ಮುಳಗುಂದ: ಪಶು ಆಸ್ಪತ್ರೆ ಸಿಬ್ಬಂದಿ ನಿಧನ, ಅಂತಿಮ ದರ್ಶನ ಪಡೆದ ಹಸು

By Kannadaprabha NewsFirst Published Sep 10, 2020, 12:33 PM IST
Highlights

ನಿವೃತ್ತ ಡಿ ದರ್ಜೆ ನೌಕರ ಸಾವು| ಮೃತರ ಅಂತಿಮ ದರ್ಶನ ಪಡೆದ ಆಕಳು| ಗದಗ ಜಿಲ್ಲೆ ಮುಳಗುಂದ ಪಟ್ಟಣದಲ್ಲಿ ನಡೆದ ಘಟನೆ|ಆಕಳು ಅಂತಿಮ ದರ್ಶನ ಪಡೆದಿದ್ದನ್ನು ನೋಡಿದ ಜನರ ಕಣ್ಣಾಲೆಗಳಲ್ಲಿ ನೀರು ತುಂಬಿದವು|
 
 

ಮುಳಗುಂದ(ಸೆ.10):  ಮಾಡಿದ ಉಪಕಾರವನ್ನು ಮರೆತು ಬೆನ್ನಿಗೆ ಚೂರಿ ಹಾಕುವ ಜನರ ನಡುವೆ, ಅನಾರೋಗ್ಯದ ಸಂದರ್ಭದಲ್ಲಿ ಪಶುಚಿಕಿತ್ಸಾಲಯದ ಕಂಪೌಂಡರ್ ತನಗೆ ಮಾಡಿದ ಆರೈಕೆಯನ್ನು ನೆನೆದು‌ ಆಕಳು ಮೃತ ವ್ಯಕ್ತಿಯ ಮನೆಯ ಬಾಗಿಲ ಮುಂದೆ ಬಂದು ಅಂತಿಮ ದರ್ಶನ ಪಡೆದು. ನೆರೆದ ಜನರಲ್ಲಿ ಹುಬ್ಬೇರಿಸುವಂತೆ ಮಾಡಿದೆ.

ಮುಳಗುಂದ ಪಟ್ಟಣದ ಯಲ್ಲಪ್ಪ ವೀರಭದ್ರಪ್ಪ ಗದುಗಿನ (61) ಮಂಗಳವಾರ ನಿಧನರಾಗಿದ್ದು, ಇವರು ಪಶುವೈದ್ಯ ಚಿಕಿತ್ಸಾಲಯದಲ್ಲಿ ಡಿ ದರ್ಜೆ ನೌಕರನಾಗಿ 23 ವರ್ಷಗಳ ಕಾಲ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ.ಎರಡು ತಿಂಗಳ ಹಿಂದೆ ನಿವೃತ್ತಿಯಾಗಿದ್ದರು. ಆದರೂ ದಿನನಿತ್ಯ ಆಸ್ಪತ್ರೆಗೆ ಹೋಗುವುದನ್ನು ಬಿಡಲಿಲ್ಲ.

ಗದಗ: ಕಾರ್‌ ಆಸೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ತಾಯಿ-ಮಗಳು..!

ಆಸ್ಪತ್ರೆಗೆ ಬರುತ್ತಿದ್ದ ರೈತರ ಜಾನುವಾರಗಳಿಗೆ ಕಾಳಜಿಯಿಂದ ಆರೈಕೆ ಮಾಡುವುದು, ಅವುಗಳ ಜೊತೆನೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು.  ಹಬ್ಬ ಹರಿದಿನ, ರವಿವಾರ ಎನ್ನದೆ ವರ್ಷದ 365 ದಿನವೂ ಜಾನುವಾರಗಳ ಸೇವೆ ಮಾಡುತ್ತಿದ್ದರು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಮೆಚ್ಚುಗೆಗ ಪಾತ್ರರಾಗಿದ್ದರು.  ಇವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಆಕಳು ಅಂತಿಮ ದರ್ಶನ ಪಡೆದಿದ್ದನ್ನು ನೋಡಿದ ಜನರ ಕಣ್ಣಾಲೆಗಳಲ್ಲಿ ನೀರು ತುಂಬಿದವು. 
 

click me!