ಸೌದಿಯಿಂದ ಬಂದ 40 ಮಂದಿ: ವಿಜಯಪುರದಿಂದ 10 ಕಿ.ಮೀ. ದೂರದಲ್ಲೇ ಆರೋಗ್ಯ ತಪಾಸಣೆ

Suvarna News   | Asianet News
Published : Mar 16, 2020, 02:21 PM ISTUpdated : Mar 16, 2020, 02:30 PM IST
ಸೌದಿಯಿಂದ ಬಂದ 40 ಮಂದಿ: ವಿಜಯಪುರದಿಂದ 10 ಕಿ.ಮೀ. ದೂರದಲ್ಲೇ ಆರೋಗ್ಯ ತಪಾಸಣೆ

ಸಾರಾಂಶ

ವಿದೇಶ ಪ್ರವಾಸ ಮುಗಿಸಿ ಬಂದ 40 ಜನ| ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ| ವಿಜಯಪುರದಿಂದ ಸೌದಿಗೆ ಪ್ರವಾಸಕ್ಕೆಂದು ತೆರಳಿದ್ದ 40 ಜನರ ತಂಡ| 

ವಿಜಯಪುರ(ಮಾ.16): ವಿದೇಶ ಪ್ರವಾಸ ಮುಗಿಸಿ ಬಂದ 40 ಜನರಿಗೆ ಜಿಲ್ಲೆಯ ಶಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ.  ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದು(ಸೋಮವಾರ) 40 ಜನರನ್ನ ವೈದ್ಯರು ತಪಾಸಣೆ ನಡೆಸಿದ್ದಾರೆ.

ಗಾಯಕ ಅರ್ಜುನ್ ಇಟಗಿಗೂ ತಟ್ಟಿದ ಕೊರೋನಾ ಭೀತಿ!

ಸೋಂಕು ಹರಡುವ ಭೀತಿಯಿಂದ ವಿಜಯಪುರ ನಗರದಿಂದ 10 ಕೀ.ಮೀ ದೂರದಲ್ಲಿಯೇ ತಡೆದು ಆರೋಗ್ಯ ತಪಾಸಣೆ ನಡೆಸಲಾಗಿದೆ. ವಿಜಯಪುರ ನಗರದಿಂದ 40 ಜನರ ತಂಡ ಸೌದಿಗೆ ಪ್ರವಾಸಕ್ಕೆಂದು ತೆರಳಿದ್ದಾರೆ.
40 ಜನರ ತಂಡ ಖಾಸಗಿ ಬಸ್‌ನಲ್ಲಿ ವಿಜಯಪುರ ನಗರಕ್ಕೆ ಆಗಮಿಸುತ್ತಿದ್ದರು. ಈ ಮಾಹಿತಿ ತಿಳಿದ ಜಿಲ್ಲಾಡಳಿತ ಶಿವಣಗಿ ಗ್ರಾಮದ ಆರೋಗ್ಯ ಕೇಂದ್ರದ ಬಳಿ ತಡೆದು ತಪಾಸಣೆ ನಡೆಸಿದ್ದಾರೆ. ಅದೃಷ್ಟವಶಾತ್ ಯಾರಲ್ಲು ಕೊರೋನಾ ಸೋಂಕು ಕಂಡು ಬಂದಿಲ್ಲ. 

'ಮಲ್ಲಿಕಾರ್ಜುನ ಸ್ವಾಮಿಗೂ ಕೊರೋನಾ ಕಾಟ: ಶ್ರೀಶೈಲಕ್ಕೆ ಹೋಗಬೇಡಿ'

28 ದಿನಗಳ ಕಾಲ 40 ಜನರ ಮೇಲೂ ಜಿಲ್ಲಾ ಆರೋಗ್ಯ ಇಲಾಖೆ ನಿಗಾ ಇಡಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. 
 

PREV
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