ಧರ್ಮಸ್ಥಳಕ್ಕೆ ಮತ್ತೆರಡು ಮಾರ್ಗವಾಗಿ ಸರ್ಕಾರಿ ಬಸ್ ಸೇವೆ ಒದಗಿಸಲು ಆಗ್ರಹಿಸಲಾಗಿದೆ.
ಚನ್ನಗಿರಿ (ಸೆ.23): ದಾವಣಗೆರೆಯಿಂದ ಚನ್ನಗಿರಿ ಮಾರ್ಗವಾಗಿ ಹಾಗೂ ಶಿವಮೊಗ್ಗದಿಂಧ ಚನ್ನಗಿರಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಸರ್ಕಾರಿ ಬಸ್ ಸಂಚಾರ ಮಾಡಲು ಮನವಿ ಮಾಡಲಾಗಿದೆ.
ನಿವೃತ್ತ ಶಿಕ್ಷಕ ಜವಳಿ ಮಲ್ಲಿಕಾರ್ಜುನ್, ಶ್ರೀನಿವಾಸ್ ರಾಕೇಶ್, ರುದ್ರಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆಯಿಂದ ಬಾಡ, ತಣಿಗೆರೆ, ಸಂತೆಬೆನ್ನೂರು, ದೇವರಹಳ್ಳಿ ಮಾರ್ಗವಾಗಿ ಚನ್ನಗಿರಿಯಿಂದ ಪಾಂಡೋಮಟ್ಟಿ, ತಾವರೆಕರೆ ಮಾರ್ಗವಾಗಿ ಬೀರೂರು ಮೂಲಕ ಧರ್ಮಸ್ಥಳಕ್ಕೆ ಸಂಚರಿಸುವ ಬಸ್ ಅವಶ್ಯಕತೆ ಇದ್ದು, ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಕೊರೋನಾ ಭೀತಿ ನಡುವೆ ಮಹಾರಾಷ್ಟ್ರಕ್ಕೆ KSRTC ಬಸ್ ಸೇವೆ ...
1994ರಲ್ಲಿ ದಾವಣಗೆರೆಯಿಂದ ಚನ್ನಗಿರಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಬಸ್ ಸಂಚರಿಸುತಿತ್ತು. ಆದರೆ 2 ವರ್ಷವಷ್ಟೇ ಈ ಮಾರ್ಗವಾಗಿ ಬಸ್ ಸಂಚಾರ ಮಾಡುತ್ತಿದ್ದವು.ಆದರೆ ಬಳಿಕ ಸಂಚಾರ ಬಂದ್ ಮಾಡಲಾಯಿತು.