ಯೋಧ ಗಣೇಶ್ ಪಾರ್ಥೀವ ಶರೀರಕ್ಕೆ ಸಿ.ಟಿ.ರವಿ ಗೌರವ ನಮನ

Published : Jun 16, 2022, 01:30 AM IST
ಯೋಧ ಗಣೇಶ್ ಪಾರ್ಥೀವ ಶರೀರಕ್ಕೆ ಸಿ.ಟಿ.ರವಿ ಗೌರವ ನಮನ

ಸಾರಾಂಶ

*  ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಗೌರವ ಸಲ್ಲಿಸಿದ ಸಿ.ಟಿ. ರವಿ *  ಬಿಹಾರದ ಕಿಶನ್‌ ಗಂಜ್‌ನಲ್ಲಿ ಕಳೆದ ಶನಿವಾರ ಅಕಾಲಿಕ ಮರಣ ಹೊಂದಿದ್ದ ಗಣೇಶ್‌ *  ಇಂದು ಗೌರವಗಳೊಂದಿಗೆ ಅಂತಿಮ ಸಂಸ್ಕಾರ 

ಬಾಳೆಹೊನ್ನೂರು(ಜೂ.16):  ಇತ್ತೀಚೆಗೆ ಸಾವನ್ನಪ್ಪಿದ ಸೇನಾ ಯೋಧ ಎಂ.ಎನ್. ಗಣೇಶ್ ಅವರ ಪಾರ್ಥೀವ ಶರೀರಕ್ಕೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ(ಬುಧವಾರ) ಶಾಸಕ ಸಿ.ಟಿ. ರವಿ ಅವರು ಗೌರವ ಸಲ್ಲಿಸಿದರು.

ಬಿಹಾರದ ಕಿಶನ್‌ ಗಂಜ್‌ನಲ್ಲಿ ಕಳೆದ ಶನಿವಾರ ಅಕಾಲಿಕ ಮರಣ ಹೊಂದಿದ ಖಾಂಡ್ಯ ಹೋಬಳಿಯ ಮಸೀಗದ್ದೆ ಗ್ರಾಮದ ಯೋಧ ಎಂ.ಎನ್‌.ಗಣೇಶ್‌ ಅವರ ಪಾರ್ಥಿವ ಶರೀರ ಇಂದು ಸ್ವಗ್ರಾಮ ತಲುಪಲಿದೆ.

ಚಿಕ್ಕಬಳ್ಳಾಪುರ: ಜೆಡಿಎಸ್ ಕಾರ್ಯಕರ್ತನದ್ದು ಆಕ್ಸಿಡೆಂಟ್ ಅಲ್ಲ ಕೊಲೆ..!

ಗಣೇಶ್‌ ಪಾರ್ಥಿವ ಶರೀರವನ್ನು ಬುಧವಾರ ಬಿಹಾರದ ಭಾಗ್‌ಧೋಗ್ರ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿ ಸಕಲ ಗೌರವಗಳನ್ನು ಸಲ್ಲಿಸಿ ಚಿಕ್ಕಮಗಳೂರಿಗೆ ತರಲಾಗಿದೆ. ಚಿಕ್ಕಮಗಳೂರಿನಿಂದ ಗುರುವಾರ ಬೆಳಗ್ಗೆ 9.30ಕ್ಕೆ ಆಲ್ದೂರು-ಹುಣಸೇಹಳ್ಳಿ ಮಾರ್ಗವಾಗಿ ಸಂಗಮೇಶ್ವರಪೇಟೆ ಸಮುದಾಯ ಭವನಕ್ಕೆ ತಂದು ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಗಣೇಶ್‌ ನಿವಾಸ ಮಸೀಗದ್ದೆಗೆ ಕೊಂಡೊಯ್ದು ಕುಟುಂಬಸ್ಥರು ಅಂತಿಮ ವಿಧಿಗಳನ್ನು ನೆರವೇರಿಸಲಿದ್ದಾರೆ. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.
 

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!