ರೈತರಿಗೊಂದು ಸಂತಸದ ಸುದ್ದಿ: ಬೆಳೆ ಹಾನಿ ಪರಿಹಾರ ಬಿಡುಗಡೆ

By Suvarna News  |  First Published Jan 9, 2020, 8:30 AM IST

ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ಬಿಡುಗಡೆ| ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2019-20ರಲ್ಲಿ ವಿಮೆ ಮಾಡಿಸಿದ ಹಾವೇರಿ ಜಿಲ್ಲೆಯ 64,660 ರೈತರಿಗೆ 84.97 ಕೋಟಿ ಬಿಡುಗಡೆ|


ಹಾನಗಲ್ಲ(ಜ.09): ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಮುಳುಗಡೆ ಸೇರಿದಂತ ಬಿತ್ತನೆ ನಂತರ ಕಟಾವಿಗೆ ಮೊದಲು ಹಾನಿಯಾದಲ್ಲಿ ರೈತರಿಗೆ ವಿಮಾ ಕಂಪನಿ ತಕ್ಷಣಕ್ಕೆ ಶೇ. 25ರಷ್ಟು ಪರಿಹಾರ ವಿತರಿಸಬೇಕಿದೆ. ಅದರಂತೆ ಕಳೆದ ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದರು. 

ಸುದ್ದಿಗೋಷ್ಠಿ ನಡೆಸಿ ಪರಿಹಾರದ ವಿವರ ನೀಡಿದ ಅವರು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2019-20ರಲ್ಲಿ ವಿಮೆ ಮಾಡಿಸಿದ ಹಾವೇರಿ ಜಿಲ್ಲೆಯ 64,660 ರೈತರಿಗೆ 84.97 ಕೋಟಿ ಬಿಡುಗಡೆಯಾಗಿದೆ. ಅತಿವೃಷ್ಟಿ ಸಂದರ್ಭದಲ್ಲಿಯೇ ಅಧಿಕಾರಿಗಳ ಗಮನ ಸೆಳೆದು, ಗೋವಿನಜೋಳ ಹಾಗೂ ಭತ್ತಕ್ಕೆ ವಿಮಾ ಮಾಡಿಸಿದ ರೈತರಿಗೆ ಪರಿಹಾರ ನೀಡುವ ಕುರಿತು ಸೂಚನೆ ನೀಡಿದ್ದರ ಫಲವಾಗಿ ಈ ಮೊತ್ತ ಬಿಡುಗಡೆಗೆ ಸಾಧ್ಯವಾಯಿತು ಎಂದರು. \

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಾನಗಲ್ಲ ತಾಲೂಕಿನ 20,852 ರೈತರು ವಿಮಾ ಕಂತು ಪಾವತಿಸಿದ್ದಾರೆ. ಅದರಲ್ಲಿ 16,609 ರೈತರಿಗೆ ವಿಮಾ ಕಂಪನಿ ಬೆಳೆನಷ್ಟದ ಶೇ. 25 ರಂತೆ 15.11 ಕೋಟಿ ಬಿಡುಗಡೆ ಗೊಳಿಸಿದೆ. ಅದರಂತೆ ಬ್ಯಾಡಗಿ ತಾಲೂಕಿನ 6840 ರೈತರಿಗೆ 4.93 ಕೋಟಿ, ಹಾವೇರಿ ತಾಲೂಕಿನ 9685 ರೈತರಿಗೆ 9.01 ಕೋಟಿ, ಹಿರೇಕೆರೂರ ತಾಲೂಕಿನ 6370 ರೈತರಿಗೆ 3.03 ಕೋಟಿ, ರಾಣೆಬೆನ್ನೂರ ತಾಲೂಕಿನ 14,430 ರೈತರಿಗೆ 1.09 ಕೋಟಿ, ಸವಣೂರ ತಾಲೂಕಿನ 5475  ರೈತರಿಗೆ 3.65 ಕೋಟಿ, ಶಿಗ್ಗಾಂವಿ ತಾಲೂಕಿನ 4251 ರೈತರಿಗೆ 2.28 ಕೋಟಿ ಸೇರಿದಂತೆ ಜಿಲ್ಲೆಗೆ 48.97 ಕೋಟಿ ಬಿಡುಗಡೆಯಾಗಿದೆ. ಇನ್ನೊಂದು ವಾರದೊಳಗಾಗಿ ಅರ್ಹ ರೈತರ ಖಾತೆಗಳಿಗೆ ಹಣ ಜಮಾ ಆಗಲಿದೆ ಎಂದು ವಿವರಿಸಿದರು. 

