ತೋಳ ಹುಣಸೆ ಗ್ರಾಮದ ಪೊಲೀಸ್ ಪೇದೆ ವಿಜಯ್ ಕುಮಾರ್ ಗೆ ಮುಖ್ಯಮಂತ್ರಿ ಪದಕ ದೊರಕಿದ್ದು ಇಡೀ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ದಾವಣಗೆರೆ (ಎ.2): ಈಗಾಗಲೇ ರಾಷ್ಟ್ರೀಯ ಕಬ್ಬಡ್ಡಿ ಆಟಗಾರರು ಹಾಗೂ 117 ಸೈನಿಕರನ್ನು ಗಡಿ ಕಾಯಲು ಕೊಡುಗೆ ನೀಡಿರುವ ಸೈನಿಕ ಗ್ರಾಮ ತೋಳ ಹುಣಸೆ (tolahunse village) ಗ್ರಾಮಕ್ಕೆ ಮತ್ತೊಂದು ಗರಿ ಮುಕುಟಕ್ಕೆ ಸೇರಿದೆ. ತೋಳ ಹುಣಸೆ ಗ್ರಾಮದ ಪೊಲೀಸ್ ಪೇದೆ ವಿಜಯ್ ಕುಮಾರ್ ಗೆ ಮುಖ್ಯಮಂತ್ರಿ ಪದಕ (CM Medal) ದೊರಕಿದ್ದು ಇಡೀ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸೈನಿಕರ ಊರಿನ ಗರಿಮೆ ಜೊತೆ ತೋಳಹುಣಸೆ ರಾಜ್ಯ ರಾಷ್ಟ್ರಮಟ್ಟದ ಕ್ರೀಡಾ ಗ್ರಾಮದ ಪ್ರಸಿದ್ಧಿಯು ಇದೆ.
ಕರ್ನಾಟಕ ಕೇಸರಿ ಮತ್ತು ಅಂತರಾಷ್ಟ್ರೀಯ ಕುಸ್ತಿ ಕೋಚ್ ಹೀಗೆ ಕ್ರೀಡಾ ಕೋಟಾದ ನಾನಾ ಬಗೆಯ ಹುದ್ದೆಗಳಲ್ಲಿರುವ ಕ್ರೀಡಾಪಟುಗಳು ತೋಳಹುಣಸೆಯವರು ಎನ್ನುವುದು ಹೆಮ್ಮಯ ವಿಚಾರ.
ಶ್ರೀಯುತ ವಿಜಯಕುಮಾರ್‌ರವರು ಬೆಂಗಳೂರು ಆಂತರಿಕ ಭದ್ರತಾ ವಿಭಾಗದಲ್ಲಿ ಪೊಲೀಸ್ ಕರ್ತವ್ಯದಲ್ಲಿದ್ದು ಅವರಿಗೆ ಇಂದಿನ ಪೊಲೀಸ್ ಧ್ವಜಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಪದಕ ಕೊಟ್ಟು ಗೌರವಿಸಲಾಗಿದೆ. ಪೋಲಿಸ್ ಇಲಾಖೆಯಲ್ಲಿನ ತಮ್ಮ ಅಮೋಘ ಕಾರ್ಯಕ್ಕೆ ಘನವೆತ್ತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದರು.
Yadgir Communal Harmony ಹಿಂದೂ-ಮುಸ್ಲಿಂ ಸೇರಿ ಯುಗಾದಿ ಹಬ್ಬ ಆಚರಣೆ
ವಿಜಯ್ ಕುಮಾರ್ ತಂದೆ ಲಕ್ಷ್ಮಣ್ ನಾಯಕ್ , ತಾಯಿ ಜಾನುಬಾಯಿ ಇಡೀ ಕುಟುಂಬ ಒಂದಿಲ್ಲೊಂದು ರೀತಿಯಲ್ಲಿ ದೇಶ ಸಮಾಜ ಸೇವೆ ಮಾಡುತ್ತಿದೆ. ತಾಯಿ ಜಾನುಬಾಯಿ ಪಂಚಾಯತಿ ಸದಸ್ಯರಾಗಿ ರಾಜಕೀಯವಾಗಿ ಗ್ರಾಮದ ಅಭಿವೃದ್ಧಿ ಶ್ರಮಿಸಿದವರು. ಇತ್ತಿಚೆಗೆ ಇವರ ಸಹೋದರ ವೆಂಕಟೇಶ್ ಕೂಡ ಇಂಡಿಯನ್ ಆರ್ಮಿಯಲ್ಲಿ ಭಾರತ ಮಾತೆಯ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಗ್ರಾಮಕ್ಕೆ ಮರುಳಿದ್ದಾರೆ.
ಸಮಾಜ ಸೇವೆಯಲ್ಲಿ ಇವರ ಕುಟುಂಬ ಸದಸ್ಯರು ತೊಡಗಿಸಿಕೊಂಡು ಯಶಸ್ಸು ಕಾಣುತ್ತಿರುವುದು ಇಡೀ ತೋಳಹುಣಸೆ ಗ್ರಾಮಕ್ಕೆ ಹೆಮ್ಮೆಯ ಸಂಗತಿ.ಸೈನಿಕನ ಊರಿಗೆ ಇಂದು ಮುಖ್ಯಮಂತ್ರಿ ಪದಕ ದೊರೆಕಿರುವುದು ಇಡೀ ಗ್ರಾಮಕ್ಕೆ ಪ್ರಶಸ್ತಿ ಬಂದಷ್ಟು ಖುಷಿಯಾಗಿದೆ. ಶ್ರೀಯುತ್ ವಿಜಯ್ ಕುಮಾರ್ ಗ್ರಾಮಸ್ಥರು ಸೇರಿದಂತೆ ದಾವಣಗೆರೆ ಜಿಲ್ಲೆಯ ಒಡನಾಡಿ ಸ್ನೇಹಿತರು, ರಾಜಕಾರಣಿಗಳು ಅಭಿನಂದಿಸಿದ್ದಾರೆ.
ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಜಾತ್ರೆಗಳು!