ಪ್ರತಾಪಗೌಡ ಗೆದಿದ್ದರೆ ಕೋಟ್ಯಂತರ ಅನುದಾನದಿಂದ ಅಭಿವೃದ್ಧಿ: ಶ್ರೀರಾಮುಲು

By Kannadaprabha News  |  First Published Oct 2, 2022, 8:30 PM IST

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರತಾಪಗೌಡ ಪಾಟೀಲ್‌ ಕೊಡುಗೆ ದೊಡ್ಡದು. ಅವರು ಮಾಡಿದ ತ್ಯಾಗದಿಂದಲೇ ನಾವು ಇವತ್ತು ಸಚಿವರಾಗಿ ನಿಂತಿದ್ದೇವೆ: ರಾಮುಲು 


ಮಸ್ಕಿ(ಅ.02):  ಉಪಚುನಾವಣೆ ವೇಳೆ ಪ್ರತಾಪಗೌಡ ಪಾಟೀಲ್‌ರನ್ನು ಗೆಲ್ಲಿಸಿದ್ದರೆ, ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದರು ಎಂದು ಸಾರಿಗೆ ಹಾಗೂ ಪರಿಶಿಷ್ಟಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀೕರಾಮುಲು ಹೇಳಿದರು.

ಪಟ್ಟಣದ ಬ್ರಮರಾಂಭ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆದ ಪ್ರತಾಪಗೌಡ ಪಾಟೀಲ್‌ ಫೌಂಡೇಶನ್‌ ಪ್ರಥಮ ವಾರ್ಷಿಕೋತ್ಸವ, ಪ್ರತಾಪಗೌಡರ 68ನೇ ಹುಟ್ಟುಹಬ್ಬ, ಬೃಹತ್‌ ಉದ್ಯೋಗ ಮೇಳ, ಉಚಿತ ಆಂಬುಲೆನ್ಸ್‌ ಸೇವೆ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರತಾಪಗೌಡ ಪಾಟೀಲ್‌ ಕೊಡುಗೆ ದೊಡ್ಡದು. ಅವರು ಮಾಡಿದ ತ್ಯಾಗದಿಂದಲೇ ನಾವು ಇವತ್ತು ಸಚಿವರಾಗಿ ನಿಂತಿದ್ದೇವೆ. ಆದರೆ, ಅವರನ್ನು ಗೆಲ್ಲಿಸಿ ಮಂತ್ರಿ ಮಾಡಿಸಬೇಕು ಎನ್ನುವ ಕನಸು ಈಡೇರಿಲ್ಲ. ಇದಕ್ಕೆ ಕ್ಷೇತ್ರದ ಜನರೇ ಕಾರಣರಾಗಿದ್ದೀರಿ. ಅವರಿಗೆ ಆದ ಅನ್ಯಾಯವನ್ನು ಮುಂದಿನ ದಿನಗಳಲ್ಲಿ ನೀವೆ ಸರಿಪಡಿಸಬೇಕು ಎಂದರು.

Tap to resize

Latest Videos

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಮಾಡದಿದ್ದರೆ ಪಕ್ಷ ವಿಸರ್ಜನೆ: ಸಿ.ಎಂ. ಇಬ್ರಾಹಿಂ

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಮಾತನಾಡಿದರು. ಸಾಹಿತಿ ಸ್ವಾಮಿರಾವ್‌ ಕುಲ್ಕರ್ಣಿ ಅಭಿನಂದನೆ ಹಾಗೂ ಫೌಂಡೇಶನ್‌ ಅಧ್ಯಕ್ಷ ಪ್ರಸನ್ನ ಪಾಟೀಲ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಗಚ್ಚಿನ ಹಿರೇಮಠದ ವರರುದ್ರಮುನಿಸ್ವಾಮಿ, ಮುಸ್ಲಿಂ ಧರ್ಮಗುರು ಜಿಲಾನಿ ಖಾಜಿ, ಚರ್ಚ ಫಾದರ್‌, ಕೆ.ವಿರೂಪಾಕ್ಷಪ್ಪ, ಗಂಗಾಧರ ನಾಯಕ, ಶರಣಪ್ಪಗೌಡ ಪಾಟೀಲ್‌, ಹನುಮನಗೌಡ ಬೆಳಗುರ್ಕಿ, ವಿಶ್ವನಾಥ ಅಮೀನಗಡ, ಎನ್‌.ಶಿವನಗೌಡ ಗೊರೇಬಾಳ, ಎಂ.ದೊಡ್ಡಬಸವರಾಜ, ಮಹಾದೇವಪ್ಪಗೌಡ ಪಾಟೀಲ್‌, ಶಿವಪುತ್ರಪ್ಪ ಅರಳಹಳ್ಳಿ ಸೇರಿ ಇತರರು ಇದ್ದರು.

ಬೃಹತ್‌ ಉದ್ಯೋಗ ಮೇಳ

ಭ್ರಮರಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದ ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. 1500ಕ್ಕೂ ಹೆಚ್ಚು ಯುವಕರು ಮೇಳದಲ್ಲಿ ಭಾಗವಹಿಸಿದ್ದರು.

ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಸೋಲಿಸುವುದು ಶತಸಿದ್ಧ: ಆಪ್‌ ಮುಖಂಡ ಅರವಿಂದ

ಸಾಧಕರಿಗೆ ಸನ್ಮಾನ

ನಿವೃತ್ತ ಐಎಎಸ್‌ ಅಧಿಕಾರಿ ಡಾ.ಮುದ್ದುಮೋಹನ್‌, ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಹೋರಾಟ ನಡೆಸಿದ ಮಹಿಳೆ ಮೋಕ್ಷಮ್ಮ, ಆಧ್ಯಾತ್ಮ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ ದೇವಣ್ಣ ಸಾಹುಕಾರ ಕಾನಿಹಾಳ ಅವರಿಗೆ ಸನ್ಮಾನಿಸಲಾಯಿತು.

ಉಚಿತ ಆಂಬುಲೆನ್ಸ್‌ ಸೇವೆ

ಕ್ಷೇತ್ರದಲ್ಲಿ ಇನ್ಮುಂದೆ ಯಾರಿಗೆ ಸಮಸ್ಯೆ ಯಾದರೂ ಕ್ಷಣದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಉಚಿತ ಆಂಬುಲೆನ್ಸ್‌ ಸೇವೆಗೆ ಚಾಲನೆ ನೀಡಲಾಯಿತು. ಆಂಬುಲೆನ್ಸ್‌ ತುರ್ತು ಸೇವೆ ಅಗತ್ಯ ಇರುವವರು 9108837108 ನಂಬರ್‌ಗೆ ಕರೆ ಮಾಡಬಹುದು ಎಂದು ಘೋಷಿಸಲಾಯಿತು.
 

click me!