'ದೂರು ನೀಡಲು ಹೋದ ಮಹಿಳೆ ಬಳಿ PSI ಹಿಂಗಾ ನಡೆದುಕೊಳ್ಳೋದು'

Kannadaprabha News   | Asianet News
Published : Dec 16, 2020, 11:33 AM IST
'ದೂರು ನೀಡಲು ಹೋದ ಮಹಿಳೆ ಬಳಿ PSI ಹಿಂಗಾ ನಡೆದುಕೊಳ್ಳೋದು'

ಸಾರಾಂಶ

ದೂರು ನೀಡಲು ಹೋಗಿದ್ದ ಮಹಿಳೆ ಬಳಿ ಪೊಲೀಸ್ ಅಧಿಕಾರಿ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗಿದೆ. 

ರಾಮನಗರ (ಡಿ.16): ಹಾರೋಹಳ್ಳಿ ಪೊಲೀಸ್‌ ಠಾಣೆ ಉಪ ನಿರೀಕ್ಷಕ ಮುರುಳಿ ದಲಿತ ವಿರೋಧಿ​ ನೀತಿಯನ್ನು ಅನುಸರಿಸುತ್ತಿದ್ದು, ಇವರ ವಿರುದ್ಧ ಇಲಾಖೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿ​ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪಿಎಸ್‌ಐ ಮುರುಳಿ ದಲಿತ ವಿರೋಧಿ​ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಇವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಗಿರೀಶ್‌ ಅವರಿಗೆ ಮನವಿ ಸಲ್ಲಸಿದರು.

ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಬೋರ್ಡ್‌ ಮೇಲೆ ಬರೆದು ಆತ್ಮಹತ್ಯೆಗೆ ಶರಣಾದ ಶಿಕ್ಷಕ .

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ, ದಲಿತ ಹಾಗೂ ಜನ ವಿರೋಧಿ​ಯಾಗಿರುವ ಹಾರೋಹಳ್ಳಿ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಮುರಳಿ ಅವರನ್ನು ಈ ಕೂಡಲೆ ಅಮಾನತು ಮಾಡಬೇಕು. ಇಂತಹ ಅ​ಧಿಕಾರಿಗಳಿಂದಾಗಿಯೇ ಪೊಲೀಸ್‌ ವ್ಯವಸ್ಥೆ ಮೇಲೆ ಜನತೆಗೆ ನಂಬಿಕೆ ಹೊರಟು ಹೋಗಿದೆ ಎಂದು ಹೇಳಿದರು.

ಡಿ.13ರಂದು ಕನಕಪುರ ತಾಲೂಕಿನ ಗೂಗಾರೇದೊಡ್ಡಿ ಗ್ರಾಮದಲ್ಲಿ ವಾಸವಾಗಿರುವ ಪರಿಶಿಷ್ಟಜಾತಿಗೆ ಸೇರಿದ ಕಾಳಮ್ಮ ಎಂಬ ಮಹಿಳೆ ಠಾಣೆಯಲ್ಲಿ ದೂರು ನೀಡಲು ಹೋದಾಗ, ಠಾಣಾ​ಧಿಕಾರಿ ಮಹಿಳೆ ಎಂಬ ಕನಿಷ್ಠ ಗೌರವ ನೀಡದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಪರಿಶಿಷ್ಟಜಾತಿ ದೌರ್ಜನ್ಯದ ದೂರನ್ನು ಸ್ವೀಕರಿಸದೆ ದೂರುದಾರರ ಎದುರಾಳಿಯ ಜೊತೆ ಶಾಮೀಲಾಗಿ, ಬೆದರಿಸಿ, ಬಲವಂತವಾಗಿ ಬೇರೆ ದೂರು ಬರೆಸಿ ಸಹಿ ಹಾಕಿಸಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

PREV
click me!

Recommended Stories

Bengaluru New Year 2026: ಎಂಜಿ ರೋಡ್ ಬಿಟ್ಟು ಕೋರಮಂಗಲಕ್ಕೆ ಜನಸಾಗರ; ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಜೊತೆ ಟೋಯಿಂಗ್ ಚಾಲಕನ ಕಿರಿಕ್!
ಹೊಸ ವರ್ಷಕ್ಕೆ ಕೆಲವೇ ಹೊತ್ತಲ್ಲಿ ಶಾಕ್! ಕೊಳ್ಳೇಗಾಲದಲ್ಲಿ ಭೀಕರ ಅಗ್ನಿ ಅವಘಡ; ಬೇಕರಿ ಸೇರಿದಂತೆ ಮೂರು ಅಂಗಡಿಗಳು ಭಸ್ಮ!