ಕಣ್ಣೂರು ಏರ್ಪೋರ್ಟ್‌ನಿಂದ ತಪ್ಪಿಸಿಕೊಂಡ್ರಾ‌ 30ಕ್ಕೂ ಅಧಿಕ ಕನ್ನಡಿಗರು..?

By Kannadaprabha NewsFirst Published Jun 30, 2020, 8:01 AM IST
Highlights

ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಜೂ.27ರಂದು ಬಂದಿಳಿದ 150 ಕನ್ನಡಿಗರಲ್ಲಿ ಕೇರಳದಿಂದ ಆಗಮಿಸಿದವರಲ್ಲಿ 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಮಂಗಳೂರು(ಜೂ.30): ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಜೂ.27ರಂದು ಬಂದಿಳಿದ 150 ಕನ್ನಡಿಗರಲ್ಲಿ ಕೇರಳದಿಂದ ಆಗಮಿಸಿದವರಲ್ಲಿ 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಈ ನಡುವೆ ಕೇರಳದಿಂದ ಆಗಮಿಸಿದವರಲ್ಲಿ 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದ್ದು, ಇದನ್ನು ಜಿಲ್ಲಾಧಿಕಾರಿ ಅಲ್ಲಗಳೆದಿದ್ದಾರೆ. ಎಲ್ಲ 150 ಮಂದಿಗೂ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಯಾರೂ ತಪ್ಪಿಸಿಕೊಂಡಿಲ್ಲ ಎಂದಿದ್ದಾರೆ.

SSLC ಪರೀಕ್ಷೆಗೆ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾ ಪಲ್ಟಿ: ನಾಲ್ವರಿಗೆ ಗಾಯ

ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಜೂ.27ರಂದು ಬಂದಿಳಿದ 150 ಕನ್ನಡಿಗರನ್ನು ಸೋಮವಾರ ಬೆಳಗ್ಗೆ ಮಂಗಳೂರಿಗೆ ಕರೆತಂದು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ದುಬೈನ ಕರ್ನಾಟಕ ಕಲ್ಚರಲ್‌ ಫೌಂಡೇಶನ್‌ ಕಣ್ಣೂರಿಗೆ ವಿಮಾನ ವ್ಯವಸ್ಥೆ ಮಾಡಿತ್ತು. ಆರಂಭದಲ್ಲಿ ಕಾಸರಗೋಡಿನ ಮೂರು ಹೊಟೇಲ್‌ಗಳಲ್ಲಿ ಕನ್ನಡಿಗರನ್ನು ಕ್ವಾರಂಟೈನ್‌ ಮಾಡಲು ನಿರ್ಧರಿಸಲಾಗಿತ್ತು.

ಮುಖ್ಯ ರಸ್ತೆಯಲ್ಲೇ ಮೊಸಳೆ ಮರಿ ಪ್ರತ್ಯ​ಕ್ಷ..!

ಆದರೆ ಅಲ್ಲಿನ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿದ್ದರು. ಸಂಕಷ್ಟದಲ್ಲಿದ್ದ ಜನರು ಭಾನುವಾರ ರಾತ್ರಿ ಸಹಾಯಕ್ಕಾಗಿ ಶಾಸಕ ಯು.ಟಿ. ಖಾದರ್‌ ಅವರನ್ನು ಸಂಪರ್ಕಿಸಿದ್ದು, ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್‌ ಅವರೊಂದಿಗೆ ಚರ್ಚಿಸಿ ಅವರನ್ನು ಮಂಗಳೂರಿಗೆ ಕರೆತರಲು ಬಸ್‌ ವ್ಯವಸ್ಥೆ ಮಾಡಲಾಯಿತು.

ಅದರಂತೆ ಅವರೆಲ್ಲರನ್ನು ನಾಲ್ಕು ಬಸ್‌ಗಳಲ್ಲಿ ಮಂಗಳೂರಿಗೆ ಕರೆತರಲಾಗಿದೆ. ಎಲ್ಲ 150 ಜನರನ್ನು ಮಂಗಳೂರಿನ ಮೂರು ಹೊಟೇಲ್‌ಗಳು ಮತ್ತು ದೇರಳಕಟ್ಟೆಯ ಒಂದು ಹೊಟೇಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

click me!