ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

By Govindaraj SFirst Published Aug 15, 2024, 7:27 PM IST
Highlights

ಕಳೆದ ಒಂದು ತಿಂಗಳಿಂದ ಕೊಳ್ಳೇಗಾಲದ ಸತ್ತೇಗಾಲ ಭಾಗದಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಮೇವು ತಿನ್ನಲು ಹೋದ ಹಸುವನ್ನು ಚಿರತೆ ಬಲಿ ಪಡೆದಿದೆ.

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಆ.15): ರಾಜ್ಯದಲ್ಲಿ ಅತಿ ಹೆಚ್ಚು ಚಿರತೆ ಹೊಂದಿರುವ ಪ್ರದೇಶ ಅಂದ್ರೆ ಅದು ಚಾಮರಾಜನಗರ.ಈ ಚಿರತೆ ಹೆಚ್ಚಳ ರೈತರಲ್ಲಿ ಆತಂಕ ಮೂಡಿಸಿದೆ.ಮಾನವ ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗ್ತಿದೆ. ಕಳೆದ ಒಂದು ತಿಂಗಳಿಂದ ಕೊಳ್ಳೇಗಾಲದ ಸತ್ತೇಗಾಲ ಭಾಗದಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಮೇವು ತಿನ್ನಲು ಹೋದ ಹಸುವನ್ನು ಚಿರತೆ ಬಲಿ ಪಡೆದಿದೆ. ಹೊರ ಹೋಗಲೂ ಕೂಡ ಭಯದ ವಾತಾವರಣ ನಿರ್ಮಾಣ ಮಾಡಿದೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

Latest Videos

ಕೈಯಲ್ಲಿ ಬೆತ್ತ ಹಿಡಿದು ಚಿರತೆಯ ಮೇಲೆಯೇ ತಾನು attack ಮಾಡಿದ್ದನ್ನು ಹೇಳುತ್ತಿರೋ ವೃದ್ಧ......ಚಿರತೆ ದಾಳಿಯಿಂದ ತಂಗಿ ಹಸು ಮೃತಪಟ್ಟಿದ್ದಕ್ಕೆ ಮೇವನ್ನು ಬಿಟ್ಟ  ಗೋಮಾತೆ ಗಾಬರಿಯಿಂದ ನೋಡುತ್ತಿರುವ ಏರಿಯಾದ ಮಂದಿ. ಈ ಎಲ್ಲಾ ದೃಶ್ಯ ಕಣ್ಣಿಗೆ ಕಂಡಿದ್ದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೆಗಾಲದಲ್ಲಿ. ಹೌದು ಮತ್ತೆ ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷ ಮುಂದುವರೆದಿದೆ. ಕಳೆದ ಒಂದು ತಿಂಗಳಿನಿಂದ ಸತ್ಯಗಾಲ ಗ್ರಾಮದ ಹೊರ ವಲಯದಲ್ಲಿ ಚಿರತೆ ಹಾವಳಿ ಮಿತಿ ಮೀರಿ ಹೋಗಿದೆ. ಸತ್ತೆಗಾಲ ಗ್ರಾಮದ ವೃದ್ಧ ರೈತ  ನಂಜುಂಡಯ್ಯ ಹಸುಗಳನ್ನು ಮೇಯಿಸುವ ವೇಳೆ ಹಸುವೊಂದನ್ನು ಚಿರತೆ ಹಿಡಿದು ಅನತಿ ದೂರ ಎಳೆದೊಯ್ದಿದೆ. 

ಎಂ.ಬಿ.ಪಾಟೀಲ್‌ ಪುತ್ರ ತೆಗೆದ ವಿಶೇಷ ಚಿರತೆ ಚಿತ್ರ ವೈರಲ್‌, 'ಅಪರೂಪದ ಚಿರತೆ ಇದಲ್ಲ' ಎಂದ ಬಂಡಿಪುರ!

