ಲೋಕಸಭಾ ಚುನಾವಣೆಯಲ್ಲಿ ಬಿಎಸ್ ವೈ ಪುತ್ರನಿಗೆ ಬಿಜೆಪಿ ಟಿಕೆಟ್ ಸುಲಭವಲ್ಲ

By Web DeskFirst Published 7, Sep 2018, 10:16 PM IST
Highlights

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿ.ಜೆ.ಪಿಗೆ ಸಂಪೂರ್ಣ ಬಹುಮತ ಕೊಟ್ಟ ಜನತೆಗೆ ದನ್ಯವಾದಗಳು. ಉಪ ಮೇಯರ್ ಸ್ಥಾನದ ಮೀಸಲಾತಿ ಸಾಮಾನ್ಯ ಅಗಿರುವುದರಿಂದ  ಬಿಜೆಪಿಯ ಗೆದ್ದ ಎಲ್ಲಾ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ

ಶಿವಮೊಗ್ಗ[ಸೆ.07]: ಮುಂಬರುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಮಾಜಿ ಎಂಎಲ್ಸಿ ಎಂ.ಬಿ. ಭಾನುಪ್ರಕಾಶ್, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ದತ್ತಾತ್ರಿ, ಬಿಜೆಪಿ ನಗರಸಭಾಧ್ಯಕ್ಷ ಚನ್ನಬಸಪ್ಪ, ಹಾಗೂ ಮಾಜಿ ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ ಎಲ್ಲರೂ ಆಕಾಂಕ್ಷಿಗಳೆಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿ.ಜೆ.ಪಿಗೆ ಸಂಪೂರ್ಣ ಬಹುಮತ ಕೊಟ್ಟ ಜನತೆಗೆ ದನ್ಯವಾದಗಳು. ಉಪ ಮೇಯರ್ ಸ್ಥಾನದ ಮೀಸಲಾತಿ ಸಾಮಾನ್ಯ ಅಗಿರುವುದರಿಂದ  ಬಿಜೆಪಿಯ ಗೆದ್ದ ಎಲ್ಲಾ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆಂದು ಹೇಳುತ್ತಾ ಲೋಕಸಭೆ ಚುನಾವಣೆಗೂ ಹೆಚ್ಚಿನ ಅಕಾಂಕ್ಷಿಗಳಿದ್ದಾರೆಂದು ತಿಳಿಸಿದರು. 

ಈ ಬಾರಿ ವಿಜಯ ದಶಮಿಯನ್ನು ಹಳೇ ಜೈಲಿನ ಜಾಗದಲ್ಲಿ ನಡೆಸುತ್ತೇವೆ. ಈ ವಿಷಯವಾಗಿ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇವೆ. ಅವರು ಸಹಕಾರ ನೀಡೋದಾಗಿ ಭರವಸೆಯನ್ನ ನೀಡಿದ್ದಾರೆಂದರು. ಪಾಲಿಕೆಯಲ್ಲಿ ಬಿಜೆಪಿ  ತನ್ನ ಜವಾಬ್ದಾರಿ ಅರಿತು ವಿದ್ಯುತ್ ದೀಪ, ರಸ್ತೆ , ಕುಡಿಯುವ ನೀರು ಸೇರಿದಂತೆ ಜನರಿಗೆ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ. ಪಾಲಿಕೆ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿ, ಪಾರ್ಕ್ ಅಭಿವೃದ್ಧಿಯನ್ನು ಮೇಯರ್, ಉಪ ಮೇಯರ್ ಜೊತೆಗೂಡಿ ಜನ ಮೆಚ್ಚುವ ಪಾಲಿಕೆ ಮಾಡುತ್ತೇವೆಂದರು.

Last Updated 9, Sep 2018, 10:04 PM IST