ತಾಲೂಕಿನ ಎಲೆಬೇತೂರು ಗ್ರಾಮದ ಕೆರೆಯಲ್ಲಿ 8-10 ಕೆ.ಜಿ.ವರೆಗೆ ತೂಗುವ ಮೀನುಗಳಿದ್ದು, ಕೆರೆಗೆ ಯಾರೋ ದುಷ್ಕರ್ಮಿಗಳು ವಿಷವಿಕ್ಕಿದ ಪರಿಣಾಮ ಸುಮಾರು 5 ಟನ್ನಷ್ಟು ಮೀನುಗಳು ಸಾವನ್ನಪ್ಪಿವೆ.
ದಾವಣಗೆರೆ (ಮೇ 16): ತಾಲೂಕಿನ ಎಲೆಬೇತೂರು ಗ್ರಾಮದ ಕೆರೆಯಲ್ಲಿ 8-10 ಕೆ.ಜಿ.ವರೆಗೆ ತೂಗುವ ಮೀನುಗಳಿದ್ದು, ಕೆರೆಗೆ ಯಾರೋ ದುಷ್ಕರ್ಮಿಗಳು ವಿಷವಿಕ್ಕಿದ ಪರಿಣಾಮ ಸುಮಾರು 5 ಟನ್ನಷ್ಟು ಮೀನುಗಳು ಸಾವನ್ನಪ್ಪಿವೆ. ನಗರದ ಹೊರವಲಯದ ಎಲೆಬೇತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಭದ್ರಾ ಕಾಲುವೆ ಆಶ್ರಿತವಾಗಿರುವ, ಸುಮಾರು 126 ಎಕರೆ ವಿಸ್ತೀರ್ಣದ ಬೇತೂರು ಕೆರೆಯಲ್ಲಿ ಈ ಬರದಲ್ಲಿಯೂ ಸುಮಾರು 60 ಎಕರೆಯಷ್ಟು ನೀರು ಸಂಗ್ರಹವಿದೆ. ಕೆರೆ ಅಂಗಳದಲ್ಲಿ ಸುಮಾರು 20 ಅಡಿಗಳಷ್ಟು ಆಳದ ಗುಂಡಿಗಳಲ್ಲಿ 8-10 ಕೆ.ಜಿ. ತೂಕದ ಭಾರೀ ಮೀನುಗಳಿವೆ. ಆದರೆ, ಯಾರೋ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿ ಮೀನುಗಳ ಮಾರಣಹೋಮ ನಡೆಸಿದ್ದಾರೆ.
5 ವರ್ಷಗಳಿಂದ ಸಾಕಣೆ: ಎಲೆಬೇತೂರು ಗ್ರಾಮದ ಮಂಜಪ್ಪ ಬಾರಿಕೇರ, ಸಿದ್ದಪ್ಪ ಬಾರಿಕರ, ಹನುಮಂತಪ್ಪ ಜಕ್ಕಾವರು ಸೇರಿಕೊಂಡು ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದು, ಸುಮಾರು 8 ಲಕ್ಷ ಮೀನು ಮರಿಗಳನ್ನು ಕೆರೆಯಲ್ಲಿ ಬಿಟ್ಟಿದ್ದರು. 5 ವರ್ಷಗಳ ಹಿಂದೆ ಬಿಟ್ಟಿದ್ದ ಮೀನುಗಳ ಸಂತತಿ ಹೆಚ್ಚಾಗಿತ್ತು. ರವೂ, ಕಾಟ್ಲಾ, ಗೌರಿ, ಮಿರಗಲ್, ಬ್ಲಾಕ್ ಶಾರ್ಪ್ (ಹುಲ್ಲು ತಿನ್ನುವ ಮೀನು) ಹೀಗೆ ನಾನಾ ಜಾತಿಯ ಮೀನುಗಳ ಮರಿಗಳನ್ನು ಸಾಕಲಾಗಿತ್ತು. ಮೂವರೂ ಮೀನು ಸಾಕಾಣಿಕೆದಾರರು ಶ್ರಮವಹಿಸಿದ್ದು, ಒಂದಿಷ್ಟು ದುಡಿಮೆ ಮಾಡಿಕೊಳ್ಳುವ ಕನಸು ಕಂಡಿದ್ದರು.
undefined
ಕರ್ನಾಟಕ ಬರದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ, ತಮಿಳುನಾಡು ಬೇಡಿಕೆ ತಿರಸ್ಕರಿಸಿದ CWRC!
