ಕಾರ್ಪೋರೇಟರ್‌ಗಳನ್ನೂ ಕೇಳದೇ ಹಣ ಕೊಟ್ಟವರಿಗೆ ಮನೆ ಕೊಟ್ಟ ಅಧಿಕಾರಿಗಳು
ದಾವಣಗೆರೆ ನಗರದಲ್ಲಿನ ಸರ್ಕಾರ ಮನೆಗಳು ಉಳ್ಳವರ ಪಾಲು
ಬಡಜನರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೂ ಸಿಗದ ಸೂರು
ವರದಿ- ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಫೆ.22): ನಿರಾಶ್ರಿತರಿಗಾಗಿ ಸರ್ಕಾರ ಸಾಕಷ್ಟು ವಸತಿ ಹಾಗೂ ನಿವೇಶನದ ಸೌಲಭ್ಯಗಳನ್ನು ಕಲ್ಪಸುತ್ತಿದೆ. ಒಟ್ಟು 27 ಸಾವಿರಕ್ಕೂ ಅಧಿಕ ಜನರು ತಮಗೆ ಮನೆ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ವಾರ್ಡ್‌ಗಳ ಜನಪ್ರತಿನಿಧಿಗಳಾದ ಕಾರ್ಪೋರೇಟರ್‌ಗಳನ್ನೂ ಕೇಳದೆ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಲಕ್ಷ, ಲಕ್ಷ ಹಣ ಪಡೆದು ಉಳ್ಳವರಿಗೆ ಮನೆಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರದ ಸೌಲಭ್ಯಗಳು ಬಡವರಿಗಾಗಿಯೇ ಹಂಚಿಯಾಗುವ ನಿವೇಶನಗಳು ಸರಿಯಾದ ಫಲಾನುಭವಿಗಳಿಗೆ ಕೈ ಸೇರುತ್ತಿಲ್ಲ ಎಂಬ ಆರೋಪಗಳನ್ನು ಸ್ವತಃ ಪಾಲಿಕೆ ಸದಸ್ಯರೇ ಮಾಡಿದ್ದಾರೆ. ಕಳೆದ ದಿನ ನಡೆದ ಬಜೆಟ್ ಮಂಡನೆಯಲ್ಲಿ ಪಾಲಿಕೆಯ ಕೈ ಕಮಲದ ಸದಸ್ಯರು ಈ ವಿಚಾರವನ್ನು ಪ್ರಾಸ್ತಾಪಿಸುವ ಮೂಲಕ ತನಿಖೆಗೆ ಆಗ್ರಹಿಸಿದ್ದಾರೆ. ದುರಂತ ಅಂದ್ರೇ ಇಲ್ಲಿ ತನಕ 1600 ಕ್ಕು ಹೆಚ್ಚು ನಿವೇಶನಗಳನ್ನು ದಾವಣಗೆರೆ ದಕ್ಷಿಣ ಹಾಗು ಉತ್ತರ ಮತಕ್ಷೇತ್ರಗಳಲ್ಲಿ ಹಂಚಿಕೆ ಮಾಡಲಾಗಿದೆ. ನಿರಾಶ್ರಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಬದಲು ತಮಗೆ ಬೇಕಾದವರಿಗೆ ಹಂಚಿಕೆ ಮಾಡಲಾಗಿದೆಯಂತೆ.
ದಾವಣಗೆರೆ ಪಾಲಿಕೆ ಬಜೆಟ್: ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಬಂದ ಕಾಂಗ್ರೆಸ್ ಸದಸ್ಯರು!
ನಗರಸಭೆ ಆಡಳಿತದಲ್ಲಿ ಶ್ಯಾಮನೂರು ಶಿವಂಕರಪ್ಪ ಹಸ್ತಕ್ಷೇಪ: ಕಾಂಗ್ರೆಸ್ ಪಾಲಿಕೆ ಸದಸ್ಯ ನಾಗರಾಜ್, ಚಮನ್ ಸಾಬ್ ಸೇರಿದ್ದಂತೆ ಸಾಕಷ್ಟು ಬಿಜೆಪಿ ಪಾಲಿಕೆ ಸದಸ್ಯರ ವಾರ್ಡ್ ಗಳಲ್ಲಿ ಸದಸ್ಯರಿಗೆ ಗೊತ್ತಿಲ್ಲದೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಕೆರೆಳಿಸಿದೆ. ಇನ್ನು ಬಜೆಟ್ ಸಭೆಯಲ್ಲಿ ಆಶ್ರಯ ಕಮಿಟಿಯ ಮ್ಯಾನೇಜರ್ ಗೋವಿಂದ್ ನಾಯಕ್ ರವರಿಗೆ ಪಾಲಿಕೆ ಸದಸ್ಯರು ಕೇಳಿದ್ರೇ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎ. ರವಿಂದ್ರನಾಥ್ ರವರು ಹೇಳಿದ್ದಂತೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದರು.
