ಕಾಸರಗೋಡು ಹಾಗೂ ಮಂಗಳೂರಿನ ನಡುವೆ ಪ್ರಯಾಣಿಸುವವರಿಗೆ ನಿತ್ಯದ ಪಾಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಮಂಗಳೂರು (ಆ.14): ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಕಾಸರಗೋಡು ಮತ್ತು ಮಂಗಳೂರು ನಡುವೆ ಬಂದ್ ಆಗಿದ್ದ ವಾಹನ ಸಂಚಾರ ಸದ್ಯಕ್ಕೆ ಪುನಾರಂಭಗೊಳ್ಳುವ ಸಾಧ್ಯತೆ ಇಲ್ಲ. ಆದರೆ ಕಾಸರಗೋಡಿನಿಂದ ಕರ್ನಾಟಕಕ್ಕೆ ತೆರಳುವವರಿಗೆ ಪಾಸ್ ವ್ಯವಸ್ಥೆ ಪುನರಾರಂಭಿಸಲು ಕೇರಳ ಸರ್ಕಾರ ತೀರ್ಮಾನಿಸಿದೆ.
ಚಾರ್ಮಾಡಿ ಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ...
undefined
ಸೋಮವಾರ ಕೇರಳ ಕಂದಾಯ ಸಚಿವ ಚಂದ್ರಶೇಖರನ್ ಅವರು ವಿವಿಧ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳ ಜೊತೆ ನಡೆಸಿದ ಆನ್‌ಲೈನ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ದ.ಕ. ಜಿಲ್ಲೆಗೆ ನಿತ್ಯ ಬಂದುಹೋಗುವವರಿಗೆ ಹಿಂದಿನಂತೆ ಪಾಸ್ ನೀಡಲು ನಿರ್ಧರಿಸಲಾಗಿದೆ. ಆದರೆ ಏಳು ದಿನಗಳ ನಂತರ ಪ್ರಯಾಣ ಮಾಡುವವರು ಕೋವಿಡ್ ಆಂಟಿಜೆನ್ ಟೆಸ್ಟ್‌ಗೆ ಒಳಗಾಗಬೇಕು. ವಿವಾಹ, ಮರಣ ಇತ್ಯಾದಿ ಸಮಾರಂಭಗಳಿಗೆ ಅಂತರ್ ರಾಜ್ಯ ಪ್ರಯಾಣ ನಡೆಸಲು ಅವಕಾಶ ಕಲ್ಪಿಸಲಾಗಿದೆ.