ಒಂದಲ್ಲ ಎರಡಲ್ಲ 163 ಬಾರಿ ಕ್ವಾರಂಟೈನ್ ಉಲ್ಲಂಘಿಸಿದ..!

By Suvarna NewsFirst Published Jul 15, 2020, 11:18 AM IST
Highlights

ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ವಿದೇಶದಿಂದ, ಹೊರ ರಾಜ್ಯದಿಂದ ಬಂದವರಿಗೆ ಕ್ವಾರೆಂಟೈನ್‌ಗೆ ನಿಯಮಗಳನ್ನು ವಿಧಿಸಲಾಗಿದೆ. ಉಲ್ಲಂಘಿಸಿದರೆ ಶಿಕ್ಷೆಯೂ ಇದೆ. ಆದರೆ ಉಡುಪಿಯಲ್ಲೊಬ್ಬ ಒಂದಲ್ಲ, ಎರಡಲ್ಲ ಬರೋಬ್ಬರಿ 163 ಸಲ ಕ್ವಾರೆಂಟೈನ್ ಉಲ್ಲಂಘಿಸಿದ್ದಾನೆ.

ಉಡುಪಿ(ಜು.15):  ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ವಿದೇಶದಿಂದ, ಹೊರ ರಾಜ್ಯದಿಂದ ಬಂದವರಿಗೆ ಕ್ವಾರೆಂಟೈನ್‌ಗೆ ನಿಯಮಗಳನ್ನು ವಿಧಿಸಲಾಗಿದೆ. ಉಲ್ಲಂಘಿಸಿದರೆ ಶಿಕ್ಷೆಯೂ ಇದೆ. ಆದರೆ ಉಡುಪಿಯಲ್ಲೊಬ್ಬ ಒಂದಲ್ಲ, ಎರಡಲ್ಲ ಬರೋಬ್ಬರಿ 163 ಸಲ ಕ್ವಾರೆಂಟೈನ್ ಉಲ್ಲಂಘಿಸಿದ್ದಾನೆ.

ಒಂದಲ್ಲ ಎರಡಲ್ಲ 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿ ಸದ್ಯ ಸುದ್ದಿಯಾಗಿದ್ದಾನೆ. ಕ್ವಾರೆಂಟೈನ್ ನಿಯಮ‌ ಉಲ್ಲಂಘಿಸಿದವನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ತಾಯಿ ಮೃತಪಟ್ಟರೂ SSLC ಮೌಲ್ಯ ಮಾಪನಕ್ಕೆ ಬಂದ ಶಿಕ್ಷಕಿ: ಸಚಿವರ ಪ್ರಶಂಸೆ

ಕುಂದಾಪುರದಲ್ಲಿ ಹೋಂ ಕ್ವಾರಂಟೈನ್ ಇದ್ದ ವ್ಯಕ್ತಿ ಮುಂಬಯಿನಿಂದ ಕೋಟೇಶ್ವರಕ್ಕೆ ಬಂದಿದ್ದ ಸಹಬ್‌ ಸಿಂಗ್‌ ಆರೋಪಿ. ನಿಯಮ ಉಲ್ಲಂಘಿಸಿ, ಹೊರಗಡೆ ತಿರುಗಾಡುತ್ತಿದ್ದ ವ್ಯಕ್ತಿ ವಿರುದ್ಧ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರದಲ್ಲಿ ಗ್ಲಾಸ್‌ ಮತ್ತು ಫ್ಲೈ ವುಡ್‌ ವ್ಯವಹಾರ ನಡೆಸುತ್ತಿದ್ದ ಆತ ಜೂ. 29 ರಂದು ಕೋಟೇಶ್ವರ ಬೈಪಾಸ್‌ ಬಳಿಯ ಬಾಡಿಗೆ ಮನೆಗೆ ಬಂದಿದ್ದ. ಜು.13 ರವರೆಗೆ ಹೋಂ ಕ್ವಾರಂಟೈನ್‌ ನೀಡಲಾಗಿತ್ತು.

'ಪರೀಕ್ಷೆ ಹೇಗಾಯ್ತು..? ಫೋನಲ್ಲೇ ಪಾಯಸ ಕಳಿಸಲಾ..'? ವಿದ್ಯಾರ್ಥಿನಿಗೆ ಸಚಿವರ ಕಾಲ್

ಈ ಅವಧಿಯಲ್ಲಿ ನಿಯಮ ಉಲ್ಲಂಘಿಸಿ, ಉಡುಪಿಯ ಹೋಟೆಲ್‌ಗ‌ಳಿಗೆ ತಿರುಗಾಡುತ್ತಿದ್ದ. ಒಟ್ಟು 163 ಬಾರಿ ಹೊರಗೆ ಬಂದ ಬಗ್ಗೆ ಮೊಬೈಲ್ ಜಿಪಿಎಸ್‌ ಟ್ರ್ಯಾಕರ್‌ನಿಂದ ಮಾಹಿತಿ ಲಭಿಸಿದೆ. ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿ ಎನ್‌.ಜಿ. ಭಟ್‌ ದೂರು ನೀಡಿದ್ದು, ಸಹಬ್‌ ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ 269, 270 ರಡಿ ಪ್ರಕರಣ ದಾಖಲಾಗಿದೆ.

click me!