ಮಂಡ್ಯ: ಪತಿ ಗೆಲುವಿಗೆ ದೇವರ ಮೊರೆ ಹೋದ ಯೋಗೇಶ್ವರ್‌ ಪತ್ನಿ, ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಹೋಮ!

By Girish Goudar  |  First Published Nov 10, 2024, 2:10 PM IST

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಸಿ.ಪಿ. ಯೋಗೇಶ್ವರ್‌ ಅವರ ಪತ್ನಿ ಶೀಲಾ ಅವರು ವಿಶೇಷ ಹೋಮ ಮಾಡಿಸಿದ್ದಾರೆ. ಶ್ರೀಪಾದ್ ಆಚಾರ್ಯರವರ ನೇತೃತ್ವದಲ್ಲಿ ಹೋಮ ನಡೆಯುತ್ತಿದೆ. 


ಮಂಡ್ಯ(ನ.10):  ಪತಿ ಗೆಲುವಿಗೆ ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಅವರ ಪತ್ನಿ ಶೀಲಾ ದೇವರ ಮೊರೆ ಹೋಗಿದ್ದಾರೆ. ಹೌದು, ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಹೋಮ ಮಾಡಿಸುವ ಮೂಲಕ ಸಿಪಿವೈ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. 

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಸಿ.ಪಿ. ಯೋಗೇಶ್ವರ್‌ ಅವರ ಪತ್ನಿ ಶೀಲಾ ಅವರು ವಿಶೇಷ ಹೋಮ ಮಾಡಿಸಿದ್ದಾರೆ. ಶ್ರೀಪಾದ್ ಆಚಾರ್ಯರವರ ನೇತೃತ್ವದಲ್ಲಿ ಹೋಮ ನಡೆಯುತ್ತಿದೆ. 
ದೇವಸ್ಥಾನದಲ್ಲಿ ವಾಯುಸ್ಥಿತಿ ಪುನಃ ಚರಣ ವಿಶೇಷ ಹೋಮ ನಡೆಯುತ್ತಿದೆ. ಸಿ.ಪಿ. ಯೋಗೇಶ್ವರ್‌ ಇತ್ತಿಚೆಗಷ್ಟೆ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಂದು ಹರಕೆ ಕಟ್ಟಿಕೊಂಡು ವಿಶೇಷ ಪೂಜೆ ಸಲ್ಲಿಸಿ ಹೋಗಿದ್ದರು. ಯೋಗೇಶ್ವರ್ ಹೊಳೆ ಆಂಜನೇಯಸ್ವಾಮಿಗೆ ಒಂದು ಕಾಲು ರೂಪಾಯಿ ಹರಕೆ ಕಟ್ಟಿದ್ದರಂತೆ.  

Tap to resize

Latest Videos

undefined

ಕುಟುಂಬದ ಕುಡಿ ಪಟ್ಟಾಭಿಷೇಕಕ್ಕೆ ಕುಮಾರಸ್ವಾಮಿ ಹೋರಾಟ: ಯೋಗೇಶ್ವರ್‌

ಸಿ.ಪಿ. ಯೋಗೇಶ್ವರ್‌ ಚುನಾವಣೆಯಲ್ಲಿ‌ ಗೆಲ್ಲಲು ಹರಕೆ ಕಟ್ಟಿಕೊಂಡು‌ ಪ್ರಾರ್ಥನೆ ಮಾಡಿದ್ದರು. ಇದೀಗ ಪತಿ ಗೆಲುವಿಗಾಗಿ ಪತ್ನಿ ಶೀಲಾ ಅವರು ವಿಶೇಷ ಹೋಮ ಮಾಡಿಸಿದ್ದಾರೆ. ವಿಶೇಷ ಹೋಮದ ಮೂಲಕ ಪತಿ ಸಿಪಿವೈ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. 

click me!