ರೈತರಿಗೊಂದು ಶುಭ ಸುದ್ದಿ: ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮೆ

By Suvarna NewsFirst Published Dec 22, 2019, 7:57 AM IST
Highlights

ಮುಂಗಾರು ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮೆ| ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಕಲ​ಘ​ಟಗಿ ಶಾಸಕ ಸಿ.ಎಂ. ನಿಂಬ​ಣ್ಣ​ವರ ರೈತ​ರಿಗೆ ಅಭ​ಯ|5098 ಫಲಾನುಭವಿಗಳಿಗೆ ಶೀಘ್ರದಲ್ಲೇ ಜಮಾ ಆಗಲಿದೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ|

ಕಲಘಟಗಿ[ಡಿ.22]: ತಾಲೂಕಿನಲ್ಲಿ ಅತಿ​ವೃಷ್ಟಿಯಿಂದಾಗಿ ಹಾನಿಗೀಡಾದ ರೈತರಿಗೆ ಶೇ. 50 ಕ್ಕಿಂತ ಹೆಚ್ಚು 28, 813 ಹೆಕ್ಟರ ಕ್ಷೇತ್ರದಲ್ಲಿ 18, 204 ರೈತರ ಬೆಳೆ ಹಾನಿಗೀಡಾದ 2019​- 20ನೇ ಸಾಲಿನ ಮುಂಗಾರು ಮಳೆ ಹಾನಿ ಪರಿಹಾರ ತಾಲೂಕಿನ ರೈತ ಫಲಾನುಭವಿಗಳಿಗೆ 13,106 ರೈತರ ಖಾತೆಗೆ 18,36,90 ಸಾವಿರ ಈಗಾಗಲೇ ರೈತರ ಖಾತೆಗೆ ಜಮಾ ಆಗಿದೆ ಎಂದು ಶಾಸಕ ಸಿಎಂ ನಿಂಬಣ್ಣವರ ತಿಳಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 5098 ಫಲಾನುಭವಿಗಳಿಗೆ ಶೀಘ್ರದಲ್ಲೇ ಜಮಾ ಆಗಲಿದೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ಯೋಜನೆ ಅಡಿಯಲ್ಲಿ 15,829 ಫಲಾನುಭವಿಗಳನ್ನು ತಂತ್ರಾಂಶದಲ್ಲಿ ಅಪ್ಲೋಡ್‌ ಮಾಡಿದ್ದು ಇರುತ್ತದೆ ಇಲ್ಲಿಯವರೆಗೆ 6, 60, 92000 ಸಾವಿರ ಜಮೆಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮತಕ್ಷೇತ್ರದ ಅಳ್ಳಾವರ ತಾಲೂಕಿನ 54 ಗ್ರಾಮಗಳಿಗೆ ಒಟ್ಟು 8117 ಹೆಕ್ಟೇರ್‌ ಕ್ಷೇತ್ರದಲ್ಲಿ ಶೇ. 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿದೆ. ಈ ಭಾಗದ . 7,1416 ಫಲಾನುಭವಿಗಳ ಕುರಿತು ಪರಿಹಾರ ತಂತ್ರಾಂಶದಲ್ಲಿ ಅಪ್ಲೋಡ್‌ ಮಾಡಲಾಗಿತ್ತು. ಅದರಲ್ಲಿ 6650 ರೈತ ಫಲಾನುಭವಿಗಳ ಖಾತೆಗೆ 7,15,55,381 ಈಗಾಗಲೇ ರೈತರ ಖಾತೆಗೆ ಬಂದು ತಲುಪಿದೆ. ಇನ್ನುಳಿದ 766 ರೈತ ಫಲಾನುಭವಿಗಳಿಗೆ ಆದಷ್ಟು ಬೇಗನೆ ಬರುತ್ತದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ಯೋಜನೆಯಡಿ ಒಟ್ಟು 2351 ರೈತರನ್ನು ತಂತ್ರಾಂಶದಲ್ಲಿ ಅಪ್ಡೇಟ್‌ ಮಾಡಿದ್ದು ಇದರಲ್ಲಿ . 37, 2000 ಈಗಾಗಲೇ ರೈತರ ಖಾತೆಗೆ ಜಮಾ ಆಗಿರುತ್ತದೆ.

ಉಳಿದ ರೈತರು ಕಂದಾಯ, ಕೃಷಿ ಇಲಾಖೆಗೆ ಸರಿಯಾದ ಮಾಹಿತಿ ಒದಗಿಸದೆ ಇರುವುದರಿಂದ, ಜಮಾ ಆಗಿರುವುದಿಲ್ಲ. ಆದಕಾರಣ ಸರಿಯಾದ ಮಾಹಿತಿ ನೀಡಿ ಮತ್ತು ಎಲ್ಲಾ ಇಲಾಖೆ ಅಧಿಕಾರಿಗಳು ರೈತರ ಬಗ್ಗೆ ಕಾಳಜಿವಹಿಸಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಎಲ್ಲ ರೈತರಿಗೂ, ಸಾಮಾನ್ಯ ಜನರಿಗೂ ತಲುಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಶರೇವಾಡ ಸುನೀತಾ ಮ್ಯಾಗಿನಮನಿ ಚಂದ್ರಗೌಡ ಪಾಟೀಲ ನಿಂಗಪ್ಪ ಸುತಗಟ್ಟಿ ಉಪಸ್ಥಿರಿದ್ದರು.
 

click me!