ಆಧುನಿಕ ಭರಾಟೆಯ ನಡುವೆ ನಮ್ಮ ಸಂಸ್ಕೃತಿ, ಸಂಸ್ಕಾರ, ಬಾಂಧವ್ಯ ಕಣ್ಮರೆಯಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಾಂಡವಪುರ (ಮಾ.22): ಆಧುನಿಕ ಭರಾಟೆಯ ನಡುವೆ ನಮ್ಮ ಸಂಸ್ಕೃತಿ, ಸಂಸ್ಕಾರ, ಬಾಂಧವ್ಯ ಕಣ್ಮರೆಯಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀಶಂಕರ ಮಠವನ್ನು ಉದ್ಘಾಟಿಸಿ ಮಾತನಾಡಿ, ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಬರೀ ಕೆಟ್ಟಸುದ್ದಿಗಳೇ ಬರುತ್ತಿವೆ. ಇಂತಹ ಕಲುಷಿತ ವಾತಾವರಣದಿಂದ ಕುಟುಂಬಗಳೇ ನಾಶವಾಗುತ್ತಿರುವ ಸನ್ನಿವೇಶ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಮಾಜ ವೇಗವಾಗಿ ಬೆಳೆಯುತ್ತಿದೆ. ಶ್ರೀಮಂತಿ, ಬಡತನ ಎರಡೂ ಇದೆ. ಇದರ ನಡುವೆ ಪೂರ್ವಿಕರು ನಮ್ಮ ಹಳೆಯ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದ್ದಾರೆ.
ಆಧುನೀಕರ ಪ್ರಪಂಚದಲ್ಲಿ ಜನ್ಮಕೊಟ್ಟಂತಹ ತಂದೆ-ತಾಯಿ, ಅಣ್ಣತಮ್ಮಂದಿರು ಬಾಂಧವ್ಯದಿಂದ ಬದುಕಬೇಕಿದೆ ಎಂದರು. ಭಾರತ ವಿಶ್ವ ಮಟ್ಟದಲ್ಲಿ ಬೆಳೆಯುತ್ತಿದೆ. ಆದರೆ, ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯ ಬದುಕು ಕಾಣದೆ ಹೋದರೆ ನಮ್ಮ ದೇಶ ಪ್ರಪಂಚದಲ್ಲಿಯೇ ದೊಡ್ಡಮಟ್ಟದಲ್ಲಿ ಬೆಳೆದು ಸಾಧನೆ ಮಾಡಿದರೆ ಏನು ಪ್ರಯೋಜನ. ಗ್ರಾಮ, ಹಳ್ಳಿಗಳಲ್ಲಿ ಜನರು ನೆಮ್ಮದಿಯಿಂದ ಬದುಕು ಸಾಗಿಸಬೇಕಾದರೆ ನಾವೆಲ್ಲರು ಒಳ್ಳೆಯ ಭಾವನೆ ಬೆಳೆಸಿಕೊಳ್ಳಬೇಕಾಗಿದೆ ಎಂದರು. ದೊಡ್ಡಬ್ಯಾಡರಹಳ್ಳಿ ಗ್ರಾಮಸ್ಥರು ಈ ಭಾಗದಲ್ಲಿ ಶಂಕರಾಚಾರ್ಯರು ಓಡಾಡಿದ ನೆನಪಿಗಾಗಿ ಗ್ರಾಮದಲ್ಲಿ ಲಕ್ಷಾಂತರ ರು. ಹಣ ಖರ್ಚು ಮಾಡಿ ಶಂಕರಚಾರ್ಯದ ಮಠ ನಿರ್ಮಾಣ ಮಾಡಿದ್ದಾರೆ. ಶಂಕರಚಾರ್ಯರು ಜನರು ನೆಮ್ಮದಿಯ ಬದುಕು ನಡೆಸುಲು ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರಾಜ್ಯದ ಜನಸಾಮಾನ್ಯರ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದ ಹೆಗ್ಗಳಿಕೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಕೆಲಸ ಮಾಡುತ್ತಿದ್ದ ವೇಳೆ ರಾಜ್ಯದ ರೈತರು, ಬಡವರು, ಶೋಷಿತರು, ದುರ್ಬಲರ ಪರವಾಗಿ ಜನಪರವಾದ ಆಡಳಿತ ನೀಡಿದ್ದಾರೆ. ಅಂತಹ ವ್ಯಕ್ತಿಗಳು ಶಂಕರಚಾರ್ಯರ ಮಠ ಉದ್ಘಾಟನೆ ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಬಣ್ಣಿಸಿದರು. ಇದೇ ವೇಳೆ ದೊಡ್ಡಬ್ಯಾರಡಹಳ್ಳಿ ಗ್ರಾಮಸ್ಥರು ದೊಡ್ಡಬ್ಯಾಡರಹಳ್ಳಿ ರೈಲ್ವೇ ನಿಲ್ದಾಣದ ಬಳಿ ಮೇಲ್ಸೇತುವೆ ನಿರ್ಮಾಣ ಹಾಗೂ ತಿರುಪತಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.
ಯಾವುದೇ ಕೃಷಿ ವಿಶ್ವವಿದ್ಯಾಲಯಗಳನ್ನು ಮುಚ್ಚಲ್ಲ: ಸಚಿವ ಚಲುವರಾಯಸ್ವಾಮಿ
ಸಮಾರಂಭದಲ್ಲಿ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ, ಮನ್ಮುಲ್ ನಿರ್ದೇಶಕರಾದ ಸಿ.ಶಿವಕುಮಾರ್, ಬಿ.ಆರ್.ರಾಮಚಂದ್ರ, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್. ಶ್ರೀಶಂಕರ ಮಠ ಸೇವಾ ಸಮಿತಿ ಅಧ್ಯಕ್ಷ ಎನ್.ನಿಂಗರಾಜು, ಉಪಾಧ್ಯಕ್ಷ ರಾಮಲಿಂಗೇಗೌಡ, ಕಾರ್‍ಯದರ್ಶಿ ಡಿ.ಬಿ.ಪ್ರಕಾಶ್, ಸಹ ಕಾರ್‍ಯದರ್ಶಿ ಕುಮಾರ್, ಖಜಾಂಚಿ ಶಿವಲಿಂಗು, ಸದಸ್ಯರಾದ ಚನ್ನೇಗೌಡ, ಬಿ.ಆರ್.ಗೋಪಾಲ್, ಚಂದನ್, ನಿಂಗರಾಜಚಾರಿ, ಬ್ರಹ್ಮೇಶ್, ಶಿವಲಿಂಗೇಗೌಡ, ಶಂಕರ, ಪದ್ಮ, ಧರ್ಮ, ಚಂದ್ರಚಾರಿ, ಶಿವಣ್ಣಚಾರಿ, ಎನ್.ಕೃಷ್ಣ, ಪ್ರಸನ್ನ, ಸಂತೋಷ್, ಆನಂದ್‌ಕುಮಾರ್ ಎನ್., ಕೃಷ್ಣ, ಅನಿಲ್‌ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರವಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.