Flood Effect : ರೈತರ ಖಾತೆಗೆ ಪರಿಹಾರ ಹಣ ಜಮಾ

By Kannadaprabha News  |  First Published Dec 28, 2021, 11:47 AM IST
  • ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಈಡಾಗಿದ್ದವರಿಗಾಗಿ ಸರ್ಕಾರವು 5.98 ಕೋಟಿ ಪರಿಹಾರ ಹಣ ಮಂಜೂರು
  • ಪ್ರತಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಪರಿಹಾರ ಧನ ನೇರವಾಗಿ ವರ್ಗಾಯಿಸಲಾಗಿದೆ

 ಮಾಲೂರು (ಡಿ.28):  ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಈಡಾಗಿದ್ದವರಿಗಾಗಿ ಸರ್ಕಾರವು (Karnataka Govt) 5.98 ಕೋಟಿ ಪರಿಹಾರ ಹಣ (Money) ಮಂಜೂರು ಮಾಡಿದ್ದು, ಪ್ರತಿ ಫಲಾನುಭವಿಗಳ ಬ್ಯಾಂಕ್‌  ಖಾತೆಗೆ (Bank account)  ಪರಿಹಾರ ಧನ ನೇರವಾಗಿ ವರ್ಗಾಯಿಸಲಾಗಿದೆ ಎಂದು ಶಾಸಕ ಕೆ.ವೈ. ನಂಜೇಗೌಡ (KY Nanjegowda) ಹೇಳಿದರು.

ಪಟ್ಟಣದ ತಹಸೀಲ್ದಾರ್‌ (tahasildar) ಕಚೇರಿಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೂಡನೆ ಸಭೆ ನಡೆಸಿದ ನಂತರ ಪತ್ರಕರ್ತರೂಡನೆ ಮಾತನಾಡಿದ ಅವರು, ತಾಲೂಕಿನಲ್ಲಿ ಭಾರಿ ಮಳೆಗೆ (Rain) 15 ಮನೆ (House) ಸಂಪೂರ್ಣವಾಗಿ ,72 ಮನೆಗಳು ಹೆಚ್ಚು ಹಾನಿಗೆ ಒಳಗಾಗಿದ್ದು,119 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಸಂಪೂರ್ಣ ನೆಲ ಕಚ್ಚಿದ ಮನೆಗೆ ಘೋಷಿಸಿದ 5 ಲಕ್ಷ ಪರಿಹಾರ ಹಣದಲ್ಲಿ ಮೊದಲ ಕಂತಾಗಿ 95 ಸಾವಿರ ರು.ಗಳನ್ನು ನೀಡಿದ್ದು, ಅದರಂತೆ ಹೆಚ್ಚು ಹಾನಿಗೆ ಒಳಗಾದ ಮನೆಗೆ ಘೋಷಣೆಯಾದ 3 ಲಕ್ಷದಲ್ಲಿ 95 ಸಾವಿರ ಹಾಗೂ ಭಾಗಶಃ ಹಾನಿ ಒಳಗಾದ 119 ಮನೆಗಳಿಗೆ ತಲಾ 50 ಸಾವಿರ ವಿತರಿಸಲಾಗಿದೆ ಎಂದರು.

Latest Videos

undefined

ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾ :  ಮಳೆಯಿಂದ ಬೆಳೆ ಹಾನಿಗೆ ಒಳಗಾಗಿದ್ದ 8208 ರೈತರಿಗೆ (Farmers) ಎಕರೆಗೆ 6 ಸಾವಿರದಂತೆ 2,73,5716 ರು.ಗಳನ್ನು ಹಾಗೆಯೇ ತೋಟಗಾರಿಗೆ ಅಡಿಯಲ್ಲಿ (Areca) ಬೆಳೆ ನಷ್ಟ ಹೊಂದಿದ್ದ 1633 ರೈತರಿಗೆ ಎಕರೆಗೆ 13 ಸಾವಿರದಂತೆ 1,86,36343 ಹಣ ವನ್ನು ನೇರವಾಗಿ ಪಲಾನುಭವಿಗಳ ಬ್ಯಾಂಕ್‌ ಖಾತೆಗೆ (Bank Account ) ವರ್ಗಾಯಿಸಲಾಗಿದೆ ಎಂದರು.ರಾಜ್ಯ ಸರ್ಕಾರ (Karnataka Govt)  ನೀಡುತ್ತಿರುವ ಪರಿಹಾರ ಹಣ (Money) ಸಾಕಾಗುವುದಿಲ್ಲ ಎಂದ ಅಧಿವೇಶನದಲ್ಲಿ ಒಕ್ಕೂರಲಿನಿಂದ ಹಾಕಿದ ಒತ್ತಾಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು (Karnataka Govt) ಪರಿಹಾರ ಹಣವನ್ನು ದ್ವಿಗುಣಗೊಳಿಸಿದ್ದು,ಅ ಹಣವು ನೇರವಾಗಿ ಪಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದರು.

ರಾಜ್ಯದಲ್ಲಿ ಓಮೈಕ್ರಾನ್‌ (Omicron) ವೈರಸ್‌ ವೇಗವಾಗಿ ಹಬ್ಬುತ್ತಿದ್ದು, ತಜ್ಞರು ನೀಡಿದ್ದ ಸಲಹೆಯಂತೆ ಸರ್ಕಾರವು ಜಾರಿಗೊಳಿಸಿರುವ ನೂತನ ಮಾರ್ಗಸೂಚಿಯನ್ನು ತಪ್ಪದೆ ಎಲ್ಲರೂ ಪಾಲಿಸಬೇಕು. ಒಮಿಕ್ರೋನ್‌ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ (Karnataka Govt) ಉತ್ತಮ ಕ್ರಮ ಕೈಗೊಂಡಿದೆ ಎಂದರು. ತಹಸೀಲ್ದಾರ್‌ ರಮೇಶ್‌ (Ramesh) ಇದ್ದರು.

click me!