ದ.ಕ.ದಲ್ಲಿ ಕೋವಿಡ್‌ ಟೆಸ್ಟ್‌ ಇನ್ನೂ ಸುಲಭ! ಕೋವಿಡ್‌ ರ‍್ಯಾಪಿಡ್‌ ಟೆಸ್ಟಿಂಗ್‌ ಕಾರ್ಯಾರಂಭ

By Kannadaprabha NewsFirst Published Jul 15, 2020, 12:09 PM IST
Highlights

ಕೋವಿಡ್‌ ಟೆಸ್ಟ್‌ ಫಲಿತಾಂಶ ಶೀಘ್ರ ಪಡೆಯುವ ನಿಟ್ಟಿನಲ್ಲಿ ದೇಶದ ವಿವಿಧೆಡೆ ನಡೆಸುತ್ತಿರುವ ಆ್ಯಂಟಿಜನ್‌ ಟೆಸ್ಟ್‌ (ಕೋವಿಡ್‌ ರಾರ‍ಯಪಿಡ್‌ ಟೆಸ್ಟಿಂಗ್‌) ಮಂಗಳೂರಿನಲ್ಲೂ ಮಂಗಳವಾರದಿಂದ ಕಾರ್ಯಾರಂಭಿಸಿದೆ. ಇದರಿಂದಾಗಿ ಕೋವಿಡ್‌ ಪ್ರಕರಣಗಳ ಸುಲಭ ಪತ್ತೆ ಇನ್ನು ಸಾಧ್ಯವಾಗಲಿದೆ.

ಮಂಗಳೂರು(ಜು.15): ಕೋವಿಡ್‌ ಟೆಸ್ಟ್‌ ಫಲಿತಾಂಶ ಶೀಘ್ರ ಪಡೆಯುವ ನಿಟ್ಟಿನಲ್ಲಿ ದೇಶದ ವಿವಿಧೆಡೆ ನಡೆಸುತ್ತಿರುವ ಆ್ಯಂಟಿಜನ್‌ ಟೆಸ್ಟ್‌ (ಕೋವಿಡ್‌ ರಾರ‍ಯಪಿಡ್‌ ಟೆಸ್ಟಿಂಗ್‌) ಮಂಗಳೂರಿನಲ್ಲೂ ಮಂಗಳವಾರದಿಂದ ಕಾರ್ಯಾರಂಭಿಸಿದೆ. ಇದರಿಂದಾಗಿ ಕೋವಿಡ್‌ ಪ್ರಕರಣಗಳ ಸುಲಭ ಪತ್ತೆ ಇನ್ನು ಸಾಧ್ಯವಾಗಲಿದೆ.

ಜಿಲ್ಲೆಗೆ ಈಗಾಗಲೇ ಸುಮಾರು 3,500ರಷ್ಟುಆ್ಯಂಟಿಜನ್‌ ಕೋವಿಡ್‌ ಟೆಸ್ಟ್‌ ಕಿಟ್‌ಗಳು ಬಂದಿವೆ. ಈ ಟೆಸ್ಟ್‌ ಕೂಡ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲೇ ನಡೆಯುತ್ತಿದೆ. ಪ್ರಸಕ್ತ ಒಂದು ಶಿಫ್ಟ್‌ನಲ್ಲಿ ಮಾತ್ರ ಈ ಟೆಸ್ಟ್‌ ನಡೆಸಲಾಗುತ್ತದೆ.

ಒಂದಲ್ಲ ಎರಡಲ್ಲ 163 ಬಾರಿ ಕ್ವಾರಂಟೈನ್ ಉಲ್ಲಂಘಿಸಿದ..!

ಕೋವಿಡ್‌ ಲ್ಯಾಬ್‌ಗಳಲ್ಲಿ ನಡೆಸಲಾಗುವ ಟೆಸ್ಟ್‌ನಲ್ಲಿ ವರದಿ ಸಿಗಲು ಕನಿಷ್ಠ ಎರಡು ದಿನ ಬೇಕಾಗಿದ್ದು, ಆ್ಯಂಟಿಜನ್‌ ಟೆಸ್ಟ್‌ನಲ್ಲಿ 15ರಿಂದ 20 ನಿಮಿಷದಲ್ಲಿ ವರದಿ ಕೈ ಸೇರಲಿದೆ. ಆದರೆ ಎಲ್ಲರಿಗೂ ಈ ಟೆಸ್ಟ್‌ ಮಾಡಲಾಗುವುದಿಲ್ಲ. ಬದಲಾಗಿ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿರುವ ವಿದೇಶದಿಂದ ಬಂದವರಿಗೆ, ಆಸ್ಪತ್ರೆಗಳಲ್ಲಿ ಐಸಿಯು ಅಥವಾ ತುರ್ತು ಆಪರೇಷನ್‌ಗೆ ಒಳಗಾಗಬೇಕಾದವರಿಗೆ ಮೊದಲ ಆದ್ಯತೆ ಸಿಗಲಿದೆ ಎನ್ನುತ್ತಾರೆ ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ.ರತ್ನಾಕರ್‌.

ಪ್ರಸಕ್ತ ದ.ಕ.ಜಿಲ್ಲೆಯಲ್ಲಿ ಮಂಗಳೂರಿನ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಮೂರು ಶಿಫ್ಟ್‌ನಲ್ಲಿ ಹಾಗೂ ಖಾಸಗಿ ಆಸ್ಪತ್ರೆ ಪೈಕಿ ಕೆಎಂಸಿ, ಯೋನೆಪೋಯ ಹಾಗೂ ದೇರಳಕಟ್ಟೆಕ್ಷೇಮ ಆಸ್ಪತ್ರೆಯಲ್ಲಿ ಕೋವಿಡ್‌ ಲ್ಯಾಬ್‌ ಪರೀಕ್ಷೆ ನಡೆಸಲಾಗುತ್ತಿದೆ.

ಕೋವಿಡ್‌ ರಾರ‍ಯಪಿಡ್‌ ಟೆಸ್ಟ್‌ ಹೇಗೆ?

ಕೋವಿಡ್‌ ಆ್ಯಂಟಿಜನ್‌ ಟೆಸ್ಟ್‌ಗೆ ವೈದ್ಯರು ಗಂಟಲ ದ್ರವವನ್ನು ತೆಗೆದು, ಕಿಟ್‌ನಲ್ಲಿರುವ ದ್ರಾವಣದಲ್ಲಿ ಹಾಕುತ್ತಾರೆ. ಗಂಟಲ ದ್ರವದಲ್ಲಿ ಕೊರೋನಾ ವೈರಸ್‌ ಇದ್ದರೆ ಇದರಿಂದ ಅದು ಶಕ್ತಿ ಹೀನವಾಗುತ್ತದೆ. ಬಳಿಕ ಟೆಸ್ಟ್‌ ಮಾಡಲು ಇರುವ ಸ್ಟ್ರಿಪ್‌ಗೆ ದ್ರಾವಣದ ಕೆಲವು ಹನಿಗಳನ್ನು ಹಾಕಲಾಗುತ್ತದೆ. ಈ ಸ್ಟ್ರಿಪ್‌ನಲ್ಲಿ ಕೃತಕ ಆ್ಯಂಟಿಬಾಡಿ ಅಂಶಗಳಿದ್ದು, ಕೊರೋನಾ ಪಾಸಿಟಿವ್‌ ಎಂದಾದರೆ ಹದಿನೈದು ನಿಮಿಷದಲ್ಲಿ ಕಿಟ್‌ನಲ್ಲಿ ಕೆಂಪು ಬಣ್ಣದಲ್ಲಿ ಗೆರೆಗಳು ಕಾಣಿಸಿಕೊಳ್ಳುತ್ತವೆ. ಗೆರೆಗಳು ಬಾರದಿದ್ದರೆ ನೆಗೆಟಿವ್‌ ಎಂದು ಅರ್ಥ. ಇದರಲ್ಲಿ ಪಾಸಿಟಿವ್‌ ಬಂದರೆ ಪಾಸಿಟಿವ್‌ ಎಂದೇ ಪರಿಗಣಿಸಲಾಗುತ್ತದೆ. ಸೋಂಕಿನ ಲಕ್ಷಣ ಇರುವವರಲ್ಲಿ ನೆಗೆಟಿವ್‌ ಬಂದರೆ ಮತ್ತೆ ವೈರಾಣು ಪ್ರಯೋಗಾಲಯದಲ್ಲಿ ಪರೀಕ್ಷೆ(ಲ್ಯಾಬ್‌ ಟೆಸ್ಟ್‌) ನಡೆಸಬೇಕಾಗುತ್ತದೆ.

ತಾಯಿ ಮೃತಪಟ್ಟರೂ SSLC ಮೌಲ್ಯ ಮಾಪನಕ್ಕೆ ಬಂದ ಶಿಕ್ಷಕಿ: ಸಚಿವರ ಪ್ರಶಂಸೆ

ಆ್ಯಂಟಿಜನ್‌ ಕೋವಿಡ್‌ ಟೆಸ್ಟ್‌ನಲ್ಲಿ ತ್ವರಿತವಾಗಿ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಿದೆ. ಪ್ರಸ್ತುತ ಆದ್ಯತೆ ಮೇರೆಗೆ ಕೋವಿಡ್‌ ಸ್ವಾಬ್‌ ಟೆಸ್ಟ್‌ ನಡೆಸಲಾಗುತ್ತಿದೆ. ಮುಂದೆ ಎಲ್ಲರಿಗೂ ಟೆಸ್ಟ್‌ಗೆ ಇದು ತೆರೆದುಕೊಳ್ಳಲಿದೆ ಎಂದು ದ.ಕ. ಪ್ರಭಾರ ಆರೋಗ್ಯಾಧಿಕಾರಿ ಡಾ. ರತ್ನಾಕರ್‌ ತಿಳಿಸಿದ್ದಾರೆ.

click me!