Davanagere: 777 ಚಾರ್ಲಿ ವೀಕ್ಷಣೆಗೆ ಡಯನಾಗೆ ಸಿಗಲಿಲ್ಲ ಅನುಮತಿ: ಪ್ರತಿಭಟಿಸಿದ ಮಾಲೀಕ

Published : Jun 13, 2022, 12:29 AM IST
Davanagere:  777 ಚಾರ್ಲಿ ವೀಕ್ಷಣೆಗೆ ಡಯನಾಗೆ ಸಿಗಲಿಲ್ಲ ಅನುಮತಿ: ಪ್ರತಿಭಟಿಸಿದ ಮಾಲೀಕ

ಸಾರಾಂಶ

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ರಾಜ್ಯವಲ್ಲದೇ ದೇಶದಲ್ಲಿ ಸದ್ದು ಮಾಡುತ್ತಿದೆ. ಚಾರ್ಲಿ ಸಿನಿಮಾ ನೋಡಲು  ಶ್ವಾನ ಪ್ರಿಯರು ಥಿಯೇಟರ್‌ಗಳಿಗೆ ಧಾವಿಸುತ್ತಿದ್ದಾರೆ. ಆದರೆ ಶ್ವಾನದೊಂದಿಗೆ ಸಿನಿಮಾ ನೋಡಲು ಬರುವ ಸಿನಿ ಪ್ರಿಯರ ಶ್ವಾನಕ್ಕೆ ಅವಕಾಶ ನೀಡಬೇಕೆ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ

ವರದಿ: ವರದರಾಜ್, ದಾವಣಗೆರೆ 

ದಾವಣಗೆರೆ (ಜೂ.13): ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ರಾಜ್ಯವಲ್ಲದೇ ದೇಶದಲ್ಲಿ ಸದ್ದು ಮಾಡುತ್ತಿದೆ. ಚಾರ್ಲಿ ಸಿನಿಮಾ ನೋಡಲು  ಶ್ವಾನ ಪ್ರಿಯರು ಥಿಯೇಟರ್‌ಗಳಿಗೆ ಧಾವಿಸುತ್ತಿದ್ದಾರೆ. ಆದರೆ ಶ್ವಾನದೊಂದಿಗೆ ಸಿನಿಮಾ ನೋಡಲು ಬರುವ ಸಿನಿ ಪ್ರಿಯರ ಶ್ವಾನಕ್ಕೆ ಅವಕಾಶ ನೀಡಬೇಕೆ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ದಾವಣಗೆರೆ ಗೀತಾಂಜಲಿ ಥಿಯೇಟರ್‌ಗೆ ಶ್ವಾನದೊಂದಿಗೆ ಬಂದ ಮಾಲೀಕನಿಗೆ ತೀವ್ರ ನಿರಾಸೆಯಾಗಿದೆ. ಶ್ವಾನಕ್ಕೆ ಟಿಕೇಟ್ ಬುಕ್ ಮಾಡಿದ್ದರು ಅದಕ್ಕೆ ಚೇರ್ ಕೊಡಲು ಥಿಯೇಟರ್ ಸಿಬ್ಬಂದಿ ನಿರಾಕರಿಸಿದ ಘಟನೆ ನಡೆದಿದೆ. 

ಥಿಯೇಟರ್‌ನಲ್ಲಿ ಶ್ವಾನ ಬಿಡದಿದ್ದಕ್ಕೆ ಥಿಯೇಟರ್ ಮುಂದೆ ಮುದ್ದಿನ ನಾಯಿ ಜೊತೆ ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆಯ ಕೆಟಿಜೆ ನಗರದ ನಿವಾಸಿ ಗೌರಮ್ಮ‌ಎನ್ನುವರಿಗೆ ಸೇರಿದ ಡಯಾನಾ ನಾಯಿ ಜೊತೆ ಮಾಲೀಕ ಕೆಂಚ ಹಾಗು ಹಂಸಾ 777 ಚಾರ್ಲಿ ಸಿನಿಮಾ ನೋಡಲು ಆನ್‌ಲೈನ್‌ನಲ್ಲಿ ಟಿಕೇಟ್ ಬುಕ್ ಮಾಡಿದ್ದರು. ಇಂದು ಥಿಯೇಟರ್ ಬಳಿ ಬಂದು ಇನ್ನೇನು ಒಳಹೋಗಬೇಕು ಎನ್ನುವಷ್ಟರಲ್ಲಿ ಡಯಾನಾ ಶ್ವಾನವನ್ನು ಒಳ ಬಿಡುವುದಿಲ್ಲವೆಂದು ಥಿಯೇಟರ್ ಸಿಬ್ಬಂದಿ ಹೇಳಿದರು. ನಾವು ಟಿಕೇಟ್ ಬುಕ್ ಮಾಡಿದ್ದೇವೆ ನೀವು ಒಳಬಿಡಬೇಕೆಂದು ಪಟ್ಟು ಹಿಡಿದರು‌. 

