ದಸರಾ ಹಬ್ಬದ ಬೆನ್ನಲ್ಲೇ ನೀರಿನ ದರ ಏರಿಕೆ ಫಿಕ್ಸ್...!

Published : Oct 12, 2024, 08:45 AM IST
ದಸರಾ ಹಬ್ಬದ ಬೆನ್ನಲ್ಲೇ ನೀರಿನ ದರ ಏರಿಕೆ ಫಿಕ್ಸ್...!

ಸಾರಾಂಶ

2014 ರಲ್ಲಿ ಕಾವೇರಿ ನೀರಿನ ದರ ಬೆಂಗಳೂರು ನಗರದಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಕಳೆದ ಹತ್ತು ವರ್ಷದಿಂದ ನೀರಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ಜಲಮಂಡಳಿ ಹಿತದೃಷ್ಟಿಯಿಂದ ನೀರಿನ ದರ ಪರಿಷ್ಕರಣೆ ಮಾಡುತ್ತೇವೆ ಎಂದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್

ಬೆಂಗಳೂರು(ಅ.12): ಶೀಘ್ರದಲ್ಲೇ ಕಾವೇರಿ ನೀರಿನ ದರ ಪರಿಷ್ಕರಣೆಯಾಗಲಿದೆ. ಹೌದು, ಕಾವೇರಿ ನೀರಿನ ದರ ಹೆಚ್ಚಳಕ್ಕೆ ಬೆಂಗಳೂರು ಜಲಮಂಡಳಿ ಸಿದ್ಧತೆ ಮಾಡಿಕೊಂಡಿದೆ. ರಾಜಧಾನಿ ಜನರಿಗೆ ಹೊರೆಯಾಗದಂತೆ ನೀರಿನ ದರ ಏರಿಕೆ ಮಾಡಲಿದೆಯಂತೆ ಬೆಂಗಳೂರು ಜಲಮಂಡಳಿ. 

ಈಗಾಗಲೇ ಬೆಂಗಳೂರು ಜನರ ಅಭಿಪ್ರಾಯವನ್ನ ಜಲಮಂಡಳಿ ಸಂಗ್ರಹ ಮಾಡಿಕೊಂಡಿದೆ. ನೀರಿನ ದರ ಪರಿಷ್ಕರಣೆ ಸಂಬಂಧ ಸಾರ್ವಜನಿಕ ಆಕ್ಷೇಪಣೆಗೆ ಈ ಬಾರಿ ಅವಕಾಶ ನೀಡಲಾಗಿತ್ತು. ಗೃಹ, ಗೃಹೇತರರ ನೀರಿನ ಬಳಕೆದಾರರು, ಹೋಟೆಲ್, ಅಪಾರ್ಟ್ಮೆಂಟ್ ಅಸೋಸಿಯೇಷನ್ ಜೊತೆ ಸಭೆ ನಡೆಸಲಾಗಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನೀರಿನ ದರ ಪರಿಷ್ಕರಣೆ ಮಾಡಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ. 

ಬೆಂಗಳೂರಿಗರಿಗೆ ಶಾಕ್: ಗಣೇಶ ಹಬ್ಬಕ್ಕೂ ಮುನ್ನ ಕಾವೇರಿ ನೀರಿನ ದರ ಏರಿಕೆ?

2014 ರಲ್ಲಿ ಕಾವೇರಿ ನೀರಿನ ದರ ಬೆಂಗಳೂರು ನಗರದಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಕಳೆದ ಹತ್ತು ವರ್ಷದಿಂದ ನೀರಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ಜಲಮಂಡಳಿ ಹಿತದೃಷ್ಟಿಯಿಂದ ನೀರಿನ ದರ ಪರಿಷ್ಕರಣೆ ಮಾಡುತ್ತೇವೆ ಎಂದು ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ. 

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