ಶ್ರೀರಾಮುಲು ಪುತ್ರಿ ವಿವಾಹ| ಬಳ್ಳಾರಿ ನಗರದ ಮನೆಯಲ್ಲಿ ಗುರುವಾರ ಬೆಳಗ್ಗೆಯಿಂದಲೇ ವಿವಾಹ ಮುನ್ನದ ವಿವಿಧ ವಿಧಿ-ವಿಧಾನಗಳು ನಡೆದವು| ಹೈದರಾಬಾದ್‌ನಿಂದ ವರನ ಕಡೆಯಿಂದ ಸಂಬಂಧಿಕರ ಆಗಮನ|
ಬಳ್ಳಾರಿ(ಫೆ.28): ಆರೋಗ್ಯ ಸಚಿವ ಬಿ. ಶ್ರೀರಾಮುಲು ಪುತ್ರಿ ವಿವಾಹ ಹಿನ್ನೆಲೆಯಲ್ಲಿ ನಗರದ ಹವಾಂಭಾವಿ ಪ್ರದೇಶದಲ್ಲಿನ ಶ್ರೀರಾಮುಲು ನಿವಾಸದಲ್ಲಿ ಸಂಭ್ರಮ ಮೇಳೈಸಿದೆ.
ಸಚಿವ ಶ್ರೀರಾಮುಲು ಮಗಳ ಮದುವೆ ಸಮಾರಂಭದ ಕೆಲ ಫೋಟೋಸ್
ಶ್ರೀರಾಮುಲು ಪುತ್ರಿ ರಕ್ಷಿತಾ ಮದುವೆಗೆ ದಿನಗಣನೆ ಶುರುವಾಗಿದ್ದು, ಮನೆಯಲ್ಲಿ ಗುರುವಾರ ಬೆಳಗ್ಗೆಯಿಂದಲೇ ವಿವಾಹ ಮುನ್ನದ ವಿವಿಧ ವಿಧಿ-ವಿಧಾನಗಳು ನಡೆದವು. ಬೀಗರನ್ನು ಮದುವೆಗೆ ಆಹ್ವಾನಿಸುವ ಕಾರ್ಯ ಜರುಗಿತು. ಹೈದರಾಬಾದ್‌ನಿಂದ ವರನ ಕಡೆಯಿಂದ ಸಂಬಂಧಿಕರು ಆಗಮಿಸಿದ್ದು ಶ್ರೀರಾಮುಲು ಮನೆಯಲ್ಲಿ ನೂರಾರು ಜನರು ವಿವಾಹ ಕಾರ್ಯದಲ್ಲಿ ಭಾಗಿಯಾಗಿದ್ದರು.
ಶ್ರೀರಾಮುಲು ಮಗಳ ಮದುವೆ: ವಧು, ವರರಿಗೆ ಶುಭ ಕೋರಿದ ಮೋದಿ
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬಿ. ಶ್ರೀರಾಮುಲು, ಮಗಳ ಮದುವೆಯ ಶಾಸ್ತ್ರ ಕಾರ್ಯ ನಡೆಯುತ್ತಿದೆ. ಮಾ. 5ರಂದು ಬೆಂಗಳೂರಿನಲ್ಲಿ ವಿವಾಹ ಏರ್ಪಡಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿಗಳು ವಿವಾಹಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಭಿನಂದನಾ ಪತ್ರ ಕಳಿಸಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ವಿವಾಹದ ಬಳಿಕ ಬಳ್ಳಾರಿಯಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮುಲು ತಿಳಿಸಿದರು.