Davanagere: ಭಾನುವಾರ ನಡೆಯಬೇಕಿದ್ದ ಎಸ್‌ಡಿಪಿಐ ಸಮಾವೇಶ ರದ್ದು: 144 ಸೆಕ್ಷನ್ ಜಾರಿ

ಚಾರ್ಲಿ ಪೆಟ್ ಲವರ್ಸ್ ಆಧಾರಿತ ಸಿನೆಮಾ ಆಗಿದ್ದರಿಂದ ತನ್ನ ಶ್ವಾನಕ್ಕೆ ಸಿನೆಮಾ ತೋರಿಸಲು ಬಂದಿದ್ದರು ಕೆಂಚ. ಸಿನಿಮಾದ ನಂತರ ಸಿನಿಮಾ ಪ್ರೇಕ್ಷಕರಿಗೆ ಸಿಹಿ ಹಂಚಿ ಡಯಾನ 777 ಹೆಸರಿಡಬೇಕೆಂದು ಕೆಂಚ ಆಲೋಚಿಸಿದ್ದರು. ಆದ್ರೆ ಒಂದು ಗಂಟೆ ಕಾಯ್ದರು ಸಿನಿಮಾ ನೋಡಲು ಶ್ವಾನವನ್ನು ಬಿಡಲಿಲ್ಲ. ನೀವು ಜಿಲ್ಲಾಧಿಕಾರಿ ಪರವಾನಿಗೆ ಪಡೆದು ಸಿನಿಮಾ ತೋರಿಸಿ ಎಂದು ಥಿಯೇಟರ್ ಮಾಲೀಕ ಡಯಾನ ಮಾಲೀಕರಿಗೆ ಹೇಳಿದರು. ಇದರಿಂದ ‌ 777 ಚಾರ್ಲಿ ನೋಡಲು ಬಂದ ಕೆಂಚ ಡಯಾನಾ ನಾಯಿ ‌ನಿರಾಸೆಯಿಂದ ವಾಪಸ್ಸಾಗಿದ್ದಾರೆ.

Davanagere: ಮನೆ ಕಟ್ಟಿಸಬೇಕೆಂದಿದ್ದ ಹಣದಲ್ಲಿ ಶಾಲಾ ಕೊಠಡಿ ನಿರ್ಮಿಸಿದ ನೌಕರ

ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾ ಇದೀಗ ನಾಯಿಯನ್ನು ಥಿಯೇಟರ್ ಗೆ ಬಿಡಬೇಕೇ ಬೇಡವೇ ಎಂಬ ಬಗ್ಗೆ ಹೊಸ ವಿವಾದ ಹುಟ್ಟುಹಾಕಿದೆ. ಜಿಲ್ಲಾಧಿಕಾರಿ ಒಂದು ವೇಳೆ ಪರ್ಮಿಷನ್ ಕೊಟ್ಟರೆ ಶ್ವಾನ ಪ್ರಿಯರು ತಮ್ಮ ನಾಯಿಗಳ ಜೊತೆ ಥಿಯೇಟರ್‌ಗೆ ಬರುವುದು ಗ್ಯಾರಂಟಿ. ಡಯನಾ ಒಂದು ನಾಯಿಗೆ ಅವಕಾಶ ಕೊಟ್ಟರೆ ನಮ್ಮ ನಾಯಿಗು ಕೊಡಿ ಎಂದು ದುಂಬಾಲು ಬೀಳುವವರು ಜಾಸ್ತಿ. ಆ ಕಾರಣಕ್ಕಾಗಿ ಚಾರ್ಲಿ 777 ಸಿನಿಮಾ  ಶ್ವಾನ ಪ್ರಿಯರಿಗೆ ಒಂದು ರೀತಿಯಲ್ಲಿ ಉಭಯಸಂಕಟಕ್ಕೆ ಸಿಲುಕಿಸಿದೆ.

PREV
Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!