ಮನೆಗಳಲ್ಲಿ ಮಕ್ಕಳು ವಿಶೇಷ ಚೇತನರಾದರೇ ಪೋಷಕರು ಚಿಂತಾಕ್ರಾಂತರಾಗುವುದೇ ಹೆಚ್ಚು. ಆದ್ರೆ ಒಂಭತ್ತನೇ ವಯಸ್ಸಿನ, ಐದು ವರ್ಷದ ಮಾನಸಿಕ ಸಾಮಾರ್ಥ್ಯ ಹೊಂದಿರುವ ಮಗುವೊಂದು ವಿಶೇಷ ಒಲಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಜೂ.04): ಮನೆಗಳಲ್ಲಿ ಮಕ್ಕಳು ವಿಶೇಷ ಚೇತನರಾದರೇ ಪೋಷಕರು ಚಿಂತಾಕ್ರಾಂತರಾಗುವುದೇ ಹೆಚ್ಚು. ಆದ್ರೆ ಒಂಭತ್ತನೇ ವಯಸ್ಸಿನ, ಐದು ವರ್ಷದ ಮಾನಸಿಕ ಸಾಮಾರ್ಥ್ಯ ಹೊಂದಿರುವ ಮಗುವೊಂದು ವಿಶೇಷ ಒಲಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ಜೂನ್ 12 ರಿಂದ 26 ರವರೆಗೆ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಲಿರುವ ಅಂತರ್ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ದಾವಣಗೆರೆ ನಗರದ ಸಂವೇದ ವಿಶೇಷ ಶಾಲೆಯ ವಿದ್ಯಾರ್ಥಿ ಎಂ.ಎಸ್.ಸುಶ್ರತ್ ಆಯ್ಕೆ ಆಗಿದ್ದಾರೆ.
ಮೂಲತ: ದಾವಣಗೆರೆ ಜಿಲ್ಲೆಯ ಮಂಜುನಾಥ ಹಾಗೂ ಮಮತ ಇವರ ಮಗ ಎಂ.ಎಸ್.ಸುಶ್ರತ್ ಅವರ ಮಗುವು ವಿಶೇಷ ತರಬೇತಿಗಾಗಿ 2013ರಲ್ಲಿ ಬೌದ್ಧಿಕ ಸವಾಲನ್ನೆದುರಿಸುತ್ತಿರುವ ಮಕ್ಕಳಿಗಾಗಿ ಇರುವ ಸಂವೇದ ವಿಶೇಷ ಶಾಲೆಗೆ ಪ್ರವೇಶ ಪಡೆದು ದೈಹಿಕ ಶಿಕ್ಷಕ ದಾದಾಪೀರ್ ಅವರಿಂದ ತರಬೇತಿ ಪಡೆದು ಉತ್ತಮ ಸಾಧನೆ ಮಾಡಿ ಇದೀಗ ಅಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಅಗಿದ್ದಾರೆ. ಸ್ಪೇಷಲ್ ಒಲಂಪಿಕ್ಸ್ ಇದೊಂದು ಅಂತರ್‌ರಾಷ್ಟ್ರೀಯ ಮಟ್ಟದ ವಿಶೇಷ ಮಕ್ಕಳ ಶ್ರೇಯೋಭಿಲಾಶೆಗಾಗಿರುವ ಸಂಸ್ಥೆ, ವಿಶೇಷ ಅಗತ್ಯತೆಯುಳ್ಳ ಮಕ್ಕಳಾದ ಬುದ್ಧಿ ಶಕ್ತಿಯಲ್ಲಿ ಕೊರತೆ, ಮೆದುಳಿನ ಪಾರ್ಶ್ವವಾಯು, ಆಟಿಸಂ ಮತ್ತು ಬದು ವಿಧದ ನ್ಯೂನತೆಯುಳ್ಳವರಿಗೆ ಆಟೋಟಗಳನ್ನು ನಡೆಸುವ ಸಂಸ್ಥೆ ಪ್ರತಿಯೊಂದು ದೇಶದಲ್ಲಿಯೂ ಅಂಗ ಸಂಸ್ಥೆ ಇವೆ. ಅಲ್ಲದೇ ರಾಷ್ಟ್ರಮಟ್ಟದಲ್ಲಿ ಸ್ಪೇಷಲ್ ಒಲಂಪಿಕ್ಸ್ ಭಾರತ್ ಈ ಆಟೋಟಗಳನ್ನು ನಡೆಸುತ್ತದೆ.
