ರಾಜ್ಯಕ್ಕೆ ಮೋದಿ: 'ಭೇಟಿಗೆ ಅವಕಾಶ ಕೇಳಿದ 'ಕೈ' ನಾಯಕರು, ಏನಾಗುತ್ತೆ ನೋಡೋಣ ಅಂದ್ರು ಕೋಳಿವಾಡ

By Kannadaprabha NewsFirst Published Sep 6, 2019, 2:33 PM IST
Highlights

ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ ಅವರು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಡಿಕೆಶಿ ಪತ್ನಿ ಮಕ್ಕಳಿಗೆ ಧೈರ್ಯ ಹೇಳಿದ ಅವರು ಮೋದಿ ರಾಜ್ಯಕ್ಕೆ ಭೇಟಿ ನೀಡೋ ಬಗ್ಗೆಯೂ ಮಾತನಾಡಿದ್ದಾರೆ. ಮೋದಿ ರಾಜ್ಯಕ್ಕೆ ಬರಲಿದ್ದು ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಭೇಟಿಗೆ ಅವಕಾಶ ಕೇಳಿರುವುದಾಗಿ ಹೇಳಿದ್ದಾರೆ.

ರಾಮನಗರ(ಸೆ.06): ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ ಅವರು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಡಿಕೆಶಿ ಪತ್ನಿ ಮಕ್ಕಳಿಗೆ ಧೈರ್ಯ ಹೇಳಿದ ಅವರು ಮೋದಿ ರಾಜ್ಯಕ್ಕೆ ಭೇಟಿ ನೀಡೋ ಬಗ್ಗೆಯೂ ಮಾತನಾಡಿದ್ದಾರೆ. ಮೋದಿ ರಾಜ್ಯಕ್ಕೆ ಬರಲಿದ್ದು ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಭೇಟಿಗೆ ಅವಕಾಶ ಕೇಳಿರುವುದಾಗಿ ಹೇಳಿದ್ದಾರೆ.

ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ ಅವರು ಡಿಕೆಶಿ ಮನೆಗೆ ಭೇಟಿ ನೀಡಿ ಮಾತನಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಬಂಧನ ಸಂಬಂಧ ಅವರ ಮನೆಗೆ ಭೇಟಿ ನೀಡಿ ಪತ್ನಿ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.

ರಾಜಕೀಯ ವೈಷಮ್ಯ ಹೆಚ್ಚಿದೆ:

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲಿಂದಲೂ ನಾವು ಕುಟುಂಬದ ಸದಸ್ಯರ ಜೊತೆ ಉತ್ತಮ ಬಾಂಧ್ಯವ್ಯ ಇದೆ. ಅವರಿಗೆ ಮಾನಸಿಕ ಧೈರ್ಯ ತುಂಬಲು ಬಂದಿದ್ದೇನೆ. ರಾಜಕೀಯ ವೈಷಮ್ಯದ ಶಕ್ತಿ ಹೆಚ್ಚಾಗ್ತಿದೆ, ಪ್ರಜಾಪ್ರಭುತ್ವಕ್ಕೆ ಗಂಡಾಂತರ ಹೆಚ್ಚಾಗಿದೆ. ಇದು ಹೀಗೆ ಮುಂದುವರೆದರೆ ಕಷ್ಟ ಎಂದಿದ್ದಾರೆ.

 ರಾಜಕೀಯ ದ್ವೇಷದಿಂದ ಡಿ.ಕೆ. ಶಿವಕುಮಾರ್ ‌ಅವರನ್ನು ಬಂಧಿಸಲಾಗಿದೆ. ಭಾವನಾತ್ಮಕವಾಗಿ ಜನರನ್ನು ಕೆರಳಿಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಬರಲಿ, ನೆರೆ ಬಗ್ಗೆಯೂ ಗಮನ ಕೊಡಲಿ:

ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡೀ ಪ್ರಪಂಚದಲ್ಲಿ ಇವತ್ತು ಚಂದ್ರಯಾನ ಹೆಸರು ಮಾಡಿದೆ. ಮೋದಿ ಅದನ್ನು ವೀಕ್ಷಣೆ ಮಾಡಲು ಬರುತ್ತಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪ ಏನೂ ಇಲ್ಲ. ರಾಜ್ಯದಲ್ಲಿ ಬರ, ನೆರೆ ಇದೆ ಅದರ ಬಗ್ಗೆಯೂ ಗಮನ ಕೊಡಲಿ ಅಷ್ಟೇ ಎಂದಿದ್ದಾರೆ.

ಮೋದಿ ಭೇಟಿಗೆ ಅವಕಾಶ ಕೇಳಿದ್ದೇವೆ, ಏನಾಗುತ್ತೆ ನೋಡೋಣ:

ನೆರೆ ಪರಿಹಾರಕ್ಕಾಗಿ ಕೇಂದ್ರದಿಂದ ಒಂದು ರುಪಾಯಿ ಹಣ ಬಂದಿಲ್ಲ. ರಾಜ್ಯಕ್ಕೆ ಮೋದಿ ಅವರು ಬರುತ್ತಿದ್ದಾರೆ ಅವರಿಗೆ ಸ್ವಾಗತ ಕೋರುತ್ತೇನೆ. ಚಂದ್ರಯಾನ ವೀಕ್ಷಣೆ ಮಾಡಲಿ. ಇವತ್ತು ನಮ್ಮ‌ ನಾಯಕರು ಪ್ರಧಾನಿ ಅವರನ್ನ ಭೇಟಿ ಮಾಡಲು ಅವಕಾಶ ಕೇಳಿದ್ದೇವೆ. ಇವತ್ತು ಮೋದಿವರಿಗೆ ಕಾಂಗ್ರೆಸ್‌ನವರು ಕಾಲಾವಕಾಶ ಕೇಳಿದ್ದಾರಂತೆ. ಏನ್ ಆಗುತ್ತೆ ನೋಡೋಣ ಎಂದಿದ್ದಾರೆ.

click me!