ಇತ್ತ ಹಸು ಕಾಣದಾದಾಗ ಹುಡುಕುತ್ತಾ ಹೋದ ರೈತ ನಂಜುಂಡಯ್ಯ ಭಯಾನಕ ದೃಶ್ಯ ಕಂಡುಬಂದಿದೆ. ಹಸುವಿನ ಕುತ್ತಿಗೆ ಕಚ್ಚಿ ರಕ್ತ ಹೀರುತ್ತಾ ಚಪ್ಪರಿಸುತ್ತಿದ್ದ ದೃಶ್ಯ ಕಂಡು  ನಂಜುಂಡಯ್ಯ ಹೌಹಾರಿದ್ದಾನೆ. ಸಾವರಿಸಿಕೊಂಡ ನಂಜುಂಡಯ್ಯ ತನ್ನ ಹಸುವನ್ನು ರಕ್ಷಿಸಲು ತನ್ನ ಪ್ರಾಣವನ್ನು ಲೆಕ್ಕಿಸದೆ  ಕೈಯಲ್ಲಿ ಹಿಡಿದಿದ್ದ ದೊಣ್ಣೆಯಿಂದ ಚಿರತೆ ತಲೆಗೆ ಬಲವಾಗಿ ಹೊಡೆದಿದ್ದಾನೆ.  ವೃದ್ದ ರೈತನ ಹೊಡೆತಕ್ಕೆ ಪತರಗುಟ್ಟಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಆದರೆ ಚಿರತೆ ದಾಳಿಗೆ ತುತ್ತಾಗಿದ್ದ ಹಸು ಸಾವನ್ನಪ್ಪಿದೆ.

ಕಳೆದ ಒಂದು ತಿಂಗಳಿನಿಂದ ಹೊಲ ಗದ್ದೆಗಳಲ್ಲಿ ಕೆರೆಗಳ ಆಸುಪಾಸು ಚಿರತೆ ಕಾಣಿಸಿ ಕೊಳ್ಳುತ್ತಿದೆ. ಈ ಹಿನ್ನಲೆ ಕತ್ತಲಾದ್ರೆ ಸಾಕು ಹೊಲ ಗದ್ದೆಗಳಿಗೆ ರೈತರು ಜಮೀನಿಗೆ ಹೋಗಲು ಭಯಭೀತರಾಗಿದ್ದಾರೆ. ಇನ್ನು ಬಹಿರ್ದೆಸೆಗೆ ತೆರಳು ಅಂಜುವಂತಾಗಿದೆ. ಶಾಲಾ ಕಾಲೇಜ್ ಗೆ ಹೋಗುವ ವಿದ್ಯಾರ್ಥಿಗಳು ಜೀವವನ್ನ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ಎದುರಾಗಿದ್ದು ಆದಷ್ಟು ಬೇಗ ಅರಣ್ಯ ಇಲಾಖಾ ಸಿಬ್ಬಂದಿ ಚಿರತೆಯನ್ನ ಸೆರೆ ಹಿಡಿದು ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕವನ್ನ ದೂರ ಮಾಡ್ಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

Chikkamagaluru: ಅಕ್ರಮ ಒತ್ತುವರಿ ಕಾಫಿನಾಡಿನಲ್ಲಿ 23 ಎಕರೆ ತೆರವು ಮಾಡಿದ ಅರಣ್ಯ ಇಲಾಖೆ!

ಒಟ್ನಲ್ಲಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿ ಜತೆ ಗಲಾಟೆ ಮಾಡಿದ ಬಳಿಕ ಈಗ ಜಮೀನಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನ್ ಇಟ್ಟಿದ್ದಾರೆ. ಈ ಹಿಂದೆಯೇ ಚಿರತೆ ಕಾಣಿಸಿಕೊಂಡಾಗ ಬೋನ್ ಇಟ್ಟಿದ್ದರೆ ಹಸು ಸಾವನ್ನಪ್ಪುತ್ತಿರಲಿಲ್ಲ ಎಂಬುದು ಗ್ರಾಮಸ್ಥರ ವಾದವಾಗಿದೆ. ಅದೇನೆ ಹೇಳಿ ಚಿರತೆ ಪದೇ ಪದೆ ದಾಳಿ ನಡೆಸುತ್ತಿರುವ ಪರಿಣಾಮ ಸತ್ತೇಗಾಲ ಗ್ರಾಮಸ್ಥರು ಬೆಚ್ಚಿ ಬಿದ್ದಿದು ಆದಷ್ಟು ಬೇಗ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವ ಕಾರ್ಯ ಮಾಡಬೇಕಿದೆ.

click me!