ಈಗಾಗಲೇ ಜಿಲ್ಲೆಯಲ್ಲಿ 3 ಹೊಟೇಲಿನ ಮಾಲೀಕರಿಗೆ, ಸಿಬ್ಬಂದಿಗೆ ಕೊರೋನಾ ಪತ್ತೆಯಾಗಿ ಅವುಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸಹಜವಾಗಿಯೇ ಹೊಟೇಲಿನಿಂದ ಸಾಕಷ್ಟುಮಂದಿ ಗ್ರಾಹಕರಿಗೆ ಸೋಂಕು ಹರಡುತ್ತದೆ. ಜಿಲ್ಲಾಡಳಿತ ಅವರನ್ನು ಪತ್ತೆ ಮಾಡಿ, ಅವರಿಂದ ಸಮಾಜದಲ್ಲಿ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಯಲು ಶತಪ್ರಯತ್ನ ಮಾಡುತ್ತಿದೆ. ಪರಿಣಾಮ ಸೋಮವಾರ ಹೊಟೇಲೊಂದರ 9 ಮಂದಿ ಗ್ರಾಹಕರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಉಡುಪಿ(ಜು.07): ಈಗಾಗಲೇ ಜಿಲ್ಲೆಯಲ್ಲಿ 3 ಹೊಟೇಲಿನ ಮಾಲೀಕರಿಗೆ, ಸಿಬ್ಬಂದಿಗೆ ಕೊರೋನಾ ಪತ್ತೆಯಾಗಿ ಅವುಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸಹಜವಾಗಿಯೇ ಹೊಟೇಲಿನಿಂದ ಸಾಕಷ್ಟುಮಂದಿ ಗ್ರಾಹಕರಿಗೆ ಸೋಂಕು ಹರಡುತ್ತದೆ. ಜಿಲ್ಲಾಡಳಿತ ಅವರನ್ನು ಪತ್ತೆ ಮಾಡಿ, ಅವರಿಂದ ಸಮಾಜದಲ್ಲಿ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಯಲು ಶತಪ್ರಯತ್ನ ಮಾಡುತ್ತಿದೆ. ಪರಿಣಾಮ ಸೋಮವಾರ ಹೊಟೇಲೊಂದರ 9 ಮಂದಿ ಗ್ರಾಹಕರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜೊತೆಗೆ ದಿನಸಿ ಅಂಗಡಿ ಮಾಲೀಕರಿಂದಲೂ ಸೋಂಕು ಹರಡಿದೆ.
ಸೋಮವಾರ ಜಿಲ್ಲೆಯ 40 ಮಂದಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಇದೀಗ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,362ಕ್ಕೇರಿದೆ. ಅವರಲ್ಲಿ 21 ಪುರುಷರು, 15 ಮಹಿಳೆಯರು ಮತ್ತು 4 ಮಂದಿ ಮಕ್ಕಳಿದ್ದಾರೆ. ಅಲ್ಲದೆ 6 ಮಂದಿ ಮಹಾರಾಷ್ಟ್ರ, ಇಬ್ಬರು ಬೆಂಗಳೂರು, ಒಬ್ಬರು ತೆಲಂಗಾಣದಿಂದ ಬಂದವರು ಬಿಟ್ಟರೆ ಉಳಿದವರೆಲ್ಲರೂ ಸ್ಥಳೀಯ ಸೋಂಕು ಸಂಪರ್ಕಿತರೇ ಆಗಿದ್ದಾರೆ.
ತುಕ್ಕು ಹಿಡೀತಿವೆ ಮಂಗ್ಳೂರು ಖಾಸಗಿ ಬಸ್‌ಗಳು!
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,154 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3 ಮಂದಿ ಮೃತಪಟ್ಟಿದ್ದಾರೆ. 205 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1126 ಹೋಮ್ ಕ್ವಾರಂಟೈನ್ ಮತ್ತು 122 ಮಂದಿ ಐಸೋಲೇಶನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ.
ಶಂಕಿತರ ಸಂಖ್ಯೆ ಭರ್ಜರಿ: ಸೋಮವಾರ ಮತ್ತೆ ಭರ್ಜರಿ ಸಂಖ್ಯೆಯಲ್ಲಿ ಸೋಂಕು ಶಂಕಿತರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಸಹಜವಾಗಿಯೇ ಈ ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗುವ ಸಾಧ್ಯತೆ ಇದೆ. ಜಿಲ್ಲೆಯಿಂದ 718 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳಹಿಸಲಾಗಿದೆ. ಅವರಲ್ಲಿ 603 ಮಂದಿ ಮುಂಬೈ, ಬೆಂಗಳೂರು ಮತ್ತು ಇತರ ಹಾಟ್ ಸ್ಪಾಟ್‌ಗಳಿಂದ ಬಂದವರೇ ಆಗಿದ್ದಾರೆ. 65 ಮಂದಿ ಕೊರೋನಾ ಲಕ್ಷಣಗಳಿದ್ದರೆ, 40 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದವರಾಗಿದ್ದಾರೆ. 7 ಮಂದಿ ಶೀತಜ್ವರ ಮತ್ತು 3 ಮಂದಿ ಉಸಿರಾಟದ ತೊಂದರೆಯವರ ಮಾದರಿಗಳನ್ನೂ ಕಳುಹಿಸಲಾಗಿದೆ.
ಮಾಜಿ ಕೇಂದ್ರ ಸಚಿವರಿಗೂ ತಗುಲಿದ ಕೊರೋನಾ: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು
ಸೋಮವಾರ 506 ಮಂದಿಯ ಪರೀಕ್ಷೆಯ ವರದಿ ಬಂದಿದ್ದು, ಅವುಗಳಲ್ಲಿ 40 ಪಾಸಿಟಿವ್ ಮತ್ತು 466 ನೆಗೆಟಿವ್ ಆಗಿವೆ. ಇನ್ನೂ 1,640 ವರದಿಗಳು ಬರುವುದಕ್ಕೆ ಬಾಕಿ ಇವೆ.
ಮತ್ತೆ 3 ಚಾಲಕರಿಗೆ ಸೋಂಕು
ಕಳೆದ ವಾರ ಕುಂದಾಪುರ - ಬೆಂಗಳೂರು ನಡುವೆ ಓಡಾಡುವ ಸರ್ಕಾರಿ ಬಸ್ಸಿನ 2 ಚಾಲಕರಿಗೆ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ 600 ಮಂದಿ ಚಾಲಕರು ಪರೀಕ್ಷೆಗೊಳಗಾಗುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಅದರಂತೆ ಸೋಮವಾರ ಮತ್ತೆ 3 ಮಂದಿ ಚಾಲಕರಿಗೆ ಸೋಂಕು ಪತ್ತೆಯಾಗಿದೆ.