ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದೇ ದಿನ 7 ಮಂದಿ ಕೊರೋನಾ ಸೋಂಕಿತರು ಸಾವು

Kannadaprabha News   | Asianet News
Published : Jul 30, 2020, 08:10 AM IST
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದೇ ದಿನ 7 ಮಂದಿ ಕೊರೋನಾ ಸೋಂಕಿತರು ಸಾವು

ಸಾರಾಂಶ

ಕೊರೋನಾ ವಾರಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆ ಮಹಿಳಾ ಸಿಬ್ಬಂದಿ ಕೊರೋನಾಗೆ ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಮಾಸ್ಟರ್‌ ಪ್ಲಾನ್‌ ಬಿಲ್ಡಿಂಗ್‌ ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ಮಂಗಳವಾರ ಒಂದೇ ದಿನ ವಿಕ್ಟೋರಿಯಾದಲ್ಲಿ ಏಳು ಮಂದಿ ಸೋಂಕಿನಿಂದ ಮರಣ ಹೊಂದಿದಂತೆ ಆಗಿದೆ.

ಬೆಂಗಳೂರು(ಜು.30): ಕೊರೋನಾ ವಾರಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆ ಮಹಿಳಾ ಸಿಬ್ಬಂದಿ ಕೊರೋನಾಗೆ ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಮಾಸ್ಟರ್‌ ಪ್ಲಾನ್‌ ಬಿಲ್ಡಿಂಗ್‌ ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ಮಂಗಳವಾರ ಒಂದೇ ದಿನ ವಿಕ್ಟೋರಿಯಾದಲ್ಲಿ ಏಳು ಮಂದಿ ಸೋಂಕಿನಿಂದ ಮರಣ ಹೊಂದಿದಂತೆ ಆಗಿದೆ.

ಬಿಬಿಎಂಪಿ-ಸುಗುಣ ಆಸ್ಪತ್ರೆ ಎಡವಟ್ಟಿಗೆ ಮಗು ಪರದಾಟ

ಅಪೆಂಡಿಕ್ಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ಮಗುವಿನ ಕೋವಿಡ್‌ ಪರೀಕ್ಷೆಯಲ್ಲಿ ಖಾಸಗಿ ಆಸ್ಪತ್ರೆ ಪಾಸಿಟಿವ್‌ ವರದಿ ನೀಡಿದರೆ, ಬಿಬಿಎಂಪಿ ನೆಗೆಟಿವ್‌ ವರದಿ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರಿಗೆ 1 ಲಕ್ಷ ರ‍್ಯಾಪಿಡ್ ಆ್ಯಂಟಿಜೆನ್‌ ಕಿಟ್‌

ಅಪೆಂಡಿಕ್ಸ್‌ನಿಂದ ಬಳಲುತ್ತಿದ್ದ ಮಗುವನ್ನು ಚಿಕಿತ್ಸೆಗಾಗಿ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು.21ರಂದು ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಹೀಗಾಗಿ ಮಗುವಿಗೆ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಸ್ವಾಬ್‌ ಟೆಸ್ಟ್‌ ಮಾಡಿಸಲಾಗಿತ್ತು. ಪರೀಕ್ಷೆ ನಂತರ ಬಂದ ವರದಿಯಲ್ಲಿ ಪಾಸಿಟಿವ್‌ ದೃಢಪಟ್ಟಿತ್ತು.

ಹಾಸಿಗೆಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳನ್ನೇ ಕಾಯಿಸಿದ ಆಸ್ಪತ್ರೆ

ಇದರಿಂದ ಭಯಗೊಂಡ ಪೋಷಕರು ಬೇರೊಂದು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದರು. ಆಗ ನೆಗೆಟಿವ್‌ ಬಂದಿತ್ತು. ಬಳಿಕ ಬಿಬಿಎಂಪಿ ರಾರ‍ಯಪಿಡ್‌ ಪರೀಕ್ಷೆಯಲ್ಲಿ ಮಗುವಿಗೆ ನೆಗೆಟಿವ್‌ ವರದಿ ಬಂದಿದೆ. ಈ ಎರಡೂ ವರದಿಗಳನ್ನು ತೆಗೆದುಕೊಂಡು ಮಾರ್ಥಾಸ್‌ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ವರದಿ ನೋಡಿದ ವೈದ್ಯರು ಗೊಂದಲಕ್ಕೆ ಒಳಗಾಗಿ, ಶಸ್ತ್ರಚಿಕಿತ್ಸೆಯನ್ನೇ ಮುಂದೂಡಿದ್ದಾರೆ.

PREV
click me!

Recommended Stories

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು
Online Engagement: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