ಸಚಿವರ ಕಾರ್ಯಾಲಯದ ಎದುರೇ ಶಿಥಿಲಾವಸ್ಥೆಗೆ ತಲುಪಿದ ತಾ.ಪಂ ಕಟ್ಟಡ !

By Ravi Janekal  |  First Published Dec 25, 2022, 2:55 PM IST
  • ಸಚಿವರ ಕಾರ್ಯಾಲಯದ ಎದುರೇ ಶಿಥಿಲಾವಸ್ತೆ ತಲುಪಿದ ತಾ.ಪಂ ಕಟ್ಟಡ 
  •  ಸಕ್ಕರೆ ಸಚಿವ ಮುನೇನಕೊಪ್ಪ ಅವರ ಕ್ಷೆತ್ರದಲ್ಲಿ ಅಧೋಗತಿಗೆ ತಲುಪಿದ ತಾ.ಪಂ ಕಟ್ಟಡ 
  •  ಅನಾಹುತಕ್ಕೆ ಯಾರು ಹೊಣೆ.?

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

 ಧಾರವಾಡ (ಡಿ.25) : ಹಳೆಯ ಕಟ್ಟಡದಲ್ಲಿ ದಿನನಿತ್ಯ ನೂರಾರು ಜನರ ಓಡಾಟ, ತಾಲೂಕಾ ಮಟ್ಟದ ಅಧಿಕಾರಿಗಳ ಒಡನಾಟ, ಹತ್ತಾರು ಸಿಬ್ಬಂದಿ ಕಾರ್ಯ ನಿರ್ವಹಿಸುವ ಸ್ಥಳ, ಇಂತಹ ಕಟ್ಟಡ ಈಗ ಶಿಥಿಲಾವಸ್ಥೆಗೆ ತಲುಪಿದೆ. ಇದು ದೊಡ್ಡ ಅವಘಡಕ್ಕೂ ಕಾರಣವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

Tap to resize

Latest Videos

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ತಾಲೂಕ ಪಂಚಾಯಿತ್ ಕಾರ್ಯಲಯದ ಕಟ್ಟಡ ನೆಲಮಹಡಿಯಿಂದ ಹಿಡಿದು ಮೆಲ್ಮಹಡಿ ಸಭಾಭವನ ಒಳಗಡೆ ಹೋಗುವರೆಗೂ ಮೇಲ್ಚಾವಣಿ ಸಿಮೆಂಟ್ ಕುಸಿದು ಬಿಳುವ ಆತಂಕವನ್ನು ಹೆಚ್ಚಿಸಿದೆ. ಯಾವಾಗ ಯಾರ ಮೇಲೆ ಬಿದ್ದು ಏನು ಅನಾಹುತ ಸಂಭವಿಸಬಹುದೊ ಎಂಬ ಆತಂಕ ಕಾಡುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸಂಘಟಿಸಿ, ಬಲಿಷ್ಠಗೊಳಿಸಿದ್ದು ಬಿಎಸ್‌ವೈ: ಶಂಕರ ಪಾಟೀಲ್‌ ಮುನೇನಕೊಪ್ಪ

ನವಲಗುಂದ ಕ್ಷೇತ್ರದ ಶಾಸಕ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಕಚೇರಿ ಆವರಣದಲ್ಲೇ ಇರುವ ಈ ಕಾರ್ಯಾಲಯದ ಬಗ್ಗೆ ಕಾಳಜಿ ವಹಿಸುವವರೇ ಇಲ್ಲದಂತಾಗಿದೆ. ತಾ.ಪಂ ಕಟ್ಟಡದ ಸಭಾ ಭವನದಲ್ಲಿ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಸಭೆ ಸೇರಿದಂತೆ ಅನೇಕ ಸಭೆಗಳು ಇಲ್ಲಿ ನಡೆಯುತ್ತವೆ. ಅಷ್ಟೇ ಅಲ್ಲದೇ ಸರ್ಕಾರಿ ಸಿಬ್ಬಂದಿ ವರ್ಗ ಇಲ್ಲೇ ಕರ್ತವ್ಯ ನಿರ್ವಹಿಸುತ್ತಾರೆ.

ಕೋಟಿ ಕೋಟಿ ಖರ್ಚು ಮಾಡಿ, ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದೆ ಕಟ್ಟಿದಂತಹ ಕಟ್ಟಡ ಈಗ ಅಸಮರ್ಪಕ ನಿರ್ವಹಣೆಯಿಂದ ಸೊರಗಿ ಹೋಗುತ್ತಿದೆ. ಕಟ್ಟಡದಲ್ಲಿ ಸಂಪೂರ್ಣ ಬಿರುಕುಗಳಿಂದ ಕೂಡಿದ್ದು, ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿದಿನಗಳು ಇಚ್ಛೆಟ್ಟುಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಕಬ್ಬು ಸಾಗಣೆ ವೆಚ್ಚ ಕಡಿತ ಪರಿಶೀಲನೆಗೆ ಸಮಿತಿ: ಸಚಿವ ಮುನೇನಕೊಪ್ಪ

ಇನ್ನು ಈ ಕುರಿತು ಅಧಿಕಾರಿಗಳನ್ನ ಕೇಳಿದರೆ ಯಾರೂ ಇದರ ಬಗ್ಗೆ ತಲೆ‌ ಕೆಡಸಿಕ್ಕೊಳ್ಳುತ್ತಿಲ್ಲ ಕಟ್ಡಡ ಯಾವಾಗ ಬಿಳುತ್ತೋ ಏನೋ. ಬಿದ್ದು ಅನಾಹುತ ಆದರೆ ಯಾರು ಹೊಣೆಯಾಗ್ತಾರೆ. ಅಪಾಯ ಆಗುವ ಮುನ್ನವೇ ಸಂಭಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕ್ಕೊಳ್ಳಬೇಕಿದೆ.

click me!