ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಮಾದರಿಯಲ್ಲಿಯೇ ಉತ್ತರ ಬೆಂಗಳೂರಿನಲ್ಲಿ ಮತ್ತೊಂದು 'ಲಂಗ್ ಸ್ಪೇಸ್' ನಿರ್ಮಾಣವಾಗಲಿದೆ. ಯಲಹಂಕದಲ್ಲಿ 153 ಎಕರೆ ವಿಶಾಲ ಪ್ರದೇಶದಲ್ಲಿ ಈ ಪಾರ್ಕ್ ನಿರ್ಮಾಣವಾಗಲಿದ್ದು, ಸಾಲು ಮರದ ತಿಮ್ಮಕ್ಕನ ಹೆಸರಿಡಲು ಉದ್ದೇಶಿಸಲಾಗಿದೆ.
ಬೆಂಗಳೂರು (ಅ.8): ಕಬ್ಬನ್ ಪಾರ್ಕ್ ಅಂದ್ರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಉದ್ಯಾನನಗರಿಯ ಗಿಜಿಗುಡುವ ವಾಹನಗಳ ಸದ್ದಿನ ನಡುವೆ ರಾಜಧಾನಿ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್‌ನ ಒಳಗೆ ಹೊಕ್ಕರೆ ಏನೋ ಒಂದು ಆಹ್ಲಾದಕರ ಭಾವ. ಸುತ್ತಲಿನ ಹಸಿರು, ಶುಭ್ರಗಾಳಿಯನ್ನು ಸೇವಿಸುತ್ತಿದ್ದರೆ ಮನಸ್ಸು ಸಂಭ್ರಮಕ್ಕೆ ಪಾರವೇ ಇಲ್ಲ. ಹೊತ್ತು ಹೋಗಿದ್ದು ತಿಳಿಯೋದಿಲ್ಲ. ಇಂದಿಗೂ ಬೆಂಗಳೂರಿನ ಹಲವು ಮಂದಿ ಮೆಟ್ರೋ ಏರಿ ಬೆಳಗಿನ ವಾಕಿಂಗ್‌ಗೆ ಕಬ್ಬನ್ ಪಾರ್ಕ್‌ಗೆ ಬರುವವರಿದ್ದಾರೆ. ಇಂಥ ಕಬ್ಬನ್ ಪಾರ್ಕ್ ವಿಚಾರದಲ್ಲಿ ಮತ್ತೊಂದು ಖುಷಿ ವಿಚಾರವಿದೆ. ರಾಜ್ಯ ಸರ್ಕಾರವೀಗ, ಕಬ್ಬನ್ ಪಾರ್ಕ್ ಮಾದರಿಯಲ್ಲಿಯೇ ಉತ್ತರ ಬೆಂಗಳೂರಿನಲ್ಲಿ ದೊಡ್ಡ ಪಾರ್ಕ್ ನಿರ್ಮಾಣ ಮಾಡುವ ಇರಾದೆ ವ್ಯಕ್ತಪಡಿಸಿದೆ. ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ದೊಡ್ಡ ಉದ್ಯಾನವನದ ಅಗತ್ಯವಿದೆ ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಗಾರ್ಡನ್ ಸಿಟಿ ಎನ್ನುವ ಹಿರಿಮೆಯನ್ನು ಬೆಂಗಳೂರು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಉತ್ತರ ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ರೀತಿಯ ಎಕೋ ಸ್ಪೇಸ್‌ಅನ್ನು ಅಭಿವೃದ್ದಿ ಮಾಡಲು ನಿರ್ಧಾರ ಮಾಡಿದೆ. ಹೊಸ ಪಾರ್ಕ್ ಯಲಹಂಕದಲ್ಲಿ ನಿರ್ಮಾಣವಾಗಲಿದೆ. ಶುದ್ದಗಾಳಿಗಾಗಿ ಕಬ್ಬನ್ ಪಾರ್ಕ್‌ಗೆ ಬರಬೇಕು ಎನ್ನುವವರಿಗೆ ಈಗ ಅಂಥದ್ದೇ ಮತ್ತೊಂದು ಸ್ಥಳ ನಿಗದಿಯಾಗಲಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ, ಉತ್ತರ ಬೆಂಗಳೂರಿನಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ಅಡಿಯಲ್ಲಿ 153 ಎಕರೆ ಭೂಮಿ ಇದೆ. ಅರಣ್ಯ ಇಲಾಖೆ ಇದನ್ನು ಕಬ್ಬನ್ ಪಾರ್ಕ್ ಮಾದರಿಯ ಉದ್ಯಾನವನ್ನಾಗಿ ಮಾಡಲಿದೆ. ಬೆಂಗಳೂರು ತನ್ನ ಜನರಿಗೆ ಹೊಸ ಲಂಗ್ ಸ್ಪೇಸ್‌ಅನ್ನೂ (ಉಸಿರಾಟಕ್ಕೆ ಶುದ್ದ ಗಾಳಿ) ನೀಡಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ದೊಡ್ಡ ಉದ್ಯಾನವನದ ಅಗತ್ಯವಿದೆ ಎಂದು ಖಂಡ್ರೆ ಹೇಳಿದರು. ಉತ್ತರ ಬೆಂಗಳೂರು ದೊಡ್ಡ ಹಂತದಲ್ಲಿ ಬೆಳೆಯುತ್ತಿದ್ದು, ಈ ಭಾಗದ ಜನರಿಗೆ ದೊಡ್ಡ ಪಾರ್ಕ್‌ನ ಅಗತ್ಯ ಖಂಡಿತವಾಗಿಯೂ ಇರಲಿದೆ. ಇದಕ್ಕೆ ಸಾಲುಮರದ ತಿಮ್ಮಕ್ಕನ ಹೆಸರನ್ನು ಇಡಲಾಗುವುದು ಎಂದು ಅವರು ಹೇಳಿದರು.
Ramanagara: ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಗಣಿ ಉದ್ಯಮಿ!
ಹುಲಿಕಲ್ ಮತ್ತು ಕುದೂರಿನ ನಡುವೆ 385 ಆಲದ ಮರಗಳನ್ನು 45 ಕಿಲೋಮೀಟರ್ ದೂರದ ಹೆದ್ದಾರಿಯುದ್ದಕ್ಕೂ ಸಾಲಾಗಿ ನೆಟ್ಟಿದ್ದರು.ಈ ಹಸಿರು ಹೊದಿಕೆಯನ್ನು ಅಭಿವೃದ್ಧಿಪಡಿಸಿದ ತಿಮ್ಮಕ್ಕ ಕರ್ನಾಟಕದ ಜನಪ್ರಿಯ ಪರಿಸರ ಕಾರ್ಯಕರ್ತೆ. ಪರಿಸರ ವಿಜ್ಞಾನಕ್ಕೆ ನೀಡಿದ ಕೊಡುಗೆಗಾಗಿ ಆಕೆಗೆ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಕಬ್ಬನ್ ಪಾರ್ಕ್ ಬೆಂಗಳೂರಿನ ಜನರಿಗೆ ನೆಚ್ಚಿನ ತಾಣವಾಗಿದೆ ಏಕೆಂದರೆ ಇದು ನಗರದ ನೈಜ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಕಬ್ಬನ್ ಪಾರ್ಕ್‌ನಲ್ಲಿ 10 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಸರ್ಕಾರ ಯೋಜಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಬಳಿಕ ಸರ್ಕಾರ ಈ ನಿರ್ಧಾರವನ್ನು ಹಿಂಪಡೆದುಕೊಂಡಿತು.
Bengaluru: ಕಬ್ಬನ್ ಪಾರ್ಕ್‌ನಲ್ಲಿ ಕಟ್ಟಡ ಕಟ್ಟುವ ಪ್ಲ್ಯಾನ್ ಕೈಬಿಟ್ಟ ರಾಜ್ಯ ಸರ್ಕಾರ!