ಬೈಪಾಸ್ ರಸ್ತೆಯಲ್ಲಿ ಬಿಳಿ ಸೀರೆ ಮಹಿಳೆ, ದೆವ್ವದಿಂದ ದಾಳಿ: ಪೋಟೋ ವೈರಲ್‌: CPI ಪರಿಶೀಲನೆ

Published : Oct 18, 2026, 07:32 AM IST
Channagiri Bypass

ಸಾರಾಂಶ

ಚನ್ನಗಿರಿಯ ಬೈಪಾಸ್ ರಸ್ತೆಯಲ್ಲಿ ಬಿಳಿಸೀರೆ ಧರಿಸಿದ ದೆವ್ವವೊಂದು ಕಾರ್ಮಿಕರ ಮೇಲೆ ದಾಳಿ ಮಾಡಿದೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ, ಇದು ಎ.ಐ. ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಸುಳ್ಳು ಸುದ್ದಿ ಎಂದು ಸಿಪಿಐ ರವೀಶ್ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ: ಚನ್ನಗಿರಿ ಪಟ್ಟಣದ ಹೊರವಲಯದ ಬೈ ಪಾಸ್ ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು, ಈ ರಸ್ತೆಯಲ್ಲಿ ದೆವ್ವದ ಕಾಟ ಇದೆ ಎಂದು ಬಿಳಿಸೀರೆ ಧರಿಸಿದ ಮಹಿಳೆಯ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಪರಿಣಾಮ ಆ ಭಾಗದಲ್ಲಿ ಜನರು ಓಡಾಡಲು ಕೊಂಚ ಭಯಪಡುತ್ತಿದ್ದಾರೆ.

ಬಿಳಿಸೀರೆ ಧರಿಸಿದ ಮಹಿಳೆ ಫೋಟೋ ವೈರಲ್ 

ಅ.12ರಂದು ರಾತ್ರಿ ಬೈಪಾಸ್‌ನ ಬಳಿ ಜೆಸಿಬಿ ಯಂತ್ರದ ಮೂಲಕ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ದೆವ್ವ ದಾಳಿ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳು ಹರಿದಾಡುತ್ತಿವೆ. ಬಿಳಿಸೀರೆ ಧರಿಸಿದ ಮಹಿಳೆ ರಾತ್ರಿ ವೇಳೆ ರಸ್ತೆ ಪಕ್ಕ ನಿಂತಿರುವ ಪೋಟೋ ವೈರಲ್ ಆಗಿದೆ. ಕೆಲಸ ಮಾಡುತ್ತಿದ್ದ ಪುರುಷರ ಬೆನ್ನು, ಕೈಗೆ ಗಾಯ ಆದ ಪೋಟೋಗಳು ಹರಿದಾಡುತ್ತಿವೆ.

ಸುಳ್ಳು ಸುದ್ದಿ

ಈ ವಿಷಯ ಗಮನಿಸಿದ ಚನ್ನಗಿರಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್‌ ರವೀಶ್ ಸ್ಥಳ ಪರಿಶೀಲಿಸಿದ್ದಾರೆ. ಬಿಳಿಸೀರೆ ಧರಿಸಿದ ದೆವ್ವ, ದಾಳಿಯಂಥ ಯಾವುದೇ ಘಟನೆಗಳು ಇಲ್ಲಿ ನಡೆದಿಲ್ಲ. ವಿನಾಕಾರಣ ಕೆಲವರು ಎ.ಐ. ತಂತ್ರಜ್ಞಾನ ಬಳಸಿ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಸುಳ್ಳು ಸುದ್ದಿ ಹರಿಬಿಟ್ಟಿರುವ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಐಡಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಈ ರೀತಿಯ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

Bengaluru: ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನದ ವಿವಾದ: ಹೈಕೋರ್ಟ್‌ ಮಹತ್ವ ತೀರ್ಪು
European Rollers: 10 ಸಾವಿರ ಕಿ.ಮೀ. ದೂರದಿಂದ ಗುಡೇಕೋಟೆಗೆ ರೋಲರ್ಸ್!