ಬೆಂಕಿ ನಂದಿಸುವವರಿಗಿಂತ, ಬೆಂಕಿ ಹಚ್ಚುವವರಿಗೇ ಮನ್ನಣೆ

By Kannadaprabha News  |  First Published Oct 6, 2023, 9:16 AM IST

ಹಿಂದೆ ಯಾವುದು ಅಧರ್ಮ, ಅನೀತಿ, ಗೂಂಡಾಗಿರಿ, ಮೋಸ, ಕೋಮು ಪ್ರಚೋದನೆಗಳೇ ಇಂದು ಲೀಡರ್ ಅನ್ನಿಸಿಕೊಳ್ಳಲು ಮಾನದಂಡಗಳಾಗಿರುವುದು ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವುದರ ಸಂಕೇತ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಞ ತಿಳಿಸಿದ್ದಾರೆ.


 ತುಮಕೂರು :  ಹಿಂದೆ ಯಾವುದು ಅಧರ್ಮ, ಅನೀತಿ, ಗೂಂಡಾಗಿರಿ, ಮೋಸ, ಕೋಮು ಪ್ರಚೋದನೆಗಳೇ ಇಂದು ಲೀಡರ್ ಅನ್ನಿಸಿಕೊಳ್ಳಲು ಮಾನದಂಡಗಳಾಗಿರುವುದು ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವುದರ ಸಂಕೇತ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಞ ತಿಳಿಸಿದ್ದಾರೆ.

ನಗರದ ಬಾಲಭವನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ ಅವರ ಕುರಿತು ವಿಚಾರಗೋಷ್ಠಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

Latest Videos

undefined

ಸಮಸ್ಯೆಗೆ ಪರಿಹಾರ ನೀಡುವ ವ್ಯಕ್ತಿ ಇಂದು ನಾಯಕನಾಗುತ್ತಿಲ್ಲ. ಸಮಸ್ಯೆಯನ್ನು ಹುಟ್ಟು ಹಾಕುವ ಆ ಸ್ಥಾನದಲ್ಲಿ ರಾರಾಜಿಸುತ್ತಿದ್ದಾನೆ. ಬೆಂಕಿ ನಂದಿಸುವವರಿಗಿಂತ, ಬೆಂಕಿ ಹಚ್ಚುವವರಿಗೆ ಮನ್ನಣೆ ಹೆಚ್ಚಾಗುತ್ತಿದೆ. ಹಾಗಾಗಿ ಮಹಾಪುರುಷರಾದ , ಬುದ್ದ, ಬಸವಣ್ಣ, ನಾರಾಯಣಗುರು ಅವರ ಜೀವನ ಸಂದೇಶ ಯುವಜನರಿಗೆ ಪರಿಚಯಿಸುವ ಅಗತ್ಯವಿದೆ ಎಂದರು.

ಜಗತ್ತಿನ ಎಲ್ಲಾಗಳು ಹೇಳಿರುವುದು ಪ್ರೀತಿ, ಕರುಣೆ, ಸಹಬಾಳ್ವೆ, ಭಾತೃತ್ವ. ಆದರೆ, ಅದನ್ನು ಅನುಸರಿಸುವವರು ಧರ್ಮದ ಸಂಕೇತಕ್ಕೆ ಮಹತ್ವ ನೀಡುತ್ತಿದ್ದಾರೆಯೇ ವಿನಹಃ, ಧರ್ಮದ ಮೌಲ್ಯಗಳಿಗಲ್ಲ. ಇಂದಿಗೂ ಜಗತ್ತನ್ನು ಆಳುತ್ತಿರುವುದು ಜನಾಂಗೀ ಯತೆ. ನಾವು ಶ್ರೇಷ್ಠ ನಮಗೆ ಎಲ್ಲಾ ಅಧಿಕಾರ ಸಿಗಬೇಕು ಎಂದು ಬಯಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ತೊಡೆದು ಹಾಕಿ ಆರನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ಅವರ ಪ್ರತಿಪಾದಿಸಿ ಸಮಾನತೆ ಯನ್ನು ನಾವೆಲ್ಲರೂ ಪಾಲಿಸಬೇಕೆಂದು ಮೊಹಮ್ಮದ್ ಕುಂಞ ತಿಳಿಸಿದರು.