27 ಸಾವಿರ ವಸತಿರಹಿತರಿಂದ ಅರ್ಜಿ ಸಲ್ಲಿಕೆ: ಇನ್ನು ಇದರ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮೇಯರ್ ಬಿಜೆಪಿ ಮುಖಂಡ ಬಿಜೆ ಅಜಯ್ ಕುಮಾರ್ ರವರು 27 ಸಾವಿರ ಜನ ಮನೆ ಇಲ್ಲದೆ ಇರುವವರು ಅರ್ಜಿ ಹಾಕಿದ್ದಾರೆ. ನಿವೇಶನ ಬಡವರಿಗೆ ಸಿಗುವ ಬದಲು ಇದ್ದಂತವರ ಪಾಲಾಗಿವೆ. ಸಂಬಂಧ ಪಟ್ಟವರ ಗಮನಕ್ಕೆ ತರಲು ನಿರ್ಧಾರ ಮಾಡಿದ್ದು, ಇದು ತನಿಖೆಯಾಗ್ಬೇಕು, ನಿಜವಾದ ನಿರಾಶ್ರಿತರಿಗೆ ಸೂರು ಸಿಗ್ಬೇಕಾಗಿದೆ. ಇನ್ನು ಆಶ್ರಯ ಕಮಿಟಿಯ ಮ್ಯಾನೇಜರ್ ಗೋವಿಂದ್ ನಾಯಕ್ ರವರು ಸುಮಾರು ವರ್ಷಗಳಿಂದ ಆಸ್ರು ಕಮಿಟಿಯಲ್ಲಿದ್ದು, ಯಾರೋ ಶಾಸಕರು ಹೇಳಿದ್ರು ಎಂದು ನಿವೇಶನ ಹಂಚಿಕೆ ಮಾಡಿದ್ದಾರೆ, ಇನ್ನು 1 ರಿಂದ 2 ಲ್ಷ ಹಣ ಪಡೆದು ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಇಂದು ಖಂಡನೀಯ ಎಂದು ಬಿಜಿ ಅಜಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
Davanagere News: ಮಾ.4ಕ್ಕೆ ಮೇಯರ್,ಉಪ ಮೇಯರ್ ಚುನಾವಣೆ
ಹಣ ಕೊಟ್ಟವರಿಗೆ ಹಕ್ಕುಪತ್ರಗಳ ಹಂಚಿಕೆ: ಇನ್ನು ಪಾಲಿಕೆ ಸದಸ್ಯರಿಗೆ ಈ ನಿವೇಶನ ಹಂಚಿಕೆಯಲ್ಲಿ ಕಿವಿ ಹೂವು ಮುಡಿಸಲಾಗಿದ್ದು, ತಮ್ಮ ವಾರ್ಡುಗಳಲ್ಲಿ ನಿವೇಶನ ಹಂಚಿಕೆ ಮಾಡಿರುವುದು ಗಮನಕ್ಕೆ ಬಂದಿಲ್ಲವಂತೆ. ಇನ್ನು ಈ ನಿವೇಶನಗಳು ಬಡವರ ಪಾಲಾಗದೆ ಉಳ್ಳವರ ಪಾಲಾಗಿದೆ. ಒಂದು ವಾರ್ಡಿನಲ್ಲಿ ಒಂದು ಲಕ್ಷ ಹಣ ಪಡೆದು 15 ಹಕ್ಕು ಪತ್ರಗಳನ್ನು ಹಂಚಿಕೆ ಮಾಡಲಾಗಿದೆಯಂತೆ. ಇನ್ನು ಹಣ ಪಡೆದು ನಿವೇಶನ ಪಡೆದುಕೊಂಡವರಿಗೆ ಹಣ ಕೊಟ್ಟಿರುವುದು ಯಾರ ಬಳಿಯೂ ಹೇಳದಂತೆ ಸ್ವತಃ ಅಧಿಕಾರಿಗಳೇ ಮನವಿ ಮಾಡಿಕೊಂಡಿದ್ದಾರಂತೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಪಾಲಿಕೆ ಕೈ ಸದಸ್ಯ ನಾಗರಾಜ್ ರವರು ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯ ಆಗಿದ್ದು, ಇದರ ಬಗ್ಗೆ ಕಮಿಷನರ್ ಅವರಿಗೆ ತನಿಖೇ ಮಾಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ತಮ್ಮ ವಾರ್ಡಿನಲ್ಲಿ 01 ರಿಂದ 02 ಲಕ್ಷ ಪಡೆದು ತನ್ನ ಗಮನಕ್ಕೆ ಬಾರದೆ 15 ಹಕ್ಕು ಪತ್ರಗಳನ್ನು ಅಧಿಕಾರಿಗಳು ಹಂಚಿಕೆ ಮಾಡಿದ್ದಾರಂತೆ. ಇನ್ನು ಈ ವಿಚಾರವಾಗಿ ಯಾರು ಎಲ್ಲೂ ಬಾಯಿ ಬಿಡದಂತೆ ಹಣ ನೀಡಿ ನಿವೇಶನ ಪಡೆದವರಿಗೆ ಅಧಿಕಾರಿಗಳು ಧಮ್ಕಿ ಹಾಕಿದ್ದಾರೆ ಎಂದು ತಿಳಿಸಿದರು. ಒಟ್ಟಾರೆ ನಿವೇಶನಗಳು ಇದ್ದವರ ಪಾಲಾಗುವ ಬದಲು ನಿರಾಶ್ರಿತರಿಗೆ ದೊರೆಯುವಂತೆ ಪಾಲಿಕೆ ಕಮಿಷನರ್ ಮಾಡಬೇಕಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ ಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಸದಸ್ಯರ ವಾಗ್ವಾದ