ಮಳೆ ಹಾಗೂ ಕೃಷ್ಣ ನದಿಯಲ್ಲಿ ನೆರೆ ಬಂದ ಹಿನ್ನೆಲೆಯಲ್ಲಿ ತಾಲೂಕಿನ ಆತ್ಕೂರು ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ದಡದ ಮೇಲೆ ಮೊಸಳೆಗಳ ಹಿಂಡು ಏಕಕಾಲದಲ್ಲಿ ಪ್ರತ್ಯಕ್ಷಗೊಂಡಿದ್ದು, ನದಿ ದಡದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ರಾಯಚೂರು (ಜು.27) : ಮಳೆ ಹಾಗೂ ಕೃಷ್ಣ ನದಿಯಲ್ಲಿ ನೆರೆ ಬಂದ ಹಿನ್ನೆಲೆಯಲ್ಲಿ ತಾಲೂಕಿನ ಆತ್ಕೂರು ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ(Krishna river) ದಡದ ಮೇಲೆ ಮೊಸಳೆಗಳ ಹಿಂಡು ಏಕಕಾಲದಲ್ಲಿ ಪ್ರತ್ಯಕ್ಷಗೊಂಡಿದ್ದು, ನದಿ ದಡದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನದಿಯಲ್ಲಿ ನೀರಿನ ಮಟ್ಟಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಂಡೆ, ಪೊದೆಗಳಲ್ಲಿ ಮೊಸಳೆಗಳು ಅವಿತುಕೊಂಡಿದ್ದು, ಇದನ್ನು ಕಂಡು ಜನರು ಬೆಚ್ಚಿ ಬೀಳುತ್ತಿದ್ದಾರೆ.
ಕಳೆದ ಎರಡು ವಾರಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟಜಾಸ್ತಿಯಾಗುತ್ತಿದೆ. ತಾಲೂಕಿನ ಯಾಪಲದಿನ್ನಿ ಹೋಬಳಿಯ ಆತ್ಕೂರು ಸಮೀಪದಲ್ಲಿ ಕೃಷ್ಣಾ ನದಿ ತಟದಲ್ಲಿ ಮೊಸಳೆಗಳ ಗುಂಪು ಬಿಡಾರ ಹೂಡಿದ್ದು, ಬಂಡೆ, ಪೊದೆಗಳಲ್ಲಿ ಅವಿತುಕೊಂಡಿರುವ ಮೊಸಳೆಗಳ ಸಮೂಹವನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.
ಗಂಗಾವತಿ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ; ಆತಂಕದಲ್ಲಿ ಜನರು!
ನದಿತಟದಲ್ಲಿರುವ ಆತ್ಕೂರು, ಡಿ.ರಾಂಪುರ ಗ್ರಾಮಗಳಿಂದ ನಡುಗಡ್ಡೆ ಪ್ರದೇಶಗಳಿಗೆ ಹಾಗೂ ದತ್ತಾತ್ರೇಯ ಹಾಗೂ ನಾರದಗಡ್ಡೆ ಗುಡಿಗೆ ಜನರು ಮತ್ತು ಭಕ್ತರು ನಿತ್ಯ ದೋಣಿ ಮೇಲೆ ಹೋಗುತ್ತಾರೆ. ಇದೀಗ ಆ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಮೊಸಳೆಗಳ ಹಿಂಡು ಭಯಭೀತಗೊಂಡಿದ್ದಾರೆ. ಮೊಸಳೆಗಳ ಗುಂಪಿನ ವಿಡಿಯೋವನ್ನು ಸ್ಥಳೀಯರು ಚಿತ್ರಿಕರಿಸಿದ್ದು ಇದೀಗ ಆ ತುಣುಕು ವೈರಲ್ಗೊಂಡಿದೆ.