ಕೇಂದ್ರ ಸರ್ಕಾರ ರಾಜ್ಯದಲ್ಲಿ ಭತ್ತಕ್ಕೆ 1835 ಬೆಂಬಲ ಬೆಲೆ ನೀಡಿ ಖರೀದಿ ಪ್ರಕ್ರಿಯೆ ಕೈಗೊಂಡಿದೆ. ಆದರೆ, ಅದು ಸಾಲದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ಗೆ 200 ಹೆಚ್ಚುವರಿಯಾಗಿ ಘೋಷಿಸಿದೆ. ಮುಖ್ಯ ಮಂತ್ರಿ ಯಡಿಯೂರಪ್ಪನವರ ರೈತಪರವಾದ ನಿಲುವು ಸ್ವಾಗತಾರ್ಹ. ರೈತರಿಗೆ ಭತ್ತ ಖರೀದಿಗೆ ಅನುಕೂಲವಾಗುವಂತೆ ತಾಲೂಕಿನ ಅಕ್ಕಿಆಲೂರಿನಲ್ಲಿ ಮಿಲ್ಲರ್ ಪಾಯಿಂಟ್ ಸ್ಥಾಪಿಸುವಂತೆ ಸೂಚಿಸಲಾಗಿದೆ ಎಂದು ಸಿ.ಎಂ. ಉದಾಸಿ ತಿಳಿಸಿದರು. 
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಜು ಗೌಳಿ, ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪುರ ಇದ್ದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2019-20 ರಲ್ಲಿ ವಿಮೆ ಮಾಡಿಸಿದ ಹಾವೇರಿ ಜಿಲ್ಲೆಯ 64,660 ರೈತರಿಗೆ 48.97 ಕೋಟಿ ಬಿಡುಗಡೆಯಾಗಿದೆ. ಅತಿವೃಷ್ಟಿ ಸಂದರ್ಭದಲ್ಲಿಯೇ ಅಧಿಕಾರಿಗಳ ಗಮನ ಸೆಳೆದು, ಗೋವಿನಜೋಳ ಹಾಗೂ ಭತ್ತಕ್ಕೆ ವಿಮಾ ಮಾಡಿಸಿದ ರೈತರಿಗೆ ಪರಿಹಾರ ನೀಡುವ ಕುರಿತು ಸೂಚನೆ ನೀಡಿದ್ದರ ಫಲವಾಗಿ ಈ ಮೊತ್ತ ಬಿಡುಗಡೆಗೆ ಸಾಧ್ಯವಾಯಿತು ಎಂದು ಶಾಸಕ ಸಿ.ಎಂ. ಉದಾಸಿ ಅವರು ಹೇಳಿದ್ದಾರೆ. 

* ಬ್ಯಾಡಗಿ ತಾಲೂಕಿನ 6840 ರೈತರಿಗೆ 4.93 ಕೋಟಿ, 

*ಹಾವೇರಿ ತಾಲೂಕಿನ 9685 ರೈತರಿಗೆ 9.01 ಕೋಟಿ

* ಹಿರೇಕೆರೂರ ತಾಲೂಕಿನ 6370 ರೈತರಿಗೆ 3.03 ಕೋಟಿ 

* ರಾಣೆಬೆನ್ನೂರ ತಾಲೂಕಿನ 15,430 ರೈತರಿಗೆ 1.09 ಕೋಟಿ

* ಸವಣೂರ ತಾಲೂಕಿನ 5475 ರೈತರಿಗೆ 3.65 ಕೋಟಿ

* ಶಿಗ್ಗಾಂವಿ ತಾಲೂಕಿನ 4251 ರೈತರಿಗೆ 2.28 ಕೋಟಿ
 

click me!