ವಿಜಯ ದಶಮಿ ದಿನವೇ ಅನ್ನದಾತರ ಬದುಕು ಮೂರಾಬಟ್ಟೆ: ಹಬ್ಬದ ಸಂಭ್ರಮ ಕಸಿದ ಮಹಾ ಮಳೆ!

By Girish Goudar  |  First Published Oct 12, 2024, 9:22 AM IST

ಹಾವೇರಿ ತಾಲೂಕಿನ ಕನಕಾಪುರ ಗ್ರಾಮದ ಬಳಿ ಇರುವ ಯುಟಿಪಿ‌ ಕಾಲುವೆ ಒಡೆದು ಭಾರೀ ಅವಾಂತರ ಸೃಷ್ಟಿಯಾಗಿದೆ. ಕಳಪೆ ಕಾಮಗಾರಿ ಸಾರಿ ಹೇಳುತ್ತಿದೆ ಒಡೆದ ಯುಟಿಪಿ‌ ಕಾಲುವೆ. ಅಧಿಕಾರಿಗಳು, ಜನ ಪ್ರತಿನಿಧಿಗಳು ಮಾತ್ರ ಹಬ್ಬದ ಸಂಭ್ರಮದಲ್ಲಿದ್ದಾರೆ. ರೈತರು ಮಾತ್ರ ಕಂಗಾಲಾಗಿದ್ದಾರೆ. 

ಹಾವೇರಿ(ಅ.12): ವಿಜಯ ದಶಮಿ ಹಬ್ಬದ ದಿನವೇ ರೈತರ ಬದುಕು ಮೂರಾಬಟ್ಟೆಯಾಗಿದೆ. ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿ ಆದ್ರೆ ರೈತರ ಪಾಲಿಗೆ ಇಂದು ದುಃಖದ ದಿನವಾಗಿದೆ. ಹೌದು, ಹಾವೇರಿ ಜಿಲ್ಲೆಯಲ್ಲಿ ನಿನ್ನೆ(ಶುಕ್ರವಾರ) ರಾತ್ರಿ ಸುರಿದ ರಣ ಭಯಂಕರ ಮಳೆಗೆ ಯುಟಿಪಿ‌ ಕಾಲುವೆ ಒಡೆದಿದೆ. ಇದರಿಂದ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ಜಲಾವೃತವಾಗಿದೆ. 

ಈ ಮೂಲಕ ಮಹಾ ಮಳೆ ದಸರಾ ಸಡಗರ ಸಂಭ್ರಮವನ್ನ ಕಸಿದುಕೊಂಡಿದೆ. ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಹತ್ತಿ, ಗೋವಿನಜೋಳ, ಶೇಂಗಾ ಸೋಯಾಬಿನ್, ಕಬ್ಬು ನೀರು ಪಾಲಾಗಿದೆ. ಯುಟಿಪಿ ಕಾಲುವೆ ಒಡೆದು ನೀರು ಹರೆಯೋದನ್ನ ನೋಡಿ ರೈತರು ಕಂಗಾಲಾಗಿದ್ದಾರೆ. 

Latest Videos

undefined

ರೈತ ಸಂಘದ ನಾಯಕಿ ಮೇಲೆ 3 ಬಾರಿ ಅತ್ಯಾಚಾರಗೈದ ಶಾಸಕ ವಿನಯ್‌ ಕುಲಕರ್ಣಿ: ಧರ್ಮಸ್ಥಳದಲ್ಲೂ ಬಿಡಲಿಲ್ಲ!

ಹಾವೇರಿ ತಾಲೂಕಿನ ಕನಕಾಪುರ ಗ್ರಾಮದ ಬಳಿ ಇರುವ ಯುಟಿಪಿ‌ ಕಾಲುವೆ ಒಡೆದು ಭಾರೀ ಅವಾಂತರ ಸೃಷ್ಟಿಯಾಗಿದೆ. ಕಳಪೆ ಕಾಮಗಾರಿ ಸಾರಿ ಹೇಳುತ್ತಿದೆ ಒಡೆದ ಯುಟಿಪಿ‌ ಕಾಲುವೆ. ಅಧಿಕಾರಿಗಳು, ಜನ ಪ್ರತಿನಿಧಿಗಳು ಮಾತ್ರ ಹಬ್ಬದ ಸಂಭ್ರಮದಲ್ಲಿದ್ದಾರೆ. ರೈತರು ಮಾತ್ರ ಕಂಗಾಲಾಗಿದ್ದಾರೆ. 

ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ರೈತರು ಗೋಳಾಡಿದ್ದಾರೆ.  ಕಳಪೆ ಯುಟಿಪಿ ಕಾಮಗಾರಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆ ಹಾನಿ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಮಾಡೋದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. 

click me!