ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆಶಿ ಕಣ್ಣೀರಿಗೆ ಸಿ.ಟಿ.ರವಿ ವ್ಯಂಗ್ಯ

By Suvarna News  |  First Published Oct 2, 2022, 8:34 PM IST

ಡಿ.ಕೆ ಶಿವಕುಮಾರ್ ಒಳಗೆ ಇಷ್ಟೊಂದು ಕಲಾವಿದ ಇದ್ದಾನೆ ಎಂದು ಗೊತ್ತಿರಲಿಲ್ಲ. ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡಿಬಹುದಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಅ.2): ಡಿ.ಕೆ ಶಿವಕುಮಾರ್ ಒಳಗೆ ಇಷ್ಟೊಂದು ಕಲಾವಿದ ಇದ್ದಾನೆ ಎಂದು ಗೊತ್ತಿರಲಿಲ್ಲ. ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡಿಬಹುದಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಭಾರತ್ ಜೋಡೋ ಸಂವಾದದ ವೇಳೆ ಬಾಲಕಿಯೊಬ್ಬಳ ಮಾತಿಗೆ ಡಿ.ಕೆ ಶಿವಕುಮಾರ್ ಕಣ್ಣೀರು ಹಾಕಿದ ಬಗ್ಗೆ ಪ್ರತಿಕ್ರಿಯಿಸಿ ಬಣ್ಣ ಹಾಕದೆ, ಗ್ಲಿಸರಿನ್ ಹಾಕದೆ ಕಣ್ಣೀರು ಹಾಕುವ ನಟನೆ ಅವರಿಗೆ ಒದಗಿ ಬಂದಿರುವುದು ಹುಟ್ಟಿನಿಂದಲೇ ಇರಬೇಕು. ಅವರು ಅಪ್ಪಿತಪ್ಪಿ ರಾಜಕೀಯಕ್ಕೆ ಬಂದಿದ್ದಾರೆ ಎಂದರು. ಈಗಲೂ ಅವರಿಗೆ ಪೋಷಕ ಪಾತ್ರಗಳು ಸಿಗಬಹುದು ಹೀರೋ ಆಗುವ ವಯಸ್ಸು ಹೋಗಿದೆ. ವಿಲನ್ ಆಗಬಹುದು ರಿಷಬ್ ಶೆಟ್ಟಿಗೆ ಸ್ಪರ್ಧಿ ಹುಟ್ಟಿಕೊಂಡಿದ್ದಾರೆ. ಇನ್ನೇನಿದ್ದರೂ ಪ್ರಶಸ್ತಿ ಡಿಕೆಶಿಗೆ ಎಂದು ಸಾಮಾಜಿಕ ಜಾಲತಾಣವದಲ್ಲಿ ಚರ್ಚೆ ಆಗುತ್ತಿರುವುದನ್ನು ನಾನು ಗಮನಿಸಿದ್ದೇನೆ ಎಂದು ಟೀಕಿಸಿದರು. ಭಾರತವನ್ನ ತುಂಡರಿಸುವಾಗ ಸಹಿ ಹಾಕಿದ್ದು ಬಿಜೆಪಿಯಲ್ಲ ಕಾಂಗ್ರೆಸ್, ಕೋಟ್ಯಾಂತರ ಜನರನ್ನ ಅಸಹಾಯಕರನ್ನಾಗಿ ಮಾಡಿದ್ದಲ್ಲದೆ, ಅವರ ಜೀವವನ್ನು ಮತಾಂಧರ ಕೈಗೆ ಕೊಟ್ಟು ಬಂದರು.