ತುಮಕೂರು ವಿವಿ ಕಲಾ ಕಾಲೇಜು ಪ್ರಾಂಶುಪಾಲ ಡಾ.ಹೊನ್ನಗಾನಹಳ್ಳಿ ಕರಿಯಣ್ಣ ಮಾತನಾಡಿ, ಬೈಬಲ್ ರೀತಿಯಲ್ಲಿಯೇ ಕುರಾನ್‌ನ ಕನ್ನಡ ಪ್ರತಿಗಳು ಆಸಕ್ತ ಓದುಗರಿಗೆ ದೊರೆತು, ಅದನ್ನು ಓದುವುದರಿಂದ ಜನರಲ್ಲಿ ಇಸ್ಲಾಂ ಧರ್ಮದ ಬಗ್ಗೆ ಇರುವ ತಪ್ಪು ಅಭಿಪ್ರಾಯ ಹೋಗಲಾಡಿಸಲು ಸಾಧ್ಯ. ಪದವಿಯವರೆಗೆ ಇಸ್ಲಾಂ ಧರ್ಮದ ಬಗ್ಗೆ ತಿಳಿವಳಿಕೆ ಇಲ್ಲದ ನನಗೆ ಎಂ.ಫಿಲ್ ಮಾಡುವ ಸಂದರ್ಭದಲ್ಲಿ ಇಸ್ಲಾಂ ಧರ್ಮದ ಕುರಿತೇ ವಿಷಯ ಆರಿಸಿಕೊಂಡು ಅಧ್ಯಯನ ಕೈಗೊಂಡಾಗ ಪ್ರವಾದಿಗಳ ಉದಾತ್ತ ಚಿಂತನೆಗಳ ಪರಿಚಯವಾಯಿತು. ಬೇರೆ ಬೇರೆ ಧರ್ಮದ ಗ್ರಂಥಗಳನ್ನು ಓದುವುದರಿಂದ ನಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ಇತಿಶ್ರೀ ಹಾಡಬಹುದೆಂದರು.

ಕೆಪಿಸಿಸಿ ವಕ್ತಾರ ನಿಕೇತ್‌ರಾಜ್ ಮೌರ್ಯ ಮಾತನಾಡಿ, ಮನುಷ್ಯತ್ವವೇ ಮರೆಯಾಗಿದ್ದ ಅರಬ್ ದೇಶದಲ್ಲಿ ಹುಟ್ಟಿದ ಪ್ರವಾದಿಯವರು, ಆ ಜನರಿಗೆ ಮನುಷ್ಯತ್ವ, ಮಾನವೀಯತೆ, ಅಂತಃಕರಣ, ಸಹಬಾಳ್ವೆಯನ್ನು ಕಲಿಸಿದರು. ದುಖಃದಲ್ಲಿರುವವರ ಸೇವೆ ಮಾಡುವುದೇ ನಿಜವಾದ ಧರ್ಮ ಎಂದು ಸಾರಿದ ಪ್ರವಾದಿಗಳ ಸಂದೇಶಗಳನ್ನು ಶಾಂತಿ ಪ್ರಕಾಶನ ಕನ್ನಡದಲ್ಲಿ ಮುದ್ರಿಸಿ, ಪ್ರಚುರ ಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನೊಂದು ಧರ್ಮದವರನ್ನು ಕೆರಳಿಸುವಂತಹ ಧಾರ್ಮಿಕ ಆಚರಣೆಯ ಬಗ್ಗೆ ಸಮಾಜದ ಹಿರಿಯರು, ಯುವಜನರಿಗೆ ಬುದ್ಧಿವಾದ ಹೇಳಬೇಕಿದೆ ಎಂದರು.

ಉಪನ್ಯಾಸಕ ಕೊಟ್ಟ ಶಂಕರ್ ಮಾತನಾಡಿ, ಎಲ್ಲರನ್ನು ಸಮಾನವಾಗಿ ಕಾಣುವುದೇ ನಿಜವಾದ ಧರ್ಮ ಎಂಬುದನ್ನು ಪ್ರವಾದಿಗಳು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ನಮ್ಮ ಮಕ್ಕಳ ಯಾವುದೇ ಧರ್ಮದ ಮೂಲಭೂತವಾದಿಗಳ ಸಿಲುಕದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ಟೂಡೆಂಟ್ ಇಸ್ಲಾಮಿಕ್‌ ಆರ್ಗನೈಜೇಷನ್‌ನ ರಿಯಾಜ್ ಅಹಮದ್ ರೋಣ, ಜಮಾಆತೆ ಇಸ್ಲಾಮಿ ಹಿಂದ್‌ನ ತುಮಕೂರು ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್, ಸ್ಥಾನಿಕ ಅಧ್ಯಕ್ಷ ಅಸಾದುಲ್ಲಾ ಖಾನ್, ಮುಖಂಡರಾದ ನೌಶಾದ್ ಅನ್ಸರ್‌ಪಾಷ, ಅನ್ಸಾರ್‌ಅಹಮದ್, ತಮೀಜುದ್ದೀನ್, ತಾಜುದ್ದೀನ್ ಷರೀಫ್, ಹನೀಫ್‌ವುಲ್ಲಾ, ಮೌಲಾನ ಖಾಲಿದ್ ನದ್ವಿ, ಇಮಾಮ್ ಬೇಗ್, ಬಾಬು ಅಹಮದ್ ಖಾನ್ ಮತಿತ್ತರರು ಪಾಲ್ಗೊಂಡಿದ್ದರು.

click me!