ಚುನಾವಣಾ ಆಯೋಗದ ವಿರುದ್ಧ ಮಾಜಿ ಸಭಾಪತಿ ಕೆಂಡಾಮಂಡಲ

By Web DeskFirst Published 12, Sep 2018, 3:45 PM IST
Highlights

ಚುನಾವಣಾ ಆಯೋಗ ಕ್ರಮದ ಬಗ್ಗೆ ಮಾಜಿ ಪರಿಷತ್ ಸಭಾಪತಿ ಡಿ. ಹೆಚ್. ಶಂಕರ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ ಮೂರ್ತಿ, ಪರಮೇಶ್ವರ್, ಸೋಮಣ್ಣ ಮತ್ತು ಈಶ್ವರಪ್ಪನವರಿಂದ ತೆರವಾದ ಸ್ಥಾನಕ್ಕೆ ಒಟ್ಟಿಗೆ ಚುನಾವಣೆ ನಡೆಯಬೇಕು. ಆದರೆ ಚುನಾವಣಾ ಆಯೋಗ ಪ್ರತ್ಯೇಕ ಚುನಾವಣೆ ನಡೆಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಶಿವಮೊಗ್ಗ (ಸೆ 12): ಡಾ. ಜಿ. ಪರಮೇಶ್ವರ್, ಕೆ.ಎಸ್. ಈಶ್ವರಪ್ಪ ಮತ್ತು  ಸೋಮಣ್ಷ ಈ ಮೂವರು ಪರಿಷತ್ ಸದಸ್ಯರು 2018ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಪರಿಷತ್‌ನ 3 ಸ್ಥಾನ ತೆರವಾಗಿದೆ. ಆದ್ದರಿಂದ ಈ 3 ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕವನ್ನ ಪ್ರಕಟಿಸಿದ್ದು,  ಅಕ್ಟೋಬರ್ 3ರಂದು ಮೂವರು ಸದಸ್ಯರನ್ನು ನೇಮಕ ಮಾಡಲು ಚುನಾವಣೆ ನಡೆಯಲಿದೆ.

ಆದರೆ, ಚುನಾವಣಾ ಆಯೋಗ ಕ್ರಮದ ಬಗ್ಗೆ ಮಾಜಿ ಪರಿಷತ್ ಸಭಾಪತಿ ಡಿ. ಹೆಚ್. ಶಂಕರ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ ಮೂರ್ತಿ, ಪರಮೇಶ್ವರ್, ಸೋಮಣ್ಣ ಮತ್ತು ಈಶ್ವರಪ್ಪನವರಿಂದ ತೆರವಾದ ಸ್ಥಾನಗಳಿಗೆ ಒಟ್ಟಿಗೆ ಚುನಾವಣೆ ನಡೆಯಬೇಕು. ಆದರೆ ಚುನಾವಣಾ ಆಯೋಗ ಪ್ರತ್ಯೇಕ ಚುನಾವಣೆ ನಡೆಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಪರಿಷತ್ನ 3 ಸ್ಥಾನಗಳು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪಾಲಾಗುತ್ತವೆ. ಬಿಜೆಪಿಗೆ ಒಂದು ಸ್ಥಾನ ಸಿಗುವುದಿಲ್ಲ. ವಿಧಾನಸಭೆಯ ಸದಸ್ಯರಿಂದ ಪರಿಷತ್ತಿಗೆ ಆಯ್ಕೆಯಾಗುವ  ಈ ಸ್ಥಾನಗಳಿಗೆ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಯಬೇಕು. ಹಾಗಾಗಿ ತಕ್ಷಣವೇ ತಪ್ಪನ್ನ ಸರಿ ಪಡಿಸುವಂತೆ ಚುನಾವಣಾ ಆಯೋಗಕ್ಕೆ ಶಂಕರ ಮೂರ್ತಿ ಆಗ್ರಹಿಸಿದರು. 

ವಿಧಾನಪರಿಷತ್ ಚುನಾವಣೆಗೆ ಸೆಪ್ಟೆಂಬರ್ 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆ.22 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಇನ್ನು ನಾಮಪತ್ರ ವಾಪಸ್ ಪಡೆಯಲು ಸೆ.26ರಂದು ಕೊನೆ ದಿನವಾಗಿದೆ.

Last Updated 19, Sep 2018, 9:24 AM IST