Tap to resize

Latest Videos

ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿದ ಸೂಲಿಬೆಲೆ ಪರ ಸಿಟಿ ರವಿ ಬ್ಯಾಟಿಂಗ್

ಅಸಂಖ್ಯಾತ ಸ್ತ್ರೀಯರು ಮಾನ ಪ್ರಾಣ ಉಳಿಸಿಕೊಳ್ಳಲಾಗದೆ ಸಾಯಬೇಕಾಯಿತು ಇಂತಹ ವಿಭಜಿತ ಭಾರತವನ್ನ ಖಂಡಿತವಾಗಿಯೂ ಸ್ವಾತಂತ್ರ್ಯ ನಂತರದ ಭಾರತೀಯರು ನಿರೀಕ್ಷಿಸಿರಲಿಲ್ಲ. ಅದಕ್ಕೆ ಕಾಂಗ್ರೆಸ್ಗೆ ಪಶ್ಚಾತ್ತಾಪ ಇದೆಯಾ, ಇಂದಿರಾ ಗಾಂಧಿ ಹತ್ಯೆ ನಂತರ ನಡೆದ ಹಿಂಸೆಗೆ ಬಹಳ ವರ್ಷಗಳ ನಂತರ ಕಾಂಗ್ರೆಸ್ ಪಶ್ಚಾತ್ತಾಪ ವ್ಯಕ್ತಪಡಿಸಿತ್ತು. ತುರ್ತುಪರಿಸ್ತಿತಿ ಹೇರಿಕೆ ನಮ್ಮಿಂದಾದ ಅಪರಾಧ ಎಂದು ಹಲವು ವರ್ಷಗಳ ನಂತರ ಕಾಂಗ್ರೆಸ್ ಪಶ್ಚಾತ್ತಾಪ ವ್ಯಕ್ತಪಡಿಸಿತು. ರಾಹುಲ್ ಗಾಂಧಿಗೆ ಒಂದು ಸಕಾಲ ಭಾರತ ವಿಭಜನೆಗೆ ಸಹಿ ಹಾಕಿದ್ದು ಕಾಂಗ್ರೆಸ್ನ ಅಪರಾಧ ಎಂದು ಅವರಿಗೆ ಅನ್ನಿಸುತ್ತಾ, ಈ ಪ್ರಶ್ನೆಗೆ ಉತ್ತರಿಸಿ ಪಾದಯಾತ್ರೆ ಮುಂದುವರಿಸಿದರೆ ಒಳ್ಳೆಯದು ಎಂದರು.

ಆರ್‌ಎಸ್‌ಎಸ್‌ ದೇಶ ಭಕ್ತ ಸಂಘಟನೆ, ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ಕಿಡಿ

ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ ಕರ್ನಾಟಕಕ್ಕೆ ಬಂದು ಯಾರಿಗೆ ಬಲ ತುಂಬಲು ಹೊರಟಿದ್ದಾರೋ ಗೊತ್ತಿಲ್ಲ. ರಾಹುಲ್ಗಾಂಧಿಗೆ ಬಲ ತುಂಬಲು ಯತ್ನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ದುರ್ಬಲವಾಗುತ್ತಿದೆ. ರಾಜಸ್ಥಾನದಲ್ಲಿ ಯಾವಾಗ ಸರ್ಕಾರ ಬಿದ್ದು ಹೋಗುತ್ತೋ ಗೊತ್ತಿಲ್ಲ. ಹಿಮಾಚಲದಲ್ಲಿ ಸಾಲು ಸಾಲು ರಾಜೀನಾಮೆ ಕೊಟ್ಟಿದ್ದಾರೆ. ಪಂಜಾಬ್ ಅಮರೀಂದ್ರ ಸಿಂಗ್ ರಾಜೀನಾಮೆ ನೀಡಿ ಬಿಜೆಪಿ ಸೇರಿದರು, ಕಾಶ್ಮೀರದಲ್ಲಿ ಗುಲಾಂನಬಿ ಅಜಾದ್ ತಮ್ಮದೇ ಆದ ಪಕ್ಷ ರಚಿಸಿ ಈಗ ಆಜಾದ್ ಆಗಿದ್ದಾರೆ. ಯಿಪಿಯಲ್ಲಿ 387 ಸ್ಥಾನದಲ್ಲಿ ಠೇವಣಿ ಹೋಯಿತು. ನೀತಿ, ನಿಯ್ಯತ್ತು, ನೇತೃತ್ವ ಇಲ್ಲದವರಿಗೆ ಬಲ ಸಿಗುವುದಿಲ್ಲ ಎಂದರು.

click me!