ಬೆಂಗಳೂರಿಗೆ 1 ಲಕ್ಷ ರ‍್ಯಾಪಿಡ್ ಆ್ಯಂಟಿಜೆನ್‌ ಕಿಟ್‌

Kannadaprabha News   | Asianet News
Published : Jul 30, 2020, 07:54 AM ISTUpdated : Jul 30, 2020, 12:14 PM IST
ಬೆಂಗಳೂರಿಗೆ 1 ಲಕ್ಷ ರ‍್ಯಾಪಿಡ್ ಆ್ಯಂಟಿಜೆನ್‌ ಕಿಟ್‌

ಸಾರಾಂಶ

ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಸರ್ಕಾರ ಒಂದು ಲಕ್ಷ ರ‍್ಯಾಪಿಡ್‌ ಆ್ಯಂಟಿಜೆನ್‌ ಟಿಸ್ಟ್‌ ಕಿಟ್‌ ನೀಡಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಬೆಂಗಳೂರು(ಜು.30): ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಸರ್ಕಾರ ಒಂದು ಲಕ್ಷ ರ‍್ಯಾಪಿಡ್ ಆ್ಯಂಟಿಜೆನ್‌ ಟಿಸ್ಟ್‌ ಕಿಟ್‌ ನೀಡಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ತ್ವರಿತವಾಗಿ ಸೋಂಕು ಪರೀಕ್ಷೆ ನಡೆಸಲು 50 ಸಾವಿರ ಆ್ಯಂಟಿಜೆನ್‌ ಕಿಟ್‌ ನೀಡಲಾಗಿತ್ತು. ಮತ್ತೆ ಈಗ 1 ಲಕ್ಷ ಕಿಟ್‌ ನೀಡಿದೆ. ಹೀಗಾಗಿ, ನಗರದಲ್ಲಿ ಸೋಂಕು ಪರೀಕ್ಷೆ ತಂಡ ಹೆಚ್ಚಿಸುವುದರ ಜೊತೆಗೆ ದಿನಕ್ಕೆ 10 ಸಾವಿರ ಮಂದಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ನಗರದಲ್ಲಿ 6 ರಿಂದ 7 ಸಾವಿರ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಹಾಸಿಗೆಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳನ್ನೇ ಕಾಯಿಸಿದ ಆಸ್ಪತ್ರೆ

ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆಗೆ ರಾಜ್ಯ ಸರ್ಕಾರ ಇನ್ನೂ 10 ಲಕ್ಷ ರಾರ‍ಯಪಿಡ್‌ ಆ್ಯಂಟಿಜನ್‌ ಕಿಟ್‌ಗಳ ಖರೀದಿಗೆ ಆದೇಶ ಮಾಡಿದೆ. ಆದರೆ, ಈ ಕಿಟ್‌ಗಳ ಮೂಲಕ ನಡೆದ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದ ಸಾಕಷ್ಟುಜನರಿಗೆ ಕೋವಿಡ್‌ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ (ಆರ್‌ಟಿಪಿಸಿಆರ್‌) ಪಾಸಿಟಿವ್‌ ಬಂದ ಪ್ರಕರಣಗಳು ವರದಿಯಾಗುತ್ತಿವೆ.

ಇದರಿಂದಾಗಿ ಸರ್ಕಾರ ಕೋಟ್ಯಾಂತರ ರು. ವೆಚ್ಚ ಮಾಡಿ ಖರೀಸುತ್ತಿರುವ ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ಗಳಿಂದ ಬರುವ ವರದಿ ಎಷ್ಟರ ಮಟ್ಟಿಗೆ ನಿಖರ ಅಥವಾ ಸ್ಪಷ್ಟಎಂಬ ಬಗ್ಗೆ ಅನುಮಾನ ಸೃಷ್ಟಿಸಿದೆ.

PREV
click me!

Recommended Stories

Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!