ಜಿಲ್ಲಾಸ್ಪತ್ರೆ ಪಾರ್ಕ್‌ನಲ್ಲಿ ಊಟ, ತಿಂಡಿಗೆ ನಿಷೇಧ: ಡಿಸಿ ಸೂಚನೆ

By Kannadaprabha News  |  First Published Jul 31, 2019, 8:45 AM IST

ಜಿಲ್ಲಾಸ್ಪತ್ರೆ ಪಾರ್ಕ್‌ನಲ್ಲಿ ವಾಯವಿಹಾರಕ್ಕೆ ಮಾತ್ರ ಅನುಮತಿ ನೀಡಬೇಕು. ಕಡ್ಡಾಯವಾಗಿ ಯಾರೂ ಪಾರ್ಕ್ ಒಳಗಡೆ ಕುಳಿತು ಊಟ, ತಿಂಡಿ ಮಾಡಬಾರದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಆದೇಶ ನೀಡಿದ್ಧಾರೆ.


ದಾವಣಗೆರೆ(ಜು.31): ಜಿಲ್ಲಾಸ್ಪತ್ರೆ ಆವರಣದ ಉದ್ಯಾನವನದಲ್ಲಿ ರೋಗಿಗಳು ಅವರ ಕುಟುಂಬ ವರ್ಗದವರು, ಸಾರ್ವಜನಿಕರು ತಿಂಡಿ, ಊಟ ಮಾಡಲು ಯಾವುದೇ ಕಾರಣಕ್ಕೂ ಬಿಡದೇ, ವಾಕ್‌ ಮಾಡಲು ಮಾತ್ರ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆಗೆ ಸೂಚಿಸಿದರು.

ಪಾರ್ಕನ್ನು ಸ್ವಚ್ಛ ಮಾಡಿಸಿ ಕೊಡುತ್ತೇವೆ. ನಾಳೆಯಿಂದ ರೋಗಿಗಳನ್ನು,ರೋಗಿ ಕಡೆಯವರಿಗೆ ಅಡುಗೆ ಮಾಡಲು ಪಾರ್ಕ್‌ನೊಳಗೆ ಬಿಟ್ಟು ಬಿಡಿಯೆಂದು ಕಿಡಿಕಾರಿದರು.

Tap to resize

Latest Videos

ಅದಕ್ಕೆ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ, ಇಲ್ಲಿ ಅಡುಗೆ ಮಾಡಿಕೊಳ್ಳಲ್ಲ ಸಾರ್‌. ಹೊರಗಡೆಯಿಂದ ತಂದು ಊಟ ಮಾಡುತ್ತಾರೆಂದು ಸಮರ್ಥನೆಗೆ ಮುಂದಾದಾಗ ಡಿಸಿ ಶಿವಮೂರ್ತಿ, ಇಲ್ಲಿ ಊಟ ಮಾಡಲು ಬಿಟ್ಟರೆ ಮತ್ತೆ ಗಲೀಜು ಮಾಡುತ್ತಾರೆ. ಹೀಗಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ವಾಕಿಂಗ್‌ಗೆ ಮಾತ್ರ ಪಾರ್ಕ್‌:

ಇನ್ನು ಮುಂದೆ ಇಲ್ಲಿ ಯಾರಿಗೂ ತಿಂಡಿ, ಊಟಕ್ಕೆ ಬಿಡಬೇಡಿ. ಡಸ್ಟ್‌ ಬಿನ್‌ ಇಟ್ಟು ಸ್ವಚ್ಛತೆ ಕಾಪಾಡಬೇಕು. ಅಗತ್ಯ ಬಿದ್ದರೆ ಒಬ್ಬ ಸೆಕ್ಯೂರಿಟಿ ಗಾರ್ಡ್‌ಗೆ ಇಲ್ಲಿಗೆ ನಿಯೋಜಿಸಿ. ಪಾರ್ಕ್ ಸುತ್ತಲೂ ಟ್ರಂಚ್‌ ನಿರ್ಮಿಸಿ, ಗೇಟ್‌ ಅಳವಡಿಸಿ, ಬೀಗ ಹಾಕಿ, ಬೆಳಗ್ಗೆ ಹೊತ್ತು ಮಾತ್ರ ಬೀಗ ತೆಗೆಯಬೇಕು. ವಾಯು ವಿಹಾರಿಗಳು, ರೋಗಿಗಳಿಗೆ ಮಾತ್ರ ವಾಕಿಂಗ್‌ಗೆ ಒಳಗೆ ಬಿಡಿ ಎಂದು ಹೇಳಿದರು.

ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಆಗ್ರಹ:

ಜಿಲ್ಲಾಸ್ಪತ್ರೆಯಲ್ಲಿ ಶುದ್ದ ಕುಡಿಯುವ ನೀರಿನ ಬಗ್ಗೆ ಜಿಲ್ಲಾಧಿಕಾರಿ ಪ್ರಶ್ನೆಗೆ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ, ಹೊರಗಡೆಯಿಂದಲೇ ರೋಗಿಗಳ ಸಂಬಂಧಿಗಳು ಕುಡಿಯಲು ನೀರು ತಂದು ಕೊಡುತ್ತಾರೆ. ಪಾರ್ಕ್‌ನಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದರೆ ಅನುಕೂಲವಾಗುತ್ತದೆಂದು ಮನವಿ ಮಾಡಿದರು.

ದಾವಣಗೆರೆ: ರಾಸಾಯನಿಕ ಬಣ್ಣದ ಗಣೇಶನ ಮೂರ್ತಿ ನಿಷೇಧ

ಅದಕ್ಕೆ ಜಿಲ್ಲಾಧಿಕಾರಿ ಶಿವಮೂರ್ತಿ ಮಾತನಾಡಿ, ಪಾರ್ಕ್ ಅಭಿವೃದ್ಧಿ ಜೊತೆಗೆ ಪಾರ್ಕ್ನಲ್ಲೇ ಆರ್‌ಓ ಪ್ಲಾಂಟ್‌ ಹಾಕಿಸಿ, ಹೊರಗಡೆ ನೀರು ಹಿಡಿಯಲು ವ್ಯವಸ್ಥೆ ಮಾಡಿಕೊಡಿ. ಇದೊಂದು ಪುಣ್ಯದ ಕೆಲಸ ಮಾಡಿಕೊಡಿ ಎಂಬುದಾಗಿ ಉದ್ಯಮಿ ಡಾ.ರವಿರಾಜ್‌ ಇಳಂಗೋವನ್‌ರಿಗೆ ತಿಳಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ಎಚ್‌.ವಿಶ್ವನಾಥ, ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಕೊಟ್ರೇಶ, ಮಹಾರಾಜ ಸೋಫ್ಸ್‌ ಅಂಡ್‌ ಡಿಟರ್ಜೆಂಟ್ಸ್‌ ಇಂಡಸ್ಟ್ರೀ ಮಾಲೀಕ ಡಾ.ರವಿರಾಜ್‌ ಇಳಂಗೋವನ್‌, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಬಿ.ಮುದ್ಗಲ್‌, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ದೇವರಮನೆ ಗಿರೀಶ, ಕನ್ನಡ ಪರ ಹೋರಾಟಗಾರ ಕೆ.ಟಿ.ಗೋಪಾಲಗೌಡ ಇತರರು ಇದ್ದರು.

click me!