ದಾವಣಗೆರೆಯ ಮುಖ್ಯ ರಸ್ತೆಯಲ್ಲಿ ಬಾರ್ ಇರುವುದರಿಂದ ಅಲ್ಲಿಗೆ ಬರುವ ಕುಡುಕರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜು.21): ದಾವಣಗೆರೆ ಜಿಲ್ಲೆಯ ವಿನೋಬನಗರದ 4ನೇ ಮುಖ್ಯ ರಸ್ತೆಯಲ್ಲಿ ಬಾರ್ ಇರುವುದರಿಂದ ಅಲ್ಲಿಗೆ ಬರುವ ಕುಡುಕರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ವಿನೋಬಾ ನಗರದ ಮೂರನೇ ಮೇನ್ 1 ನೇ ಕ್ರಾಸ್ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವಾಸಿಗಳು, ಈ ಬಾರ್ ಗೆ ಎಂಆರ್ ಪಿ ರೂಲ್ಸ್ ಅಡಿ ಕೇವಲ ಪಾರ್ಸೆಲ್ ಮಾರಾಟಕ್ಕೆ ಪರವಾನಿಗೆ ನೀಡಲಾಗಿದೆ. ಆದರೆ ಸದರಿ ಬಾರ್ ನ ಮಾಲೀಕರು ಸ್ಥಳದಲ್ಲಿಯೇ ಕುಡಿಯುವ ಅವಕಾಶವನ್ನು ನೀಡಿರುತ್ತಾರೆ ಎಂದು ಆರೋಪಿಸಿದರು.
ಜುಲೈ 23 ರಂದು ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಉಡುಪಿಗೆ, 15 ಸಾವಿರ ಸಸಿ ವಿತರಣೆ
ಇಲ್ಲಿಯ ನಿವಾಸಿಗಳು, ಹೆಣ್ಣುಮಕ್ಕಳು ಮತ್ತು ವಯಸ್ಸಾದವರು ರಸ್ತೆಯಲ್ಲಿ ನಡೆದು ಹೋಗುವುದೇ ದುಸ್ತರವಾಗಿದೆ. ಕುಡಿದು ನಂತರ 4ನೇ ಹಾಗೂ 3ನೇ ಮುಖ್ಯರಸ್ತೆಯ ಅಡ್ಡರಸ್ತೆಗಳಲ್ಲಿ ಓಡಾಡಿ ಮನೆಗಳು ಮುಂದೆ ಮೂತ್ರ ವಿಸರ್ಜನೆ, ಬಾಟಲಿ ಬಿಸಾಡುವುದು ಬೈದಾಡುವುದು ಮಾಡುತ್ತಾರೆ.
ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿ, ಬಾರ್ ಮಾಲೀಕರು 6 ತಿಂಗಳ ಗಡುವು ಪಡೆದಿದ್ದರು. ಆದರೆ ಸ್ಥಳಾಂತರ ಮಾಡಿಲ್ಲ. ನಮ್ಮ ಮನವಿಯನ್ನು ಪುರಸ್ಕರಿಸಿ ಬಾರ್ ಸ್ಥಳಾಂತರ ಮಾಡದಿದ್ದರೆ ಬಾರ್ ಮುಂದೆ ಧರಣಿ ಕೂರಲಾಗುವುದು ಎಂದು ಎಚ್ಚರಿಸಿದರು.
ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 2.58 ಲಕ್ಷ ಫಲಾನುಭವಿಗಳು