ಆದರೆ, ಬುಧವಾರ ಬೆಳಗ್ಗೆಯಿಂದಲೇ ಗ್ರಾಮಸ್ಥರು, ಸುತ್ತಮುತ್ತಲಿನ ಊರಿನವರು ಮೀನುಗಳನ್ನು ಹಿಡಿದುಕೊಂಡು ಹೋಗುತ್ತಿದ್ದನ್ನ ನೋಡಿ, ಮಂಜಪ್ಪ, ಹನುಮಂತಪ್ಪ, ಸಿದ್ದಪ್ಪ ಅವರು ಕೆರೆಯ ಬಳಿ ಬಂದಿದ್ದು, ಮೀನುಗಳಿಗೆ ವಿಷಪ್ರಾಸನ ಮಾಡಲಾಗಿದೆ ಎಂಬ ವಿಷಯ ತಿಳಿಯಿತು. ಆದರೆ ಮೀನುಗಳ ಮಾರಣಹೋಮ ಮಾತ್ರ ತಡೆಯಲಾಗಿಲ್ಲ. ಸಾಲ ಮಾಡಿ, ಟೆಂಡರ್ ಪಡೆದ ಮೀನುಗಾರರು ಮೀನುಗಳ ಸಾವು ಕಂಡು ಅನುಭವಿಸುತ್ತಿದ್ದ ಸಂಕಟ, ನೋವು ಕಣ್ಣಂಚಿನಿಂದ ಕಣ್ಣೀರಾಗಿ ಇಳಿಯುತ್ತಿತ್ತು. ಮೀನುಗಳು ವಿಷಪ್ರಾಶಣದಿಂದ ಸತ್ತು ಶವವಾಗಿ ತೇಲುತ್ತಿದ್ದು, ಮೀನುಗಾರಿಕೆಗೆ ಟೆಂಡರ್ ಪಡೆಯಲು ಅರ್ಜಿ ಹಾಕಿದ್ದ ರೈತರು ಇದೀಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ಸಾಲ ಮಾಡಿ, ಮೀನುಗಾರಿಕೆಗೆ ಟೆಂಡರ್ ಹಾಕಿದ್ದೆವು. ಈಗ ಇನ್ನೇನು ನಮ್ಮ ಬಾಯಿಗೆ ತುತ್ತು ಬರುತ್ತಿದೆಯೆಂಬ ಕಾಲಕ್ಕೆ ಕಾಣದ ಕೈಗಳು ನಮ್ಮ ತುತ್ತಿಗೆ ವಿಷ ಇಕ್ಕಿವೆ. ಕಿಡಿಗೇಡಿಗಳು ಕೆರೆಗೆ ವಿಷ ಹಾಕಿರುವ ಸಾಧ್ಯತೆ ಇದೆ. ಕೆರೆ ಬಳಿ ವಿಷದ ಬಾಟಲು ಪತ್ತೆಯಾಗಿದೆ. ಸುಮಾರು 5 ಟನ್ನಷ್ಟು ಮೀನುಗಳು ಸಾವನ್ನಪ್ಪಿವೆ. 2ರಿಂದ 10 ಕೆ.ಜಿ.ವರೆಗಿನ ಮೀನು ಸತ್ತಿರುವುದನ್ನು ಕಂಡರೆ ನಮ್ಮ ಕಣ್ಣಲ್ಲಿ ನೀರಲ್ಲ, ರಕ್ತ ಬರುತ್ತಿದೆ.
- ಸಿದ್ದಪ್ಪ ಜಕ್ಕಾವರ, ಮಂಜುನಾಥ ಬಾರಿಕರ, ಹನುಮಂತಪ್ಪ ಬಾರಿಕರ,
ಬಂಡೀಪುರ ಅರಣ್ಯದಲ್ಲಿ 10 ದಿನದಿಂದ ಮಳೆ: ತಗ್ಗಿದ ಕಾಳ್ಗಿಚ್ಚಿನ ಆತಂಕ, ಪ್ರಾಣಿಗಳ ದರ್ಶನ!
ಅಮಾಯಕ ಮೀನುಗಳ ಸಾವಿಗೆ ದುಷ್ಕರ್ಮಿಗಳು ಕಾರಣರಾಗಿದ್ದಾರೆ. ಕೆರೆಯ ಬಳಿ ವಿಷದ ಬಾಟಲು ಪತ್ತೆಯಾಗಿದೆ. 4-5 ಟನ್ನಷ್ಟು ಮೀನುಗಳ ಮಾರಣಹೋಮವಾಗಿದೆ. ಕೆರೆಗೆ ವಿಷ ಇಟ್ಟ ಅಪರಿಚಿತರನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತ್ರಸ್ಥ ಮೀನುಗಾರರಿಗೆ ಸೂಕ್ತ ಪರಿಹಾರ ನೀಡಬೇಕು
- ಬೇತೂರು ಮಂಜಪ್ಪ, ಮಾಜಿ ಅಧ್ಯಕ್ಷ, ಎಲೆಬೇತೂರು ಗ್ರಾಪಂ