ಒಂದು ದಿನ ಬೈಯಪ್ಪನಹಳ್ಳಿ- ಎಂಜಿ ರಸ್ತೆ ಮೆಟ್ರೋ ಸೇವೆ ಇರಲ್ಲ

Published : Jul 31, 2019, 08:12 AM ISTUpdated : Jul 31, 2019, 08:13 AM IST
ಒಂದು ದಿನ ಬೈಯಪ್ಪನಹಳ್ಳಿ- ಎಂಜಿ ರಸ್ತೆ ಮೆಟ್ರೋ ಸೇವೆ ಇರಲ್ಲ

ಸಾರಾಂಶ

ಒಂದು ದಿನ ಬೆಂಗಳೂರಿನ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಇರುವುದಿಲ್ಲ. ಗ್ರಾಹಕರು ಅಂದು ಬದಲಿ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕಿದೆ. 

ಬೆಂಗಳೂರು [ಜು.31]:  ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ಆ.3ರಂದು ರಾತ್ರಿ 9.30ರಿಂದ ಆ.4ರಂದು ಬೆಳಗ್ಗೆ 11ರ ವರೆಗೆ ಬೈಯಪ್ಪನಹಳ್ಳಿ- ಮಹಾತ್ಮಗಾಂಧಿ ರಸ್ತೆ (ಎಂ.ಜಿ.ರಸ್ತೆ) ಮೆಟ್ರೋ ನಿಲ್ದಾಣದ ನಡುವೆ ಮೆಟ್ರೋ ರೈಲಿನ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗಿನ ಸೇವೆಯ ಕೊನೆಯ ರೈಲು ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಆ.3ರಂದು ರಾತ್ರಿ 9.30ಕ್ಕೆ ಹಾಗೂ ಮೈಸೂರು ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ನಿಲ್ದಾಣದ ಕೊನೆಯ ರೈಲು ರಾತ್ರಿ 9ಕ್ಕೆ ಹೊರಡಲಿದೆ. ಆದರೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಸೇವೆ ಎಂದಿನಂತೆ ಇರುತ್ತದೆ.

ಆ.4ರಂದು ಬೆಳಗ್ಗೆ 11ರ ನಂತರ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಮೆಟ್ರೋ ರೈಲಿನ ಸೇವೆಗಳು ಎಂದಿನಂತೆ ಇರಲಿವೆ. ಹಸಿರು ಮಾರ್ಗದ (ಯಲಚೇನಹಳ್ಳಿ- ನಾಗಸಂದ್ರ) ಮೆಟ್ರೋ ರೈಲಿನ ಸೇವೆಗಳು ನಿಗದಿಯಂತೆ ನಡೆಯಲಿವೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸೇಠ್‌ ತಿಳಿಸಿದ್ದಾರೆ.

PREV
click me!

Recommended Stories

ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