮಾರಂಭಗಳಲ್ಲಿ ಮಿಂಚುತ್ತಿದ್ದರು. ಇದರಿಂದಾಗಿ ವ್ಯಾಪಾರ ವಹಿವಾಟು ಸಹ ಹೆಚ್ಚಾಗಿ ನಡೆಯುತ್ತಿತ್ತು. ಆದರೆ ಕೊರೋನಾ ವೈರಸ್ ಎಲ್ಲಾ ಕ್ಷೇತ್ರದ ಮೇಲು ಅಟ್ಟಹಾಸ ಮೆರೆದಿದ್ದು ಇದರಿಂದ ಬ್ಯೂಟಿ ಪಾರ್ಲರ್‌ಗಳೂ ಸಹ ಹೊರತಾಗಿಲ್ಲ. ಕೊರೋನಾ ವೈರಸ್‌ನ ಭಯದಿಂದ ಹೊರಗಡೆ ಬರಲು ಹೆದರುತ್ತಿರುವ ಕಾರಣ ಮಹಿಳೆಯರು ಹಾಗೂ ಯುವತಿಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲೆ ವಿವಿಧ ಪ್ರಯೋಗಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಸೌಂದರ್ಯ ಕಾಪಾಡಿ ಕೊಳ್ಳುತ್ತಿದ್ದಾರೆ.
ಕೊರೋನಾ ವೈರಸ್‌ನಿಂದಾಗಿ ಸಾಮಾಜಿಕ ಅಂತರ ಕಾಪಾಡಬೇಕಿರುವ ಹಿನ್ನೆಲೆ ಮಹಿಳೆಯರು ಪಾರ್ಲರ್‌ಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿಯೇ ಪಾರ್ಲರ್‌ಗಳನ್ನು ನಡೆಸುವ ಮಾಲೀಕರು ನಷ್ಟದಲ್ಲಿದ್ದಾರೆ. ಅಲ್ಲದೆ ಪಾರ್ಲರ್‌ಗಳ ಬಾಡಿಗೆಯನ್ನು ಕಟ್ಟುವುದಕ್ಕೂ ಪರದಾಡುತ್ತಿದ್ದಾರೆ.
ವಯಸ್ಸನ್ನು ನಿಲ್ಲಿಸೋ ಮನೆಮದ್ದು, ಸಿಂಪಲ್ ಇದೆ ಟ್ರೈ ಮಾಡಿ
ಈ ಸೀಜನ್‌ನಲ್ಲಿ ಸಮಾರಂಭಗಳು ಹೆಚ್ಚಾಗಿ ನಡೆಯುವುದರಿಂದ ನಮಗೂ ಸಹ ಹೆಚ್ಚಿನ ಆದಾಯ ಸಿಗುತ್ತಿತ್ತು. ಬಿಡುವಿಲ್ಲದಷ್ಟರ ಮಟ್ಟಿಗೆ ಆರ್ಡರ್‌ಗಳು ಸಿಕ್ಕಿದ್ದವು. ಆದರೆ ಕೊರೋನಾ ವೈರಸ್‌ನಿಂದಾಗಿ ನಮ್ಮ ಆದಾಯಕ್ಕೆ ಪೆಟ್ಟು ಬಿದ್ದಂತಾಗಿದೆ. ಕೆಲಸವಿಲ್ಲದೆ ಸಂಕಷ್ಟದಲ್ಲಿವೆ. ದುಡಿಮೆ ಇಲ್ಲದೆ ಪಾರ್ಲರ್‌ಗಳ ಬಾಡಿಗೆ ಕಟ್ಟುವುದಕ್ಕು ಕಷ್ಟವಾಗಿದೆ. ಲಾಕ್‌ಡೌನ್ ಸಡಿಲಗೊಂಡಿದ್ದರೂ ಸಹ ಗ್ರಾಹಕರು ಬರಲು ಹೆದರುತ್ತಿದ್ದಾರೆ. ಹೆಚ್ಚಾಗಿ ಬರುತ್ತಿಲ್ಲ.
- ಜ್ಯೋತಿ, ಪಾರ್ಲರ್ ಮಾಲೀಕರು.