ಆನ್‌ಲೈನ್‌ ಖರೀದಿದಾರರೇ ಹುಷಾರ್‌: ಎಚ್ಚರ ತಪ್ಪಿದ್ರೆ ಬೀಳುತ್ತೇ ಪಂಗನಾಮ!

By Kannadaprabha NewsFirst Published Feb 1, 2020, 11:03 AM IST
Highlights

ಆನ್‌ಲೈನ್‌ನಲ್ಲಿ ಸೀರೆ ಖರೀದಿ| 45 ಸಾವಿರ ರು ವಂಚನೆ| ಕ್ರೇಜಿ ಸಾರಿ.ಕಾಂ ಎಂಬ ವೆಬ್‌ಸೈಟಿನಲ್ಲಿ ಸೀರೆ ಆರ್ಡರ್ ಮಾಡಿ ಯಟವಟ್ಟು| ವೈದ್ಯೆಯ ಬ್ಯಾಂಕ್ ಖಾತೆಯಿಂದ 45 ಸಾವಿರ ರು. ಹಣ ವರ್ಗಾವಣೆ| 

ಬೆಳಗಾವಿ(ಫೆ.01): ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ತಮಗೇ ಬೇಕಾದ ವಸ್ತುಗಳನ್ನು ಕುಳಿತಲ್ಲೆ ತರೆಸಿ ಕೊಳ್ಳುವವರ ಸಂಖ್ಯೆ ಹೆಚ್ಚಾದಂತೆ, ಮೋಸ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ ಆನ್‌ಲೈನ್ ಮೂಲಕ ವಂಚನೆ ಮಾಡುವವರು ನಿರ್ಭಯವಾಗಿ ತಮ್ಮ ಹೀನಕೃತ್ಯವನ್ನು ನಡೆಸುತ್ತಿದ್ದಾರೆ. 

ಸದ್ಯ ಬೆಳಗಾವಿ ನಗರದ ಮಹಿಯೋರ್ವಳು ಆನ್‌ಲೈನ್ ಮೂಲಕ ಖರೀದಿಸಿದ್ದ ಸೀರೆಯನ್ನು ಹಿಂದಿರುಗಿಸಲು ಹೋಗಿ ಬರೊಬ್ಬರಿ 45 ಸಾವಿರ ಕಳೆದುಕೊಂಡಿದ್ದಾರೆ. ನಗರದ ಕ್ಯಾಂಪ್ ಪ್ರದೇಶದ ಡಾ. ದೃಷ್ಠಿ ದೀಪಕ್ ಪಾಟೀಲ ಎಂಬುವರು ಈಚೆಗೆ ಕ್ರೇಜಿ ಸಾರಿ.ಕಾಂ ಎಂಬ ವೆಬ್‌ಸೈಟಿನಲ್ಲಿ ಸೀರೆಯೊಂದನ್ನು ಆರ್ಡರ್ ಮಾಡಿದ್ದರು. ಅದರಂತೆ ಆಡರ್ ಮಾಡಿದ ಸೀರೆ ಮನೆಗೆ ತಲುಪಿದಾಗ ಪಾಕೇಟ್ ಬಿಚ್ಚಿ ನೋಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಸೀರೆಯ ಗುಣಮಟ್ಟ ಸರಿಯಿಲ್ಲದಿರುವುದರಿಂದ ಹಿಂದುಗಿಸಲು ನಿರ್ಧರಿಸಿ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖದೀಮರು ತಾವು ಹೇಳಿದಂತೆ ಮೊಬೈಲ್‌ನಲ್ಲಿ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ವಂಚನೆ ಗೊಳಗಾದ ಮಹಿಳೆ ಅವರು ಹೇಳಿದಂತೆ ಮತ್ತೊಂದು ತಮ್ಮ ಮೊಬೈಲ್‌ಗೆ ಬಂದ ಯುಪಿಐ ಲಿಂಕ್ ಹಾಗೂ ಓಟಿಪಿಯನ್ನು ಮತ್ತೊಂದು ಮೊಬೈಲ್ ನಂಬರ್‌ಗೆ ಕಳುಹಿಸಿದ್ದಾರೆ. 

ಅದನ್ನು ಬಳಸಿಕೊಂಡು ವೈದ್ಯೆಯ ಸಿಂಡಿಕೇಟ್ ಬ್ಯಾಂಕ್ ಖಾತೆಯಿಂದ ಒಟ್ಟು 45 ಸಾವಿರ ಹಣ ವರ್ಗಾಯಿಸಿಕೊಂ ಡಿದ್ದಾರೆ ಎಂದು ಸಿಇಎನ್ ಪೊಲೀಸ್ ದೂರು ದಾಖಲಿಸಲಾಗಿದೆ. 
 

click me!