ಗುರುವಾರ ಸಂಜೆ ಜಿಲ್ಲೆಯ ಉಡುಪಿ, ಕಾಪು ಪರಿಸರದಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸುಮಾರು 2,10,000 ರೂ. ಯ ಹಾನಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಉಡುಪಿ (ಮೇ.12): ಗುರುವಾರ ಸಂಜೆ ಜಿಲ್ಲೆಯ ಉಡುಪಿ, ಕಾಪು ಪರಿಸರದಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸುಮಾರು 2,10,000 ರೂ. ಯ ಹಾನಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಮರ ಬಿದ್ದು ಮನೆ ಹಾನಿ:
ಉಡುಪಿ ತಾಲೂಕಿನ ಪೆರ್ಡೂರಿನ ಶಾಲಿನಿ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 30,000 ರೂ, ಕಾಪು ತಾಲೂಕಿನ ಕಾಪು ಪಡು ವಿಜಯ ಕೊಟ್ಯಾನ್ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 60,000 ರೂ, ಬ್ರಹ್ಮಾವರ ತಾಲೂಕಿನ ಆರೂರು ಕಾವೇರಿ ಇವರ ಮನೆಯ ಮೇಲೆ ಗಾಳಿ ಮಳೆಯಿಂದ ಮರಬಿದ್ದು ಭಾಗಶಃ ಹಾನಿ 80,000 ರೂ, ಕಾರ್ಕಳ ತಾಲೂಕಿನ ಕೌಡೂರು ಕೇಶವ ಶೆಟ್ಟಿ ಬಿನ್ ನಾರಾಯಣ ಶೆಟ್ಟಿ ಇವರ ವಾಸದ ಮನೆಗೆ ಸಿಡಿಲಿನಿಂದ ಭಾಗಶಃ ಹಾನಿ 25,000 ರೂ.
undefined
ಮಂಡ್ಯ ಜಿಲ್ಲೆಯ ಸರ್ವೀಸ್ ರಸ್ತೆ, ಅಂಡರ್‌ಪಾಸ್‌ನಲ್ಲಿ ನಿಂತ ನೀರು...!
ಉಡುಪಿ ತಾಲೂಕಿನ ಪೆರ್ಡೂರು ಸುಗಂಧಿ ಪ್ರಭಾಕರ ಶೆಟ್ಟಿ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 25,000 ರೂ, ಪೆರ್ಡೂರು ಗುಲಾಬಿ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 5,000 ರೂ, ಉಡುಪಿ ಬೆಳ್ಳಂಪಳ್ಳಿ ರಮಣಿ w/o ಮಂಜುನಾಥ್ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 50,000 ರೂ, ಉಡುಪಿಯ ಶಿರೂರು ಅಪ್ಪಿ ಶೇರಿಗಾರ್ತಿ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 10,000 ರೂ. ನಷ್ಟ ಉಂಟಾಗಿದೆ.
Karnataka rain: ರಾಜ್ಯದ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: 4 ಬಲಿ!
ಉಳಿದಂತೆ ಉಡುಪಿ - 44.1, ಬ್ರಹ್ಮಾವರ - 11.2, ಕಾಪು - 44.6, ಕುಂದಾಪುರ - 0.0, ಬೈಂದೂರು - 0.0, ಕಾರ್ಕಳ - 12.7, ಹೆಬ್ರಿ - 9.4 ಮಿ.ಮೀ ಆಗಿರುತ್ತದೆ. ಜಿಲ್ಲೆಯಲ್ಲಿ ಸರಾಸರಿ 17.4 ಮಿ.ಮೀ ಸುರಿದಿದೆ.