ಸೋಂಕಿತರ ಸಾವಿನ ತಪ್ಪು ಮಾಹಿತಿ ಭ್ರಮೆ, ತಾಂತ್ರಿಕತೆ ಅರಿತುಕೊಳ್ಳಲಿ| ಈಶ್ವರ ಖಂಡ್ರೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ಟಾಂಗ್| ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ: ಕೆ. ಸುಧಾಕರ್|
ಬೀದರ್(ಮೇ.01): ಸೋಂಕಿತರ ಸಾವಿನ ಸಂಖ್ಯೆಯನ್ನು ಐಸಿಎಂಆರ್‌ನಿಂದ ಅಧಿಕೃತವಾಗಿ ಪ್ರಕಟಣವಾಗುತ್ತಿದೆ, ತಪ್ಪು ಮಾಹಿತಿ ನೀಡುವ ಪ್ರಶ್ನೆಯೇ ಉದ್ಭವಿಸುತ್ತಿಲ್ಲ. ಅನ್ಯ ಕಾರಣಕ್ಕೆ ಸಾವನ್ನಪ್ಪಿದವರ ಮಾಹಿತಿಯನ್ನು ಕೊರೋನಾ ಸೋಂಕಿತರ ಪಟ್ಟಿಗೆ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಸ್ಪಷ್ಟಪಡಿಸಿದ್ದಾರೆ.
ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸರ್ಕಾರ ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯ ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದೆ, ಸಾವುಗಳು ಹೆಚ್ಚಾಗಿದ್ದರೂ ಕಡಿಮೆ ತೋರಿಸಲಾಗ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಆರೋಪ ನಿರಾಧಾರ, ಐಸಿಎಂಆರ್ ಕುರಿತಾಗಿನ ತಾಂತ್ರಿಕ ಮಾಹಿತಿಯನ್ನು ತಿಳಿದುಕೊಳ್ಳಲಿ ಎಂದು ಖಂಡ್ರೆ ಅವರಿಗೆ ಸಲಹೆ ನೀಡಿದ್ದಾರೆ.
undefined
ಇನ್ನು ಜಿಲ್ಲೆಗಳಲ್ಲಿ ಕಂಡುಬಂದಿರುವ ರೆಮ್‌ಡಿಸಿವಿರ್ ಚುಚ್ಚುಮದ್ದಿನ ಕಾಳಸಂತೆಯಲ್ಲಿ ಮಾರಾಟ, ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಹೀಗೆಯೇ ಕೆಲ ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಬೀದರ್ ನಗರಕ್ಕೆ ಆಗಮಿಸಿದ್ದಾಗಿ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕರ್ಫ್ಯೂ ಮತ್ತೆ ಮುಂದುವರಿಯುತ್ತಾ? ಸಚಿವ ಸುಧಾಕರ್ ಹೇಳಿದ್ದು ಹೀಗೆ
ಸಂಬಳಕ್ಕಾಗಿ ಸಚಿವರ ಕಾಲಿಗೆ ಬಿದ್ದ ಸಿಬ್ಬಂದಿ
ಒಂದು ವರ್ಷದಿಂದ ಬಹು ಕಷ್ಟಕರ ದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಸಂಬಳ ಪಾವತಿಯಾಗಿಲ್ಲ. ಅದನ್ನು ಹೆಚ್ಚಿಸಿ ತಕ್ಷಣ ಪಾವತಿಸಲು ಆದೇಶಿಸುವಂತೆ ಡಿ ದರ್ಜೆಯ ನೌಕರರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕಾಲಿಗೆ ಬಿದ್ದು ಕಣ್ಣಂಚಲ್ಲಿ ನೀರು ತಂದುಕೊಟ್ಟ ಘಟನೆ ನಡೆಯಿತು.
ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸುವುದು, ಆಸ್ಪತ್ರೆಗಳಿಗೆ ಸೂಕ್ತ ವ್ಯವಸ್ಥೆ ಮತ್ತಿತರ ವಿಷಯಗಳ ಪರಿಶೀಲನೆಗಾಗಿ ನಗರದ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿದ ನೂರಾರು ಸಿಬ್ಬಂದಿ, ಸೌಲಭ್ಯಗಳ ಕೊರತೆಯನ್ನು ಮುಂದಿಟ್ಟರಲ್ಲದೆ ಕೋವಿಡ್ ರೋಗಿಗಳನ್ನ ಉಪಚರಿಸುತ್ತಿರುವ ತಮ್ಮತ್ತ ಸರ್ಕಾರ ಗಮನಹರಿಸಲಿ ಎಂದರು. ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.