ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯನ್ನು ಪೌರಕಾರ್ಮಿಕ ಇರುವ ಬಡಾವಣೆಗೆ ತೆರಳಿ ಪಟಾಕಿ ಸಿಡಿಸಿ ಅವರೊಂದಿಗೆ ಪಂಕ್ತಿ ಭೋಜನವನ್ನು ಸ್ವೀಕಾರ ಮಾಡಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಅ.25): ಪೌರಕಾರ್ಮಿಕರ ಪಾದಪೂಜೆ ಮಾಡಿ, ಮಕ್ಕಳ ಜೊತೆ ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯನ್ನು ಪೌರಕಾರ್ಮಿಕ ಇರುವ ಬಡಾವಣೆಗೆ ತೆರಳಿ ಪಟಾಕಿ ಸಿಡಿಸಿ ಅವರೊಂದಿಗೆ ಪಂಕ್ತಿ ಭೋಜನವನ್ನು ಸ್ವೀಕಾರ ಮಾಡಿದರು. ದೀಪಾವಳಿ ಹಬ್ಬದ ಪ್ರಯುಕ್ತ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರು ನಗರದ ಪೆನ್ನನ್ ಮೊಹಲ್ಲಾದಲ್ಲಿ ಪೌರ ಕಾರ್ಮಿಕರ ಪಾದಪೂಜೆ ಮಾಡಿ ಪಾದಕ್ಕೆ ಹೂವನ್ನಿಟ್ಟು, ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಹೊರಭಾಗದಲ್ಲಿ ಅವರ ಜೊತೆಯೇ ಪಂಕ್ತಿಭೋಜನ ಮಾಡಿದ್ದರು. ಬಳಿಕ ಪೌರ ಕಾರ್ಮಿಕರ ಮಕ್ಕಳ ಜೊತೆ ಅವರ ಮನೆ ಮುಂಭಾಗದಲ್ಲೇ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಇದೇ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಗಡಿಯಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸುತ್ತಿದ್ದಾರೆ. ಅವರು ಗಡಿಕಾಯುವ ಸೈನಿಕರ ಜೊತೆ ದೀಪಾವಳಿ ಆಚರಿಸಿದರೆ ನಾವು ಆರೋಗ್ಯದ ರಕ್ಷಣೆಗೆ ಪ್ರತಿನಿತ್ಯ ಹೋರಾಟ ಮಾಡುವ ಪೌರಕಾರ್ಮಿಕರ ಜೊತೆ ದೀಪಾವಳಿ ಆಚರಿಸುತ್ತಿದ್ದೇವೆ. ಪೌರ ಕಾರ್ಮಿಕರಿಗೆ ಪಾದಪೂಜೆ ಮಾಡಿದ್ದು ನಮ್ಮ ಬದುಕಿನಲ್ಲೇ ಒಂದು ಚಿರಸ್ಮರಣೀಯ ಸಂದರ್ಭ ಎಂದರು.
ಅಕ್ಷಯ್ ಕುಮಾರ್ ಮನೆಯಲ್ಲಿ ದೀಪಾವಳಿ ಸಂಭ್ರಮ; ಆರತಿ ಬೆಳಗಿದ ವಿಡಿಯೋ ವೈರಲ್
ಕಾಯಕವೇ ಕೈಲಾಸ ಎಂಬ ತತ್ವ ಪುನರತ್ಥಾನಗೊಳ್ಳಬೇಕು. ಅಜ್ಞಾನದ ಅಂಧಕಾರ ಹಾಗೂ ಬಡತನ ಮಾತ್ರವಲ್ಲ ಜಾತಿಯತೆಯ ಅಸ್ಪೃಶ್ಯತೆಯ ಭಾವದ ಆ ಕತ್ತಲೂ ಕೂಡ ದೂರವಾಗಬೇಕು ಎಂದರು. ಜ್ಞಾನದ ಬೆಳಕಿನಲ್ಲಿ ಪ್ರತಿಯೊಬ್ಬರನ್ನೂ ಕೂಡ ನಮ್ಮವರ ಎಂದು ನೋಡುವಂತಹಾ ಒಂದು ಭಾವ ನಿರ್ಮಾಣವಾದಾಗ ರಾಷ್ಟ್ರದಲ್ಲಿ ಒಂದು ಶಕ್ತಿ ಬರುತ್ತದೆ ಎಂದರು.
ದೀಪಾವಳಿಗೆ ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು, ಮಾರಾಟ ಮಾಡಿದರೂ ಶಿಕ್ಷೆ!
ಐದು ಬೆರಳು ಒಂದೇ ಸಮ ಇಲ್ಲ. ಆದರೆ, ಮುಷ್ಠಿ ಕಟ್ಟಿದಾಗ ಒಂದು ಶಕ್ತಿ ಬರುತ್ತದೆ. ಆ ಶಕ್ತಿ ರಾಷ್ಟ್ರಕ್ಕೆ ಬರಬೇಕ ಎಂದರು.ಈ ವೇಳೆ, ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಸಫಾಯಿ ಕರ್ಮಚಾರಿ ನಿಗಮ ಮಂಡಳಿ ಅಧ್ಯಕ್ಷ ವೆಂಕಟೇಶ್, ಸಿಡಿಎಅಧ್ಯಕ್ಷ ಆನಂದ ಪೌರಾಯುಕ್ತ ಬಸವರಾಜ್ ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.