ದತ್ತಜಯಂತಿಯಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ದತ್ತಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆ
ಚಿಕ್ಕಮಗಳೂರು(ಅ.30): ಜಿಲ್ಲೆಯ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 12 ದಿನಗಳವರೆಗೆ 12 ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ. ಈ ಸಂದರ್ಭದಲ್ಲಿ ವಿವಾದಿತ ದತ್ತಾತ್ರೇಯ ಗುಹೆಯ ಮುಂಭಾಗ ಹೋಮ ಪೂಜೆ ಮಾಡುವುದಾಗಿ ಭಜರಂಗದಳ ಕರೆ ನೀಡಿದೆ.
ವಿಶ್ವ ಹಿಂದೂ ಷರಿಷತ್, ಭಜರಂಗದಳದ ನೇತೃತ್ವದಲ್ಲಿ ದತ್ತಜಯಂತಿ ನಡೆಯಲಿದೆ. ದತ್ತ ಪೀಠದ ತಾತ್ಕಾಲಿಕ ಶೆಡ್‌ನಲ್ಲಿ ಮುಸ್ಲಿಂರು ಮಾಂಸಹಾರ ಸೇವನೆ ಮಾಡಿರುವ ಹಿನ್ನೆಲೆಯಲ್ಲಿ ವಿವಾದಿತ ಪ್ರದೇಶದಲ್ಲೇ ಹೋಮ ಮಾಡುವುದಾಗಿ ಭಜರಂಗದಳ ಘೋಷಿಸಿದೆ.
ಗ್ರಾಪಂ ಸದಸ್ಯ- ಪಿಡಿಓ ಮಾರಾಮಾರಿ: ಠಾಣೆ ಎದುರು ಕಾಂಗ್ರೆಸ್ ಪ್ರತಿಭಟನೆ
ನವೆಂಬರ್ 28 ರಿಂದ ಡಿಸೆಂಬರ್ 12 ದಿನಗಳವರೆಗೂ ದತ್ತಜಯಂತಿ ನಡೆಯಲಿದೆ. ದತ್ತಜಯಂತಿಯಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ದತ್ತಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ದತ್ತಜಯಂತಿ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ.