Tumakur : ಹೈನುಗಾರರು ಗುಣಮಟ್ಟದ ಹಾಲು ಸರಬರಾಜು ಮಾಡಿ

By Kannadaprabha NewsFirst Published Jul 14, 2023, 5:23 AM IST
Highlights

ಹಾಲು ಅಮೃತಕ್ಕೆ ಸಮಾನ, ಜಗತ್ತಿನಲ್ಲಿ ಹಾಲಿಗಿಂತ ಶ್ರೇಷ್ಠ ಉತ್ಪನ್ನ ಇಲ್ಲ. ಆದ್ದರಿಂದ ಹೈನುಗಾರರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಉತ್ತಮ ಆದಾಯಗಳಿಸಿ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಹೇಳಿದರು.

 ಶಿರಾ : ಹಾಲು ಅಮೃತಕ್ಕೆ ಸಮಾನ, ಜಗತ್ತಿನಲ್ಲಿ ಹಾಲಿಗಿಂತ ಶ್ರೇಷ್ಠ ಉತ್ಪನ್ನ ಇಲ್ಲ. ಆದ್ದರಿಂದ ಹೈನುಗಾರರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಉತ್ತಮ ಆದಾಯಗಳಿಸಿ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಹೇಳಿದರು.

ತಾಲೂಕಿನ ಯಾದಲಡಕು, ಬಸವನಹಳ್ಳಿ, ಕಾಮಗೊಂಡನಹಳ್ಳಿ ಗ್ರಾಮಗಳ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹೆಚ್ಚು ಲಾಭಗಳಿಸುವತ್ತ ಆಸಕ್ತಿ ವಹಿಸಿ, ಹಾಲು ಉತ್ಪಾದಕರೊಂದಿಗೆ ಸ್ನೇಹಪೂರ್ವಕ ವಾತಾವರಣ ಕಲ್ಪಿಸಿ ಮುನ್ನಡೆಸಿದಾಗ ಸಂಘಗಳ ಅಭಿವೃದ್ಧಿ ಜೊತೆಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಸಂಘಗಳನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯಬೇಕು ಹಸುಗಳಿಗೆ ಪೌಷ್ಟಿಕ ಮೇವು ನೀಡುವ ಮೂಲಕ ಉತ್ತಮವಾಗಿ ಪೋಷಣೆ ಮಾಡಿದರೆ ಹಾಲಿನ ಇಳುವರಿ ಹೆಚ್ಚಾಗಲಿದೆ ಎಂದರು.

Latest Videos

ಈ ಸಂದರ್ಭದಲ್ಲಿ ಯಾದಲಡಕು ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಭಾಗ್ಯಮ್ಮ ದೇವರಾಜು, ಬಸವನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲಕ್ಷ್ಮೇದೇವಿ ರಾಜಣ್ಣ, ಉಪಾಧ್ಯಕ್ಷರಾದ ಭಾಗ್ಯಮ್ಮ, ಮಂಜಮ್ಮ, ಕಾರ್ಯದರ್ಶಿ ಇಂದ್ರಮ್ಮ, ತುಮಕೂರು ಹಾಲು ಒಕ್ಕಟದ ಶಿರಾ ವಿಭಾಗದ ವಿಸ್ತರಣಾಧಿಕಾರಿ ದಿವಾಕರ್‌, ಶಿಕ್ಷಕ ಓದೋ ಮಾರಪ್ಪ ಸೇರಿದಂತೆ ಸಂಘದ ನಿರ್ದೇಶಕರುಗಳು, ಹಾಲು ಉತ್ಪದಕರುಗಳು, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಕೇರಳದಲ್ಲಿ ನಂದಿನಿ ಬಗ್ಗೆ ದೂರು ಇಲ್ಲ

ವಿಧಾನ ಪರಿಷತ್‌(ಜು.13):  ರಾಜ್ಯದಿಂದ ನೆರೆಯ ಕೇರಳ ರಾಜ್ಯಕ್ಕೆ ಸರಬರಾಜಾಗುವ ನಂದಿನಿ ಹಾಲಿನ ಗುಣಮಟ್ಟಕಳಪೆಯಾಗಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಎಂದಿನಂತೆ ನಿತ್ಯ ಎರಡು ಲಕ್ಷ ಲೀಟರ್‌ ಹಾಲಿನ ಖರೀದಿ ಮುಂದುವರೆದಿದೆ ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್‌ ತಿಳಿಸಿದ್ದಾರೆ.

ಬುಧವಾರ ಪ್ರಶ್ನೋತ್ತರದ ವೇಳೆ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಹಾಲು ಮಹಾಮಂಡಲವು ಕಳೆದ 10-12 ವರ್ಷಗಳಿಂದ ಕೇರಳದ ಸಹಕಾರ ಸಂಸ್ಥೆ ‘ಮಿಲ್ಮಾ’ಗೆ ಸರಾಸರಿ ಪ್ರತಿನಿತ್ಯ ಎರಡು ಲಕ್ಷ ಲೀಟರ್‌ ಹಾಲು ಸರಬರಾಜು ಮಾಡುತ್ತಿದೆ. ಇತ್ತೀಚೆಗೆ ಕೆಎಂಎಫ್‌ ಕೇರಳದಲ್ಲಿ ಮೊದಲ ಬಾರಿಗೆ ನಂದಿನಿ ಉತ್ನನ್ನಗಳ ಮಾರಾಟ ಆರಂಭಿಸಿದ್ದರಿಂದ ಕೇರಳ ಸರ್ಕಾರದ ಪಶುಸಂಗೋಪನೆ ಸಚಿವರು, ಕೆಎಂಎಫ್‌ ಹಾಲಿನ ಗುಣಮಟ್ಟದ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಆದರೆ, ಹಾಲಿನ ಗುಣಮಟ್ಟ ಕಳಪೆಯಾಗಿ ತಿರಸ್ಕೃತಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದರು.

ಗೋ ಹತ್ಯೆ ನಿಷೇಧ ಕಾನೂನು ರದ್ದು ಪಡಿಸುವ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ: ಕೆ. ವೆಂಕಟೇಶ್‌

ಕೇರಳ ಸಹಕಾರ ಹಾಲು ಒಕ್ಕೂಟವು ನಮ್ಮ ರಾಜ್ಯದ ನಂದಿನಿ ಹಾಲಿನ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ಕೇರಳ ಸಹಕಾರಿ ಹಾಲು ಮಾರಾಟ ಮಹಾಮಂಡಳಿಯಿಂದ ನೇರವಾಗಿ ಯಾವುದೇ ನಿಲುವುಗಳು ಲಿಖಿತ ಅಥವಾ ಮೌಖಿಕವಾಗಿ ಬಂದಿಲ್ಲ ಎಂದು ಹೇಳಿದರು.

ಬಮೂಲ್‌ ರೈತರಿಂದ ಖರೀದಿಸುವ ಹಾಲಿನ ದರ ಕಡಿಮೆ ಮಾಡಿದಿಯೇ ಎಂದು ರವಿಕುಮಾರ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬೇಸಿಗೆ ಸಮಯದಲ್ಲಿ ಬಮೂಲ್‌ ರೈತರಿಗೆ ಅನುಕೂಲವಾಗಲಿ ಎಂದು ಲೀಟರ್‌ ಹಾಲಿನ ಖರೀದಿ ದರವನ್ನು ಮೂರು ರು. ಹೆಚ್ಚಳ ಮಾಡಿತ್ತು. ಬೇಸಿಗೆ ಮುಗಿದ ಹಿನ್ನೆಲೆಯಲ್ಲಿ ಲೀಟರ್‌ ಹಾಲಿಗೆ ಒಂದೂವರೆ ರು. ಕಡಿಮೆ ಮಾಡಿದೆ ಎಂದು ಸ್ಪಷ್ಟನೆ ನೀಡಿದರು.

click me!