ಚಿಕಿತ್ಸೆಗಾಗಿ ಸೋಂಕಿತ ಮಹಿಳೆ ಅಲೆದಾಟ

Kannadaprabha News   | Asianet News
Published : Jul 30, 2020, 08:42 AM IST
ಚಿಕಿತ್ಸೆಗಾಗಿ ಸೋಂಕಿತ ಮಹಿಳೆ ಅಲೆದಾಟ

ಸಾರಾಂಶ

ಕೊರೋನಾ ಸೋಂಕು ದೃಢಪಟ್ಟಿದ್ದ 52 ವರ್ಷದ ಮಹಿಳೆಗೆ ತಕ್ಷಣ ಆಸ್ಪತ್ರೆಗೆ ದಾಖಲು ಆಗಬೇಕೆಂದು ಕರೆಸಿಕೊಂಡು ಬಳಿಕ ಹಾಸಿಗೆ, ವೆಂಟಿಲೇಟರ್‌ ಕೊರತೆ ನೆಪವೊಡ್ಡಿ ಚಿಕಿತ್ಸೆ ನೀಡದೆ ಅಲೆದಾಡಿಸಿರುವ ಘಟನೆ ನಡೆದಿದೆ. ರಾಜಾಜಿನಗರದ 52 ವರ್ಷದ ಮಹಿಳೆಗೆ ಕಳೆದ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.

ಬೆಂಗಳೂರು(ಜು.30): ಕೊರೋನಾ ಸೋಂಕು ದೃಢಪಟ್ಟಿದ್ದ 52 ವರ್ಷದ ಮಹಿಳೆಗೆ ತಕ್ಷಣ ಆಸ್ಪತ್ರೆಗೆ ದಾಖಲು ಆಗಬೇಕೆಂದು ಕರೆಸಿಕೊಂಡು ಬಳಿಕ ಹಾಸಿಗೆ, ವೆಂಟಿಲೇಟರ್‌ ಕೊರತೆ ನೆಪವೊಡ್ಡಿ ಚಿಕಿತ್ಸೆ ನೀಡದೆ ಅಲೆದಾಡಿಸಿರುವ ಘಟನೆ ನಡೆದಿದೆ. ರಾಜಾಜಿನಗರದ 52 ವರ್ಷದ ಮಹಿಳೆಗೆ ಕಳೆದ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.

ತಕ್ಷಣ ಮಲ್ಲೇಶ್ವರದ ವೇಗಾಸ್‌ ಆಸ್ಪತ್ರೆಗೆ ದಾಖಲಿಸಿ, ಕೊರೋನಾ ಪರೀಕ್ಷೆಗೆ ಸ್ವಾಬ್‌ ಕಳುಹಿಸಲಾಗಿತ್ತು. ಮಂಗಳವಾರ ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿ ಕರೆ ಮಾಡಿ ಕೊರೋನಾ ಇರುವುದನ್ನು ದೃಢಪಡಿಸಿದ್ದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದೇ ದಿನ 7 ಮಂದಿ ಕೊರೋನಾ ಸೋಂಕಿತರು ಸಾವು

ಜತೆಗೆ ಜಯನಗರದ ಜನರಲ್‌ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇದ್ದು, ತಕ್ಷಣ ದಾಖಲಾಗುವಂತೆ ನಿರ್ದೇಶಿಸಿದ್ದರು. ಆದರೆ, ಜಯನಗರ ಆಸ್ಪತ್ರೆಗೆ ತೆರಳಿದಾಗ ಆಸ್ಪತ್ರೆಯಲ್ಲಿ ಬೆಡ್‌ ಇಲ್ಲವೆಂದು ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ. ಕೊನೆಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ಗೆ ಮಾಹಿತಿ ನೀಡಿದೆವು. ಕೊನೆಗೆ ಅವರ ಸೂಚನೆ ಮೇರೆಗೆ ಮಾರ್ಥಾಸ್‌ನಲ್ಲಿ ಹಾಸಿಗೆ ನೀಡಿದರು ಎಂದು ಸೋಂಕಿತರ ಸಂಬಂಧಿ ತಿಳಿಸಿದ್ದಾರೆ.

177 ವಾರ್ಡ್‌ಗಳಲ್ಲಿ 100ಕ್ಕೂ ಅಧಿಕ ಕೇಸ್‌

ನಗರದ 198 ವಾರ್ಡ್‌ ಪೈಕಿ 177 ವಾರ್ಡ್‌ನಲಿ ್ಲ100 ಅಧಿಕ ಸೋಂಕು ಪ್ರಕರಣಪತ್ತೆಯಾಗಿವೆ. ಉಳಿದಂತೆ ಏಳು ವಾರ್ಡ್‌ನಲ್ಲಿ 81 ರಿಂದ ನೂರು ಪ್ರಕರಣ, 10 ವಾರ್ಡ್‌ ನಲ್ಲಿ 61ರಿಂದ 80 ಪ್ರಕರಣ ಹಾಗೂ 4 ವಾರ್ಡ್‌ನಲ್ಲಿ 41 ರಿಂದ 60 ಪ್ರಕರಣ ಪತ್ತೆಯಾಗಿವೆ.

ಬೆಂಗಳೂರಿಗೆ 1 ಲಕ್ಷ ರ‍್ಯಾಪಿಡ್ ಆ್ಯಂಟಿಜೆನ್‌ ಕಿಟ್‌

ಉಳಿದಂತೆ ಕಳೆದ 24 ಗಂಟೆಯಲ್ಲಿ (ಬುಧವಾರ) 46 ವಾರ್ಡ್‌ನಲ್ಲಿ ಹತ್ತಕ್ಕಿಂತ ಹೆಚ್ಚು ಪ್ರಕರಣ, 28 ವಾರ್ಡ್‌ನಲ್ಲಿ 9ರಿಂದ 10, 38 ವಾರ್ಡ್‌ನಲ್ಲಿ 7 ರಿಂದ 8, 35 ವಾರ್ಡ್‌ನಲ್ಲಿ 5 ರಿಂದ 6, 30 ವಾರ್ಡ್‌ನಲ್ಲಿ 3ರಿಂದ 4, 17 ವಾರ್ಡ್‌ನಲ್ಲಿ 1ರಿಂದ 2 ಪ್ರಕರಣ ಪತ್ತೆಯಾಗಿದ್ದು, ನಾಲ್ಕು ವಾರ್ಡ್‌ನಲ್ಲಿ ಮಾತ್ರ ಯಾವುದೇ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ನಗರದಲ್ಲಿ ಒಟ್ಟು ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 19,001 ಕ್ಕೆ ಏರಿಕೆಯಾಗಿದೆ. 14,143 ಕಂಟೈನ್ಮೆಂಟ್‌ ವಲಯ ಸಕ್ರಿಯವಾಗಿವೆ. ಇದರಲ್ಲಿ 4858 ಪ್ರದೇಶಗಳು ಈವರೆಗೆ ಕಂಟೈನ್ಮೆಂಟ್‌ ಮುಕ್ತವಾಗಿವೆ ಎಂದು ಬಿಬಿಎಂಪಿ ತಿಳಿಸಿದೆ.

PREV
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?