ಚಿಕ್ಕಮಗಳೂರು: ವರ್ಗಾವಣೆ ತಪ್ಪಿಸಿಕೊಳ್ಳಲು ಶಿಕ್ಷಕರಿಂದ ಸುಳ್ಳು ದಾಖಲೆ ಸೃಷ್ಠಿ?

By Girish Goudar  |  First Published Jan 21, 2023, 1:00 AM IST

ಇಲ್ಲದ ಖಾಯಿಲೆ ಇದ್ದರೂ ಗಂಭೀರ ಸ್ವರೂಪದ್ದೆಂದು ಪತ್ರ , ವೈದ್ಯಕೀಯ ಪ್ರಮಾಣ ಪತ್ರ ನೀಡ್ತಿರೋ ಶಿಕ್ಷಕರು, ಜಿಲ್ಲೆಯಲ್ಲಿ 64 ಹೆಚ್ಚುವರಿ ಶಿಕ್ಷಕರನ್ನ ಗುರುತಿಸಿ ವರ್ಗಾವಣೆಗೆ ಸರ್ಕಾರದ ಆದೇಶ. 12 ಜನ ಶಿಕ್ಷಕರು ಮದ್ಯವರ್ತಿಗಳ ಮೂಲಕ ವಾಮಾಮಾರ್ಗದಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ. ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಹುನ್ನಾರ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.21):  ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದ್ರೆ ಶಿಕ್ಷಕರು ತಿದ್ದಿ ಬುದ್ಧಿ ಹೇಳ್ತಾರೆ. ಆದ್ರೆ, ಮಕ್ಕಳ ಭವಿಷ್ಯ ರೂಪಿಸೋ ಶಿಕ್ಷಕರೇ ಅಡ್ಡ ದಾರಿ ಹಿಡಿದ್ರೆ ಹೇಗಲ್ವಾ. ವರ್ಗಾವಣೆ ತಪ್ಪಿಸಿಕೊಳ್ಳಲು ಇಲ್ಲದ ಖಾಯಿಲೆ ಹಾಗೂ ಇದ್ದರೂ ಗಂಭೀರ ಸ್ವರೂಪದ್ದೆಂದು ವೈದ್ಯಕೀಯ ಪ್ರಮಾಣ ಪತ್ರ ನೀಡ್ತಿರೋ ಶಿಕ್ಷಕರು ವರ್ಗಾವಣೆಗೆ ಬೆನ್ನು ತೋರಿಸುತ್ತಿದ್ದಾರೆ. ಮುಚ್ಚಿರುವ ಶಾಲೆ ಹಾಗೂ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಿಕ್ಷಕರನ್ನ ವರ್ಗಾವಣೆ ಮಾಡುತ್ತಿದ್ದಂತೆ, ಮದ್ಯವರ್ತಿಗಳಿಂದ ವಾಮಾಮಾರ್ಗದ ಮೂಲಕ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ಕೊಟ್ಟು ವರ್ಗಾವಣೆ ತಪ್ಪಿಸಿಕೊಳ್ಳಲು ಮುಂದಾಗ್ತಿದ್ದಾರೆ. 

Latest Videos

undefined

ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಹುನ್ನಾರ 

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ವರ್ಗಾವಣೆಗೊಳ್ಳಲು ಹಿಂದೇಟು ಹಾಕ್ತಿರೋ ಶಿಕ್ಷಕರು ವಾಮಾಮಾರ್ಗದ ಮೂಲಕ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಮುಂದಾಗಿದ್ದಾರೆ. ಕಾರಣವಿಷ್ಟೆ, ತರೀಕೆರೆ ತಾಲೂಕಿನಲ್ಲಿ ಶಾಲೆ ಮುಚ್ಚಿರುವ ಹಾಗೂ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಶಿಕ್ಷಕರು ಹೆಚ್ಚಿರುವ 64 ಶಿಕ್ಷಕರನ್ನ ಗುರುತಿಸಿ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ವರ್ಗಾವಣೆಗೆ ಸರ್ಕಾರ ಆದೇಶಿಸಿತ್ತು. ಆದರೆ, 12 ಜನ ಶಿಕ್ಷಕರು ಮದ್ಯವರ್ತಿಗಳ ಮೂಲಕ ವಾಮಾಮಾರ್ಗದಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಆದರೆ, 12ರಲ್ಲಿ ನಾಲ್ವರು ಶಿಕ್ಷಕರ ವೈದ್ಯಕೀಯ ಪ್ರಮಾಣ ಪತ್ರದ ಬಗ್ಗೆ ಅನುಮಾನಗೊಂಡ ತರೀಕೆರೆ ತಾಲೂಕು ಬಿಇಓ ಜಿಲ್ಲಾ ಸರ್ಜನ್ ಒಳಗೊಂಡ ತ್ರಿಸದಸ್ಯ ಸಮಿತಿಗೆ ಪತ್ರ ಬರೆದು ಇವರ ಪ್ರಮಾಣಪತ್ರವನ್ನ ಮತ್ತೊಮ್ಮೆ ಪರಿಶೀಲಿಸಲು ಕೇಳಿಕೊಂಡಿದ್ದಾರೆ. ಒಂದು ವೇಳೆ ಅವರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದು ಸಾಬೀತಾದರೆ ಬಿಇಓ ಮೇಲಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಿದ್ದಾರೆ. 

