Bidar: ಟೆಂಡರ್​ ಮುಗಿದಿದೆ ಎಂದು ಬ್ರಿಮ್ಸ್​ ಆಸ್ಪತ್ರೆಯ 96 ಡಿ ಗ್ರೂಪ್ ಮಹಿಳಾ​ ನೌಕರರ ವಜಾ: ಅಹೋರಾತ್ರಿ ಧರಣಿ!

Published : May 15, 2022, 10:45 PM IST
Bidar: ಟೆಂಡರ್​ ಮುಗಿದಿದೆ ಎಂದು ಬ್ರಿಮ್ಸ್​ ಆಸ್ಪತ್ರೆಯ 96 ಡಿ ಗ್ರೂಪ್ ಮಹಿಳಾ​ ನೌಕರರ ವಜಾ: ಅಹೋರಾತ್ರಿ ಧರಣಿ!

ಸಾರಾಂಶ

ಕಳೆದ ಎರಡು ವರ್ಷಗಳಿಂದ ಬ್ರಿಮ್ಸ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಿ ಗ್ರೂಪ್​ ನೌಕರರನ್ನ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು, ಬಡ ಮಹಿಳಾ ನೌಕರರು ಈಗ ಬೀದಿಗೆ ಬರುವ ಹಾಗೆ ಆಗಿದೆ. 

ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್​ ಸುವರ್ಣ ನ್ಯೂಸ್,​ ಬೀದರ್​

ಬೀದರ್ (ಮೇ.15): ​ಬ್ರಿಮ್ಸ್ ಆಸ್ಪತ್ರೆ (BRIMS Hospital) ಕರ್ಮಕಾಂಡಗಳಿಂದ ಸುದ್ದಿಯಾಗುತ್ತಲೆ ಇರುತ್ತದೆ ಈಗ ಮತ್ತೊಮ್ಮೆ ಬ್ರಿಮ್ಸ್​ ಆಸ್ಪತ್ರೆ ಸುದ್ದಿಯಲ್ಲಿದೆ. ಕಳೆದ ಎರಡು ವರ್ಷಗಳಿಂದ ಬ್ರಿಮ್ಸ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಿ ಗ್ರೂಪ್​ ನೌಕರರನ್ನ (D Group Employees) ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು, ಬಡ ಮಹಿಳಾ ನೌಕರರು ಈಗ ಬೀದಿಗೆ ಬರುವ ಹಾಗೆ ಆಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮಂಜೀರಾ ಎಂಜಿನಿಯರಿಂಗ್​ ಮತ್ತು ಕಂಟ್ರಕ್ಷನ್​ ಕಂಪನಿ ಮೂಲಕ ಗುತ್ತಿಗೆ ಆಧಾರದ ಮೇಲೆ 96 ಮಹಿಳೆಯರನ್ನ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು.

ಈ ನಡುವೆ ಕಳೆದ ಎರಡೂ ವರ್ಷದಲ್ಲಿ ಬಂದ ಕೊರೊನಾ (Coronavirus) ಮಹಾಮಾರಿಯ ಸಂದರ್ಭದಲ್ಲಿ ಹಗಲಿರುಳು ಎಂಬದೆ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ್ದ 96 ಜನ ಡಿ ಗ್ರೂಪ್​ ಮಹಿಳಾ ನೌಕರರನ್ನ ಏಕಾಏಕಿ ಟೆಂಡರ್​ (Tender) ಮುಗಿದಿದೆ ಎಂದು ತೆಗೆದು ಹಾಕುವ ಮೂಲಕ ಅವರ ಜೀವನ ಬೀದಿಗೆ ಬರುವ ಹಾಗೆ ಬ್ರಿಮ್ಸ್​ ಆಡಳಿತ ಮಂಡಳಿ ಮಾಡಿದೆ. ಬ್ರಿಮ್ಸ್​ ನಿರ್ಧಾರವನ್ನ ವಿರೋಧಿಸಿ ಕೆಲಸ ಕಳೆದುಕೊಂಡ 96 ಜನ ಮಹಿಳೆಯರು ಮೇ.9ರಿಂದ ಬ್ರಿಮ್ಸ್​ ಆಸ್ಪತ್ರೆ ಎದುರುಗಡೆ ಅಹೋರಾತ್ರಿ ಧರಣಿ (Protest) ನಡೆಸುತ್ತಿದ್ದಾರೆ. ಇವರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೂಡ ಸಾಥ್​ ನೀಡಿದೆ. ಮಹಿಳಾ ಸಿಬ್ಬಂದಿಗೆ ನ್ಯಾಯ ಸಿಗುವ ತನಕ ನಾವು ಹೋರಾಟ ಮುಂದುವರೆಸುತ್ತೇವೆಂದು ದಲಿತ ಹೋರಾಟಗಾರರು ಹೇಳುತ್ತಿದ್ದಾರೆ. 

Bidar ದಲಿತರು ಹಿಂದೂಗಳೇ ನಮ್ಮನ್ಯಾಕೆ ನೀವು ಜೊತೆ ಸೇರಿಸಿಕೊಳ್ಳಲ್ಲ; ಖರ್ಗೆ

ಗುತ್ತಿಗೆ ಆಧಾರದ ಮೇಲೆ ಎರಡು ವರ್ಷದ ಹಿಂದೆ ಬ್ರಿಮ್ಸ್​ನಲ್ಲಿ ದಾದಿಯರು ಎಂದು ಕೆಲಸಕ್ಕೆ ತೆಗೆದುಕೊಂಡ ಈ 96 ಜನ ಮಹಿಳೆಯರನ್ನ ಇಂತಹ ಕೆಲಸಕ್ಕೆ ಬಳಸಿಕೊಂಡಿಲ್ಲ ಅಂತಿಲ್ಲ. ಶೌಚಾಲಯ ಸ್ವಚ್ಛ ಮಾಡುವ ಕೆಲಸದಿಂದ ಹಿಂಡಿದು ಪ್ರತಿಯೊಂದು ಕೆಲಸಕ್ಕೂ ಇವರನ್ನೇ ಬಳಸಿಕೊಳ್ಳಲಾಗಿತ್ತು. ಕೊರೊನಾ ಮಹಾಮಾರಿಯ ಎಂತಹ ತುರ್ತು ಸಂದರ್ಭದಲ್ಲಿ ಕೊರೊನಾ ರೋಗಿಗಳ ಬಳಿ ಖುದ್ದು ಅವರ ಕುಟುಂಬಸ್ಥರೇ ಹತ್ತಿರ ಹೋಗಲು ಹಿಂದೆ ಮುಂದೆ ನೋಡುತ್ತಿದ್ದರೂ ಅಂತಹ ಸಂದರ್ಭದಲ್ಲೂ ಕೋವಿಡ್​ ವಾರ್ಡ್​ಗಳಲ್ಲಿ ಕೊರೊನಾ ರೋಗಿ​ಗಳನ್ನ ಆರೈಕೆ ಮಾಡಿದ್ದು ಇದೇ ಮಹಿಳೆಯರು,. ಖಾಯಂ ವೈದ್ಯರು, ನರ್ಸ್​ಗಳು, ಬ್ರಿಮ್ಸ್​ ಸಿಬ್ಬಂದಿ ಮಾಡುವ ಕೆಲಸಗಳು ಕೂಡ ಇವರಿಂದಲೇ ಮಾಡಿಸಿ ಕೈತೊಳೆದುಕೊಂಡಿದ್ದರಂತೆ. 

ಮೌಲ್ಯಾಧಾರಿತ ರಾಜಕಾರಣಿ, ವಿಜಯಪುರದ ಮೊದಲ ಸಂಸದ ರಾಮಪ್ಪ ಬಿದರಿ ಗ್ರಂಥ ಬಿಡುಗಡೆ!

ನಾವು ಮನೆ-ಮಠ ಬಿಟ್ಟು ಆಸ್ಪತ್ರೆಯಲ್ಲೇ ಉಳಿದುಕೊಂಡು ರೋಗಿಗಳ ಆರೈಕೆ ಮಾಡಿದ್ದೇವ,. ಕೊರೊನಾ ಸಮಯದಲ್ಲಿ ಎಲ್ಲಾ ಕೆಲಸಗಳು ನಮಗೆ ಮಾಡಲು ಹೇಳುತ್ತಿದ್ದರೂ ಈಗ ಏಕಾಏಕಿ ನಮಗೆ ಕೆಲಸದಿಂದ ತೆಗೆದು ಹಾಕಿದ್ದು ಎಷ್ಟು ಸರಿ ಎಂದು ಕೆಲಸದಿಂದ ವಂಚಿತರಾದ ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಅವಶ್ಯಕತೆ ಇದ್ದಾಗ ಈ ಬಡ ಮಹಿಳೆಯರನ್ನ ಮನಸ್ಸಿಗೆ ಬಂದ ಹಾಗೆ ಕೆಲಸಕ್ಕೆ ಬಳಸಿಕೊಂಡು ಕೆಲಸ ಮುಗಿದ ಮೇಲೆ ಇವರನ್ನ ಬೀದಿಗೆ ತಂದು ಬೀದಿಗೆ ತಂದು ನಿಲ್ಲಿಸಿದ್ದಕ್ಕೆ, ಕೆಲಸ ಕಳೆದುಕೊಂಡ 96 ಮಹಿಳೆಯರು, ಅವರ ಕುಟುಂಬಸ್ಥರು ಬ್ರಿಮ್ಸ್​ ವೈದ್ಯಾಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