ಗಜೇಂದ್ರಗಡದಲ್ಲಿ ಸಂಭ್ರಮದ ದಸರಾ ಮಹೋತ್ಸವ

Published : Oct 07, 2019, 10:07 AM ISTUpdated : Oct 07, 2019, 12:11 PM IST
ಗಜೇಂದ್ರಗಡದಲ್ಲಿ ಸಂಭ್ರಮದ ದಸರಾ ಮಹೋತ್ಸವ

ಸಾರಾಂಶ

ಪಟ್ಟಣದ ಜಗದಂಬಾ ದೇವಸ್ಥಾನ, ಬನಶಂಕರಿದೇವಿ, ಚೌಡೇಶವರಿ ಹಾಗೂ ಹುಲಿಗೆಮ್ಮ ಇನ್ನಿತರ ಆದಿಶಕ್ತಿ ದುರ್ಗಾದೇವಿ ದೇಗುಲದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ| ಸದ್ಭಕ್ತರು 9 ದಿನ ಆರಾಧಿಸುವ ದುರ್ಗಾದೇವಿಯ ಘಟಸ್ಥಾಪನೆ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳು ಸೇರಿ ಧಾರ್ಮಿಕ ಕಾರ್ಯಕ್ರಮಗಳು ಪಟ್ಟಣ ಸೇರಿದಂತೆ ಸುತ್ತ ಗ್ರಾಮಗಳ ಸದ್ಭಕ್ತರು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಿದ್ದಾರೆ| ಬೆಳಗ್ಗೆ ಸಾಮೂಹಿಕ ಭಜನೆ, ಪುರಾಣ, ಪ್ರವಚನ, ಮಹಾ ಮಂಗಳಾರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತರು| 

ಗಜೇಂದ್ರಗಡ(ಅ.7): ಪಟ್ಟಣದ ಜಗದಂಬಾ ದೇವಸ್ಥಾನ, ಬನಶಂಕರಿದೇವಿ, ಚೌಡೇಶವರಿ ಹಾಗೂ ಹುಲಿಗೆಮ್ಮ ಇನ್ನಿತರ ಆದಿಶಕ್ತಿ ದುರ್ಗಾದೇವಿ ದೇಗುಲದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ ಪ್ರಯುಕ್ತ ಸದ್ಭಕ್ತರು 9 ದಿನ ಆರಾಧಿಸುವ ದುರ್ಗಾದೇವಿಯ ಘಟಸ್ಥಾಪನೆ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳು ಸೇರಿ ಧಾರ್ಮಿಕ ಕಾರ್ಯಕ್ರಮಗಳು ಪಟ್ಟಣ ಸೇರಿದಂತೆ ಸುತ್ತ ಗ್ರಾಮಗಳ ಸದ್ಭಕ್ತರು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಿದ್ದಾರೆ.\

ಸ್ಥಳೀಯ ಜಗದಂಬಾ ದೇವಸ್ಥಾನದಲ್ಲಿ ಭವ್ಯವಾಗಿ ದೀಪಾಲಂಕೃತವಾಗಿ ಶೃಂಗಾರಗೊಂಡ ದೇಗುಲ ಹಾಗೂ ಗೋಪುರವು ನವರಾತ್ರಿಯ ಮೆರಗು ಹೆಚ್ಚಿಸುವಂತೆ ಮಾಡಿದೆ. ಬೆಳಗ್ಗೆ ಸಾಮೂಹಿಕ ಭಜನೆ, ಪುರಾಣ, ಪ್ರವಚನ, ಮಹಾ ಮಂಗಳಾರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಸದ್ಭಕ್ತರು ಪಾಲ್ಗೊಂಡು ವೈಶಿಷ್ಟ್ಯಪೂರ್ಣ ಶರನ್ನವರಾತ್ರಿ ಭಕ್ತರಲ್ಲಿ ಉತ್ಸವದ ಜೀವಕಳೆ ತಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೈನಂದಿನ ಜಂಜಾಟದಿಂದ ಬಸವಳಿದ ಜನತೆ ದೇವಸ್ಥಾನಕ್ಕೆ ಆಗಮಿಸಿ, ದುರ್ಗಾಮಾತೆಯ ದರ್ಶನ ಪಡೆದು, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ದೇವಸ್ಥಾನದಲ್ಲಿ ಮಂತ್ರಪುಷ್ಪ, ಸೊತ್ರೕತ್ರ ಪಠಣ, ಭಜನಾ ಮಂಡಳಿಗಳಿಂದ ಭಜನೆ, ಗಾಯಿತ್ರಿ ದೇವಿ ಮಹಿಳಾ ಮಂಡಳ ವತಿಯಿಂದ ದೇವಿಯ ಭಕ್ತಿಗೀತೆ, ಪ್ರವಚನ ನಡೆದುಕೊಂಡು ಬಂದಿದೆ.

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ, ಮರಾಠಾ ಸಮಾಜ ದೇವಾಂಗ ಸಮಾಜ ಬಾಂಧ​ವರು, ಎಲ್ಲ ಸಮುದಾಯ ಭಕ್ತರು ಜತೆಗೂಡಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ ಪ್ರವಚನ ಕೇಳಲು ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಮನಸೂರೆಗೊಳ್ಳುವ ದೇವಿಯ ವಿವಿಧ ಅವತಾರಗಳ ವರ್ಣನೆಯ ರೂಪಾಲಂಕಾರಗಳ ಕುರಿತು ಪ್ರವಚನ ಕೇಳಿದ ಸದ್ಭಕ್ತರ ಭಕ್ತಿ, ಭಾವ ಇಮ್ಮಡಿಗೊಳಿಸಿತು.

ದುರ್ಗಾದೇವಿಯನ್ನು ಹಲವಾರು ರೂಪ, ಅವತಾರಗಳ ಮೂಲಕ ಒಂಭತ್ತು ದಿನ ಆರಾಧನೆ ನಡೆದಿದೆ. ನವರಾತ್ರಿಯಲ್ಲಿ ಮಾತ್ರ ಪ್ರತಿದಿನ ದೇವಿಯ ಒಂಬತ್ತು ರೂಪಗಳಲ್ಲಿ ಪೂಜಿಸಿ, ಭಕ್ತರು ಧನ್ಯತೆಯೊಂದಿಗೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತಿದೆ ಎಂಬುದು ಆಸ್ತಿಕರ ವಿಶ್ವಾಸ. ಅಲ್ಲದೇ ಈ ಒಂಬತ್ತು ಸ್ವರೂಪಗಳನ್ನು ಪೂಜಿಸಿದರೆ ಉಪಾಸಕರ ನೆಮ್ಮದಿ, ಸಂತೃಪ್ತಿ, ಪಾರಮಾರ್ಥಿಕ ಸೌಖ್ಯ ಪಡೆಯುತ್ತಾನೆ ಎಂಬುದು ಭಕ್ತರ ನಂಬಿಕೆ.
 

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!