ವಿಮಾನದ ಡೋರ್ ತೆರೆದಿದೆ ಎಂದಿದ್ದೇ ತಪ್ಪಾಯ್ತಾ?: ತೇಜಸ್ವಿ ಸೂರ್ಯರನ್ನು ಸಮರ್ಥಿಸಿಕೊಂಡ ಸಿ.ಟಿ. ರವಿ

ಶಿಕ್ಷಕರ ಮರು ಆರೋಗ್ಯ ತಪಾಸಣೆಗೆ ಸೂಚನೆ : 

ತರೀಕೆರೆ ಬಿಇಓ ಅವರ ಪತ್ರದ ಆಧಾರದ ಮೇಲೆ ಜಿಲ್ಲಾ ಸರ್ಜನ್ ಡಾ.ಮೋಹನ್ ನೇತೃತ್ವದಲ್ಲಿ ಇಂದು ನಾಲ್ವರು ಶಿಕ್ಷಕರ ಮರು ಆರೋಗ್ಯ ತಪಾಸಣೆ ನಡೆದಿದೆ. ಅದರಂತೆ ಇಂದು ಬಿಇಓ ಕಚೇರಿಯ ಓರ್ವ ಸಿಬ್ಬಂದಿ ಜೊತೆ ನಾಲ್ವರು ಶಿಕ್ಷಕರು ಮರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಮರು ತಪಾಸಣೆಯಲ್ಲಿ ಶಿಕ್ಷಕರು ನಕಲಿ ಪ್ರಮಾಣ ಪತ್ರ ನೀಡಿದ್ದಾರೆಂದು ಖಾತ್ರೆಯಾದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಬಿಇಓ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಿದ್ದಾರೆ.

ಶಿಕ್ಷಕರ ಈ ನಕಲಿ ಪ್ರಮಾಣ ಪತ್ರದಿಂದ ಎರಡನೇ ಹಿರಿಯ ಶಿಕ್ಷಕರ ಬದುಕಿಗೆ ಕಂಟಕವಾಗಿ ಪರಿಣಮಿಸಿದೆ. ಹತ್ತಾರು ವರ್ಷಗಳಿಂದ ಒಂದೇ ಕಡೆ ಅಥವ ಮಲೆನಾಡ ಕುಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ವರ್ಗಾವಣೆ ಬಯಸಿದರು ಸಾಧ್ಯವಾಗುತ್ತಿರಲಿಲ್ಲ. ಇದೀಗ, ಬಹುಶಃ ಹಲವು ವರ್ಷಗಳಿಂದಲೂ ವರ್ಗಾವಣೆ ವೇಳೆ ಶಿಕ್ಷಕರು ಹೀಗೆ ಮಾಡುತ್ತಿದ್ದರಾ ಎಂಬ ಅನುಮಾನ ಕೂಡ ಮೂಡಿದೆ. ಇಂದು ಬಿಇಓ ಅವರ ಈ ನಡೆ ಮುಂದಿನ ದಿನಗಳಲ್ಲಿ ನಕಲಿ ಪ್ರಮಾಣ ಪತ್ರ ನೀಡಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಬಹುದು. ಒಟ್ಟಾರೆ, ಶಿಕ್ಷಕರು ನೀಡಿರೋ ವೈದ್ಯಕೀಯ ಪ್ರಮಾಣ ಪತ್ರ ಅಸಲಿಯೋ.... ನಕಲಿಯೋ.... ಗೊತ್ತಿಲ್ಲ. ಅವರಿಗೆ ಆರೋಗ್ಯ ಸಮಸ್ಯೆ ಇದೆಯೋ... ಇಲ್ಲವೋ.... ಇದ್ದರೂ ಯಾವ ಪ್ರಮಾಣದಲ್ಲಿ ಇದೆ ಅನ್ನೋದು ಸ್ಪಷ್ಟವಿಲ್ಲ. ಆದರೆ, ಅವರು ಪ್ರಮಾಣ ಪತ್ರ ನೀಡಿರೋದಂತು ಸತ್ಯ. ಅನುಮಾನಗೊಂಡು ಬಿಇಓ ಮರು ಆರೋಗ್ಯ ತಪಾಸಣೆಗೆ ಸೂಚಿಸಿರೋದು ಕೂಡ ಸತ್ಯ. ಆದ್ರೆ, ಮರುತಪಾಸಣೆಯಲ್ಲಿ ಶಿಕ್ಷಕರು ಸಿಕ್ಕಿಬಿದ್ರೆ ಶಿಕ್ಷೆ ಪಕ್ಕಾ.

click me!