ಆರೋಗ್ಯ, ಶಿಕ್ಷಣದ ವಲಸೆ ತಪ್ಪಿಸುವುದು ನನ್ನ ಗುರಿ: ಡಿ.ಕೆ.ಶಿವಕುಮಾರ್
ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪೇಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ಈ ಆಟೋಟಗಳನ್ನು ನಡೆಸುತ್ತದೆ. ಸುಶ್ರುತಗೆ ತರಬೇತಿ ನೀಡುವ ತರಬೇತುದಾರ ದಾದಾಪೀರ್ ಹುಡುಗನ ಕ್ಷಮತೆ ಗುರುತಿಸಿ ಸೈಕ್ಲಿಂಗ್ ತರಬೇತಿ ನೀಡಿದರು. ಹೆಚ್ಚಿನ ಆಸಕ್ತಿ ಹಾಗೂ ಶ್ರಮದಿಂದ ಸೈಕ್ಲಿಂಗ್ ತರಬೇತಿ ಪಡೆದ ಸುಶ್ರುತ್ 2021 ನವಂಬರ್ ನಲ್ಲಿ ಮಂಗಳೂರಿನಲ್ಲಿ ನಡೆದ ಸ್ಪೆಷಲ್ ಒಲಂಪಿಕ್ಸ್ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 5 ಕಿ.ಮೀ.ನಲ್ಲಿ ಪ್ರಥಮ ಸ್ಥಾನವನ್ನು ಪಡೆದರು.
ಗೃಹಲಕ್ಷ್ಮೀಗಾಗಿ ಅತ್ತೆ-ಸೊಸೆ ನಡುವೆ ಪೈಪೋಟಿ: ರೇಷನ್ ಕಾರ್ಡಿಗಾಗಿ ಕುಟುಂಬಗಳು ಇಬ್ಭಾಗ
ನಂತರ 2022 ಜುಲೈ 21 ರಿಂದ 24 ರವರೆಗೆ ಜಾರ್ ಖಾಂಡ್ ಬಕಾರೋದಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ 5 ಕಿ ಮೀ ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು, ನಂತರ 3 ನ್ಯಾಷನಲ್ ಕೋಚಿಂಕ್ ಕ್ಯಾಂಪ್‌ಗಳಲ್ಲಿ ಭಾಗವಹಿಸುವುದರ ಮೂಲಕ ಇದೀಗ ಜೂನ್ 12ರಿಂದ 26 ರವರೆಗೆ ಜರ್ಮನಿಯ ಬರ್ಲಿನ್ ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಕೋಚರ್ ಆಗಿ ದಾದಾಪೀರ್ ಕಾರ್ಯ ನಿರ್ವಹಿಸಿ ಆ ಮಗುವಿನ ಸಾಮಾರ್ಥ್ಯ ಕ್ಕೆ ರೂಪು ನೀಡಿದ್ದಾರೆ. ಇನ್ನು ತಂದೆ ಮಂಜುನಾಥ್ ತಾಯಿ ಮಮತಾ ಮಗುವಿನ ಸಾಧನೆ ಕಂಡು ಮೂಕವಿಸ್ಮಿತರಾಗಿದ್ದಾರೆ. ಮಗನ ಸಾಧನೆ ಬಗ್ಗೆ ಕೇಳಿದ್ರೆ ಅವರ ಕಣ್ಣುಗಳಲ್ಲಿ ಆನಂದಬಾಷ್ಪ ಹರಿಯುತ್ತದೆ. ಆ ಮಗು ವಿಶೇಷ ಚೇತನ ಅಲ್ಲ ಎಲ್ಲರಂತೆ ಸಾಧಕ ಮಗು. ಆ ಮಗನನ್ನು ಪಡೆದಿರುವುದು ಪುಣ್ಯ ಎನ್ನುತ್ತಾರೆ ತಾಯಿ ಮಮತಾ.